ಪತ್ರಕರ್ತ ಸಿದ್ಧೀಖ್ ಕಪ್ಪನ್ ನಿಂದ ಜಾಮೀನು ಅರ್ಜಿ ಸಲ್ಲಿಕೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಸೆರೆಯಾಗಿರುವ ಪತ್ರಕರ್ತ ಸಿದ್ಧೀಕ್ ಕಪ್ಪನ್ ಜಾಮೀನು ಅರ್ಜಿ ಸಲ್ಲಿಸಿದ್ಧಾರೆ.‍ ಜಾಮೀನಿಗಾಗಿ ಅವರು ಮಥುರಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. [BREAKING] Kerala journalist Siddique Kappan moves Mathura court for bail; claims allegations in FIR "fabricated, manipulated" report by @DebayonRoy#SiddiqueKappan #UAPA #Sedition https://t.co/kBNnAIl8MX — Bar & Bench (@barandbench) June 1, 2021 ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆಯೆಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.  ಯಾವುದೇ ಪುರಾವೆಗಳಿಲ್ಲದೇ ತನ್ನ ಮೇಲೆ ಗಂಭೀರ … Read more

ತೆಹಲ್ಕಾ ಪತ್ರಕರ್ತ ತರುಣ್ ತೇಜ್ ಪಾಲ್ ಖಲಾಸೆ

ಪಣಜಿ: ಪತ್ರಕರ್ತ, ತೆಹಲ್ಕಾ ನಿಯತಕಾಲಿಕದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅತ್ಯಾಚಾರ ಆರೋಪದಲ್ಲಿ ಖುಲಾಸೆಗೊಂಡಿದ್ದಾರೆ. 2013 ರಲ್ಲಿ ಉತ್ತರ ಗೋವಾದ ಪಂಚತಾರಾ ಹೋಟೆಲಿನಲ್ಲಿ ತೆಹಲ್ಕಾ ವತಿಯಿಂದ ಕಾರ್ಯಕ್ರಮವೊಂದು ನಡೆದಿತ್ತು. ಆ ವೇಳೆಯಲ್ಲಿ ತರುಣ್ ತನ್ನ ಮಹಿಳಾ ಸಹೋದ್ಯೋಗಿಯೊಬ್ಬರ ಮೇಲೆ ಲಿಫ್ಟ್ ನೊಳಗೆ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಪೋಲೀಸರು ತರುಣ್ ವಿರುದ್ಧ ಸುಮೊಟೋ ಸೇರಿದಂತೆ ಹಲವಾರು ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇದೀಗ ಎಂಟು ವರ್ಷಗಳ ಬಳಿಕ, ಗೋವಾದ ಸೆಷನ್ಸ್ ನ್ಯಾಯಾಲಯವು ತರುಣ್ ಅವರು ನಿರ್ದೋಷಿ ಎಂದು ಹೇಳಿ ತೀರ್ಪು … Read more

ಪತ್ರಕರ್ತ ಸಿದ್ದೀಖ್ ಕಪ್ಪ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ | ಪತ್ರಕರ್ತನನ್ನು ಹಾಸಿಗೆ ಕಟ್ಟಿ ಹಾಕಲಾಗಿದ್ದು ಶೌಚಕ್ಕೂ ಅವಕಾಶವಿಲ್ಲವೆಂದು ಕುಟುಂಬಸ್ಥರ ಆರೋಪ

ನವದೆಹಲಿ: ಉತ್ತರ ಪ್ರದೇಶದ ಪೋಲೀಸರಿಂದ ಬಂಧನಕ್ಕೊಳಗಾಗಿರುವ ಕೇರಳ ಮೂಲದ ಪತ್ರಕರ್ತನ ವಿಚಾರದಲ್ಲಿ ತುರ್ತಾಗಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಆತನ ವಕೀಲರು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಪತ್ರಕರ್ತ ಸಿದ್ಧೀಖ್ ಕಪ್ಪನ್ ಗೆ ಕೋವಿಡ್ ಬಾಧಿಸಿದ್ದು, ಸದ್ಯ ಮಥುರಾದ ಕೆಎಮ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆತನನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತ್ತಿದ್ದು, ಸಂಕೋಲೆಗಳಿಂದ ಹಾಸಿಗೆಗೆ ಕಟ್ಟಿ ಹಾಕಲಾಗಿದೆ. ಶೌಚಾಲಯಕ್ಕೆ ಹೋಗಲೂ ಅನುಮತಿ ನೀಡುತ್ತಿಲ್ಲ ಎಂದು ಸಿದ್ದೀಖ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪವನ್ನು ಯುಪಿ ಪೋಲೀಸರು ನಿರಾಕರಿಸಿದ್ದು, ಆತನಿಗೆ … Read more

