ಪತ್ನಿ ತಂಬಾಕು ಅಗಿಯುತ್ತಾಳೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದೇ? ಬಾಂಬೆ ಹೈಕೋರ್ಟ್ ಹೇಳಿದ್ದೇನು?

bombay high court

ಮುಂಬೈ(18-02-2021): ವಿಚ್ಛೇದನಕ್ಕೆ ಮಹಿಳೆಯೊಬ್ಬಳು ತಂಬಾಕು ಅಗಿಯುತ್ತಾಳೆ ಎನ್ನುವ ಕಾರಣ ಸಾಕಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನಾಗ್ಪುರ ನಿವಾಸಿಯೊಬ್ಬರು ಸಲ್ಲಿಸಿದ ವಿವಾಹ ವಿಚ್ಛೇದನ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ.ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ವಿಭಾಗೀಯ ಪೀಠವು 42 ವರ್ಷ ವಯಸ್ಸಿನ ದಂಪತಿಗಳು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದೆ. ತಂಬಾಕು ಅಗಿಯುವ ಅಭ್ಯಾಸಕ್ಕೆ ಸಂಬಂಧಿಸಿದಂತೆ ವಿಚ್ಛೇದನದ ಸುಗ್ರೀವಾಜ್ಞೆಯನ್ನು ನೀಡಲು ಆಗುವುದಿಲ್ಲ ಎಂದು ನ್ಯಾಯಪೀಠ ಮನವಿಯನ್ನು ತಳ್ಳಿಹಾಕಿದೆ. ಬೌದ್ಧ ವಿಧಿಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಜೂನ್ … Read more

ಪ್ರತಿಭಟಿಸುವ ಹಕ್ಕು ಎಲ್ಲಾ ಸಮಯದಲ್ಲಿ ಮತ್ತು ಎಲ್ಲೆಡೆ ಇರಲು ಸಾಧ್ಯವಿಲ್ಲ-ಸುಪ್ರೀಂಕೋರ್ಟ್

protest

ನವದೆಹಲಿ(13-02-2021): ಪ್ರತಿಭಟಿಸುವ ಹಕ್ಕು ಎಲ್ಲಾ ಸಮಯದಲ್ಲಿ ಮತ್ತು ಎಲ್ಲೆಡೆ ಇರಬಾರದು, ಅದು ಕೆಲವು ಕರ್ತವ್ಯಗಳನ್ನು ಹೊಂದಿದೆ ಎಂದು ಭಾರತದ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವಿಚಾರದಲ್ಲಿ ಸಾರ್ವಜನಿಕ ಹೆದ್ದಾರಿ ಬಳಕೆ ಕುರಿತಂತೆ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದೆ. ಈ ಕುರಿತ ಮೊದಲ ತೀರ್ಪನ್ನು ಎತ್ತಿ ಹಿಡಿದ  ನ್ಯಾಯಪೀಠ, ಸಾಂವಿಧಾನವು ಪ್ರತಿಭಟಿಸುವ ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಕೊಟ್ಟಿದೆ. ಆದರೆ … Read more

ಕೋವಿಡ್ ರೋಗಿಗಳ ಐಡೆಂಟಿಟಿ ಬಹಿರಂಗ: ಸುಪ್ರೀಂ ಪೀಠ ಮಹತ್ವದ ಸೂಚನೆ

high court

ನವದೆಹಲಿ(09-12-2020):  ಕೋವಿಡ್ ರೋಗಿಗಳ ಮನೆಮುಂದೆ ಪೋಸ್ಟರ್ ಅಂಟಿಸಬಾರದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಸುಪ್ರೀಂಕೋರ್ಟ್ ನ ಜಸ್ಟೀಸ್ ಅಶೋಕ್ ಭೂಷಣ್, ಜಸ್ಟೀಸ್ ಆರ್. ಸುಭಾಶ್ ರೆಡ್ಡಿ ಹಾಗೂ ಜಸ್ಟೀಸ್ ಎಂ.ಆರ್.ಶಾ ನೇತೃತ್ವದ ತ್ರಿಸದಸ್ಯ ಪೀಠ ಸೂಚನೆ ನೀಡಿದೆ. ಅಧಿಕಾರಿಗಳು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾಗ ಮಾತ್ರ ರಾಜ್ಯ ಸರ್ಕಾರ ಇಂತಹ ಪೋಸ್ಟರ್ ಗಳನ್ನು ಅಂಟಿಸಬಹುದಾಗಿದೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ. ಕೋವಿಡ್ ಸೋಂಕಿತರ ಮನೆಯ ಮುಂದೆ ಪೋಸ್ಟರ್ ಅಂಟಿಸುವುದು ತಾರತಮ್ಮಕ್ಕೆ ಕಾರಣವಾಗಲಿದೆ ಎಂದು ಸುಪ್ರೀಂಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ … Read more

“ರಾಮ್‌ ನಾಮ್‌ ಸತ್ಯ ಹೇ” ಏನಿದು ಯೋಗಿಯ ಹೊಸ ಪ್ರಯಾಣ?

yogi adithyanath

ಜೌನ್‌ಪುರ (01-11-2020): ಹೆಣ್ಣು ಮಕ್ಕಳಿಗೆ ಗೌರವ ನೀಡದೆ ಇದ್ದರೆ ರಾಮ್‌ ನಾಮ್‌ ಸತ್ಯ ಹೇ… ಪ್ರಯಾಣ ಆರಂಭವಾಗಲಿದೆ ಎಂದೂ ಯೋಗಿ ಆದಿತ್ಯನಾಥ್ ಹೇಳಿಕೆ ಕೊಟ್ಟಿದ್ದಾರೆ. ವಿವಾಹಕ್ಕಾಗಿ ಮತಾಂತರಗೊಳ್ಳುವುದನ್ನು ಒಪ್ಪಲಾಗದು ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಬಗ್ಗೆ ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ್ ಲವ್‌ ಜೆಹಾದ್‌ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಲವ್‌ ಜಿಹಾದ್‌ನಲ್ಲಿ ಭಾಗಿಯಾದವರ ಪೋಸ್ಟರ್‌ಗಳನ್ನು ಎಲ್ಲೆಡೆ ಅಂಟಿಸಲಾಗುವುದು. ಹೆಸರು, ಗುರುತನ್ನು ಮರೆಮಾಚಿ ಹೆಣ್ಣುಮಕ್ಕಳ ಘನತೆಯೊಂದಿಗೆ ಆಟವಾಡುವವರಿಗೆ ನಾನು ಎಚ್ಚರಿಕೆ ನೀಡುತ್ತೇನೆಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.  

ವಿವಾಹಕ್ಕಾಗಿ ಮತಾಂತರ ಸ್ವೀಕಾರಾರ್ಹವೇ?

marriege

ಅಲಹಾಬಾದ್(31-10-2020): ವಿವಾಹಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಅಂತರ್ ಧರ್ಮೀಯ ವಿವಾಹ ಮಾಡಿಕೊಂಡ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ, ಅರ್ಜಿ ವಿಚಾರಣೆ ನಡೆಸಿ, ಮುಸ್ಲಿಂ ಮಹಿಳೆ ಮದುವೆಗೆ ಒಂದು ತಿಂಗಳ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದರಿಂದ ಮದುವೆಗಾಗಿ ಮತಾಂತರ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಿದ್ದಾರೆ. 2014 ರಲ್ಲಿ ನಡೆದ ಇಂತಹದೇ ಮತ್ತೊಂದು ಪ್ರಕರಣವನ್ನು … Read more