ಸಂಪೂರ್ಣವಾಗಿ ಲಸಿಕೆ ಪಡೆದು ಕೊಂಡವರಿಗೆ ಮಾಸ್ಕ್ ಬೇಡ, ದೈಹಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿಲ್ಲ! ಅಮೇರಿಕಾದಲ್ಲಿ ಮಹತ್ವದ ತೀರ್ಮಾನ….

ವಾಷಿಂಗ್ಟನ್, ಡಿಸಿ: ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದುಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂಬ ತೀರ್ಮಾನವನ್ನು ಅಮೇರಿಕಾ ಕೈಗೊಂಡಿದೆ. ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದುಕೊಂಡವರು ಸಾರ್ವಜನಿಕ ಸ್ಥಳದಲ್ಲಾಗಲೀ, ಒಳಾಂಗಣದಲ್ಲಾಗಲೀ ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ. ಅದೇ ರೀತಿ ದೈಹಿಕ ಅಂತರವನ್ನೂ ಕಾಪಾಡಿಕೊಳ್ಳಬೇಕಿಲ್ಲ ಎಂಬ ತೀರ್ಮಾನವನ್ನು ಅಮೇರಿಕಾದ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ (CDC) ತೆಗೆದುಕೊಂಡಿದೆ. ಆದರೆ ಶರೀರದಲ್ಲಿ ರೋಗ ಪ್ರತಿರೋಧ ಶಕ್ತಿ ಕಡಿಮೆಯುಳ್ಳವರು ಮಾಸ್ಕ್ ಧರಿಸುವುದನ್ನು ಮುಂದುವರಿಸಿದರೆ ಉತ್ತಮ ಎಂದೂ ಸಲಹೆ ನೀಡಿದೆ. ಅಂಥವರು ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ಸೂಚಿಸಿದೆ. ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಈ ತೀರ್ಮಾನವನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ … Read more

ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಜೊತೆಗೆ ನಡೆಸಿದ ಕೊರೊನಾ ಪರಿಸ್ಥಿತಿ ಮಾತುಕತೆ ಫಲಪ್ರದವಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿದ್ದೇನೆ.
ಎರಡೂ ದೇಶಗಳಲ್ಲಿ ವಿಕಸಿಸುತ್ತಿರುವ COVID ಪರಿಸ್ಥಿತಿಯನ್ನು ನಾವು ವಿವರವಾಗಿ ಚರ್ಚಿಸಿದ್ದೇವೆ.
ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಅಧ್ಯಕ್ಷ ಬಿಡನ್ ಅವರಿಗೆ ಧನ್ಯವಾದ ಅರ್ಪಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಏರಿಕೆ ಕಾಣುತ್ತಿರುವ ಮಧ್ಯೆ ಇಂದು ದೇಶದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ಫೋನ್ ಪರಸ್ಪರ ಸಂಭಾಷಣೆ ನಡೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ನಾನು ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ಮತ್ತು COVID-19 ವಿರುದ್ಧದ ಹೋರಾಟದಲ್ಲಿ ತುರ್ತು ನೆರವು ಮತ್ತು ಸಂಪನ್ಮೂಲಗಳನ್ನು ಒದಗಿಸಲು ಅಮೆರಿಕದ ಸಂಪೂರ್ಣ ಬೆಂಬಲವನ್ನು ಪ್ರತಿಜ್ಞೆ ಮಾಡಿದೆ.
ಭಾರತ ನಮಗಾಗಿ ಇತ್ತು, ಮತ್ತು ನಾವು ಅವರಿಗಾಗಿ ಇರುತ್ತೇವೆ” ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷರ ಜೊತೆಗಿನ ಮಾತುಕತೆಯಲ್ಲಿ ಲಸಿಕೆಯ ಕಚ್ಚಾವಸ್ತು ಮತ್ತು ಔಷಧಿಗಳ ನಯವಾದ ಮತ್ತು ಪರಿಣಾಮಕಾರಿ ಪೂರೈಕೆಯ ಬಗ್ಗೆಯೂ ಸಂಭಾಷಣೆಯಲ್ಲಿ ಚರ್ಚಿಸಲಾಯ್ತು ಎಂದು ಮೋದಿ ತಿಳಿಸಿದ್ದಾರೆ.