ರವಿ ಬೆಳಗೆರೆ ಇನ್ನಿಲ್ಲ

ravi belagere

ಬೆಂಗಳೂರು(13-11-2020): ಖ್ಯಾತ ಪತ್ರಕರ್ತ, ಬರಹಗಾರ, ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಇಂದು ನಿಧನರಾಗಿದ್ದಾರೆ. 62 ವರ್ಷದ ರವಿ ಬೆಳಗೆರೆ ತಡರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇವರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನಾ, ಭಾವನಾ, ಕರ್ಣ ಹಾಗೂ ಹಿಮವಂತ ಸೇರಿ ಅಪಾರ ಬಂಧು-ಬಳಗ ಅಭಿಮಾನಿಗಳನ್ನೂ ಅಗಲಿದ್ದಾರೆ.

ರಾಮ್ ಮಂದಿರ ವಿಚಾರದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಪತ್ರಕರ್ತ ರಿಲೀಸ್

journalist

ಲಕ್ನೋ(22-10-2020): ರಾಮ್ ಮಂದಿರ ವಿಚಾರದಲ್ಲಿ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ನ್ಯಾಯಪೀಠ ಬುಧವಾರ ಬಂಧಿತ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿ ಎ ಆರ್ ಮಸೂಡಿ ಅವರ ನ್ಯಾಯಪೀಠವು ಕನೋಜಿಯಾ ಅವರ ಜಾಮೀನು ಅರ್ಜಿಯ ಆದೇಶವನ್ನು ಹೊರಡಿಸಿದೆ. ಅರ್ಜಿದಾರರು ತಾನು ನಿರಪರಾಧಿ ಎಂದು ಮನವಿ ಮಾಡಿಕೊಂಡಿದ್ದರು. ಕನೋಜಿಯಾ ಅವರನ್ನು ಉತ್ತರ ಪ್ರದೇಶ ಪೊಲೀಸರು ಆಗಸ್ಟ್ 18 ರಂದು ದೆಹಲಿಯಿಂದ ಬಂಧಿಸಿದ್ದರು. ಆಗಸ್ಟ್ 17 ರಂದು … Read more

ಹತ್ರಾಸ್ ಮಾರ್ಗ ಮಧ್ಯೆ ಬಂಧಿತ ಪತ್ರಕರ್ತ ಸೇರಿದಂತೆ CFI ನಾಯಕರ ಮೇಲೆ UAPA, ದೇಶದ್ರೋಹದಡಿ ಪ್ರಕರಣ ದಾಖಲು|

pfi

ಲಖನೌ (07-10-2020): ಹತ್ರಾಸ್‌ಗೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಬಂಧಿಸಿರುವ ಕೇರಳದ ಪತ್ರಕರ್ತ ಮತ್ತು ಇತರ ಮೂವರು ಸಿಎಫ್ ಐ ನಾಯಕರ ಮೇಲೆ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಯುಎಪಿಎಯಡಿ ಪ್ರಕರಣವನ್ನು ದಾಖಲಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ. ಪೊಲೀಸರು ಯುಎಪಿಎಯ ಸೆಕ್ಷನ್ 17 ನ್ನು ದಾಖಲಿಸಿದ್ದಾರೆ. ಇದು “ಭಯೋತ್ಪಾದಕ ಕೃತ್ಯಕ್ಕಾಗಿ ಹಣವನ್ನು ಸಂಗ್ರಹಿಸುವುದನ್ನು ಹೇಳುತ್ತದೆ. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಪರಿಶಿಷ್ಟ ಜಾತಿಯ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆಯಲ್ಲಿ ಪತ್ರಕರ್ತ ಸಿದ್ದೀಕ್ … Read more