ಜೋ ಬಿಡೆನ್ ಕಾಲಿಗೆ ಗಾಯ| ಅಮೆರಿಕದ ನೂತನ ಅಧ್ಯಕ್ಷರಿಗೆ ಆಗಿದ್ದೇನು?

ವಾಷಿಂಗ್ಟನ್(30-11-2020): ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಕಾಲಿಗೆ ನಾಯಿಯ ಜೊತೆ ಆಟವಾಡುವಾಗ ಗಾಯವಾಗಿದೆ. ನಿನ್ನೆ ತಡ ರಾತ್ರಿ ನಾಯಿಯ ಜೊತೆಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ತೀವ್ರ ಗಾಯ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅವರ ಬಲಗಾಲಿನ ಪಾದದ ಮೇಲೆ ಸೀಳು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅವರು ನಡೆಯಲು ಅನುಕೂಲವಾಗುವ ಬೂಟುಗಳನ್ನು ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಜೋಬಿಡನ್ ಗಾಯವಾಗಿರುವುದನ್ನು ತಿಳಿಯುತ್ತಿದ್ದಂತೆ ಟ್ರಂಪ್ ಅವರು ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.

ಚುನಾವಣೆಯಲ್ಲಿ ನಾನೇ ಗೆದ್ದಿರೋದು: ಡೊನಾಲ್ಡ್ ಟ್ರಂಪ್ ಪುನರುಚ್ಛಾರ

ವಾಷಿಂಗ್ ಟನ್(16/11/2020): ಚುನಾವಣೆಯಲ್ಲಿ ಗೆದ್ದಿರುವುದು ನಾನು ಎಂದು ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. ತಮ್ಮ ಫೇಸ್ಬುಕ್ ಪೇಜಲ್ಲಿ ಟ್ರಂಪ್ I WON THE ELECTION ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಸೋಲನ್ನು ನಿರಾಕರಿಸಿದ್ದಾರೆ. ಜೋ ಬೈಡೆನ್ ಗೆಲುವು ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಳ್ಳಿ ಹಾಕಿದ ಬಳಿಕವೂ ಟ್ರಂಪ್ ಸೋಲನ್ನು ಒಪ್ಪಿಕೊಳ್ಳುವುದನ್ನು ನಿರಾಕರಿಸಿದ್ದಾರೆ. ಚುನಾವಣಾ ಅಕ್ರಮದ ಮೂಲಕ ಜೋ ಬೈಡನ್ ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು. ಈ ನಡುವೆ ಟ್ರಂಪ್ ಅಭಿಮಾನಿಗಳು … Read more

ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಗೆ ಎ.ಪಿ.ಉಸ್ತಾದರಿಂದ ಅಭಿನಂದನೆ

a.p usthad

ಕಾರಂದೂರು(08/11/2020); ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್  ಅವರಿಗೆ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದ್ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅಮೆರಿಕದ  ಭರವಸೆಯಿಂದ ಕೂಡಿದ ಭವಿಷ್ಯದ ಶುಭ ಸುದ್ದಿಗಳನ್ನು ಕೇಳಲು ನಾನು ಕಾತರನಾಗಿದ್ದೇನೆ. ಮಿಸ್ಟರ್ ಜೋ ಬಿಡನ್ ಅವರ ಮೇಲೆ ವಿಶ್ವದ ಕೋಟ್ಯಂತರ ಮಂದಿ ಭರವಸೆ ಇಟ್ಟಿದ್ದಾರೆ. ಅಮೆರಿಕ ಮತ್ತು  ಅಲ್ಲಿಯ ಜನತೆಗೆ ಶುಭವಾಗಲಿ. ಅಲ್ಲಿ ಸಹಿಷ್ಣುತೆ, ಅಂತಾರಾಷ್ಟ್ರೀಯ ಸಹಕಾರ, ಮಾನವೀಯತೆ ನೆಲೆಗೊಳ್ಳಲು ಬ್ರಿಡೆನ್ ಕಾರಣವಾಗಲಿ ಎಂದು ಅವರು ಹಾರೈಸಿದ್ದಾರೆ. … Read more