2025 ವೇಳೆಯಲ್ಲಿ ಜಗತ್ತಿನ ಹತ್ತರಲ್ಲಿ ಆರು ಮಂದಿಗೆ ಉದ್ಯೋಗ ನಷ್ಟ | ಕಾರಣವೇನು ಗೊತ್ತೇ?

ಜಿನೀವಾ: 2025 ರ ವೇಳೆಯಲ್ಲಿ ಜಗತ್ತಿನ ಹತ್ತರಲ್ಲಿ ಆರು ಮಂದಿಯು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ (WEF) ಸಿದ್ಧಪಡಿಸಿದ ವರದಿ ತಿಳಿಸಿದೆ. ಮನುಷ್ಯರು ಮತ್ತು ಯಂತ್ರಗಳು ಸಮಾನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ತೊಡಗುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ. ವಿಶ್ವದ ಹತ್ತೊಂಭತ್ತು ದೇಶಗಳ 32000 ಉದ್ಯೋಗಿಗಳ ಮೇಲೆ ನಡೆಸಲಾದ ಸಮೀಕ್ಷೆಯ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಸುಮಾರು ನಲ್ವತ್ತು ಶೇಕಡಾ ಮಂದಿಯು ಇನ್ನೊಂದು ಐದು ವರ್ಷಗಳಲ್ಲಿ ತಮ್ಮ ಉದ್ಯೋಗವು ನಷ್ಟಗೊಳ್ಳಬಹುದೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಐವತ್ತಾರು ಶೇಕಡಾ ಜನರು ಭವಿಷ್ಯದಲ್ಲಿ … Read more

ಶಿಕ್ಷಕರಾಗ ಬಯಸುವವರಿಗೆ ಶಿಕ್ಷಣ ಸಚಿವರಿಂದ ಸಿಹಿ ಸುದ್ದಿ

ಬೆಂಗಳೂರು(17/11/2020): ಶಿಕ್ಷರಾಗಲು ಬಯಸುವವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿಹಿ‌ ಸುದ್ದಿ ನೀಡಿದ್ದಾರೆ.   ಫ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವಂತೆ ಆದೇಶ ನೀಡಿದ್ದಾರೆ.   ಆದ್ಯತೆಯ ಮೇರೆಗೆ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿದೆ.

ಕಫಾಲ ಸ್ಫಾನ್ಸರ್ ಶಿಫ್ ವ್ಯವಸ್ಥೆಗೆ ಮಹತ್ವದ ಸುಧಾರಣೆ ತಂದ ಸೌದಿ ಅರೇಬಿಯಾ

  ರಿಯಾದ್ (04/11/2020): ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ವಿದೇಶಿ ವಲಸೆ ಕಾರ್ಮಿಕರು ತಮ್ಮ ಸ್ಪಾನ್ಸರ್‌ಶಿಪ್ಪನ್ನು ಓರ್ವ ಮಾಲಕ ನಿಂದ ಇನ್ನೋರ್ವ ಮಾಲಕನಿಗೆ ವರ್ಗಾಯಿಸುವ ಮೂಲಕ ಬೇರೆ ಕಡೆ ಕೆಲಸ ಮಾಡಬಹುದಾಗಿದೆ ಎಂದು ಸೌದಿ ಅರೇಬಿಯಾ ಇಂದು ಘೋಷಿಸಿದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ಅವರ ಮಾಲಕರ ಅಧೀನದಲ್ಲಿ ಉಳಿಸಿಕೊಳ್ಳುವ ನಿರ್ಬಂಧಗಳನ್ನು ಹೊಸ ಕಾನೂನು ಸುಧಾರಣೆಯ ಮೂಲಕ ತೆಗೆದುಹಾಕಲಾಗಿದೆ ಎಂದು ಮಾನವ ಸಂಪನ್ಮೂಲಗಳು ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಮಾಲಕರ ಅನುಮತಿಯಿಲ್ಲದೆ ಸೌದಿ … Read more

ಕತರ್: ಆಯ್ದ ದೇಶಗಳಿಂದ ಉದ್ಯೋಗ ವೀಸಾ ಮೂಲಕ ಬರಲು ಅನುಮತಿ

oman air

ಕತರಿನಲ್ಲಿ ಕೊರೋನಾ ಸಮಯದಲ್ಲಿ ಹೊಸದಾಗಿ ಉದ್ಯೋಗ ವೀಸಾ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಅಗತ್ಯತೆ ಕಂಡು ಬಂದಿರುವುದರಿಂದಲೂ, ಕತರಿನಲ್ಲಿ ಕೊರೋನಾ ರೋಗವು ನಿಯಂತ್ರಣಕ್ಕೆ ಬಂದಿರುವುದರಿಂದಲೂ ಹೊಸದಾಗಿ ಉದ್ಯೋಗ ವೀಸಾ ನೀಡಲು ಆರಂಭಿಸಲಾಗಿದೆ. ಆದರೆ ಸದ್ಯಕ್ಕೆ ಆಫ್ರಿಕಾದ ದೇಶಗಳಿಂದ ಮಾತ್ರವೇ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುಮತಿ ಲಭಿಸಿದೆ. ನಿನ್ನೆ ತಾನೇ ಕೀನ್ಯಾ ದೇಶದಿಂದ ಮೂವತ್ತು ಮಂದಿ ಹೊಸ ಉದ್ಯೋಗಾಕಾಂಕ್ಷಿಗಳು ದೋಹಾ ತಲುಪಿದರು. ಕಿನ್ಯಾ ಮಾತ್ರವಲ್ಲದೇ, ವಿವಿಧ ಆಫ್ರಿಕನ್ ದೇಶಗಳಿಂದ ಮುನ್ನೂರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ವೀಸಾದಡಿಯಲ್ಲಿ ಬರಲು … Read more

10ನೇ ತರಗತಿಯಾದವರಿಗೆ ವಿವಿಧ ಹುದ್ದೆಗಳು: ಇಂದೇ ಅರ್ಜಿ ಸಲ್ಲಿಸಿ

job

ನವದೆಹಲಿ(08-10-2020): ಕೊಚ್ಚಿನ್ ಶಿಪ್‌ಯಾರ್ಡ್ನಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಿವಿಧ ಹುದ್ದೆಗಳಾದ ಶೀಟ್ ಮೆಟಲ್ ವರ್ಕರ್, ವೆಲ್ಡರ್ ಫಿಟ್ಟರ್, ಮೆಕ್ಯಾನಿಕ್ ಡೀಸೆಲ್, ಮೆಕ್ಯಾನಿಕ್ ಮೋಟಾರು ವಾಹನ, ಡಿಸೈನರ್, ಎಲೆಕ್ಟ್ರಿಶಿಯನ್ ಹಾಗೂ ಕ್ರೇನ್ ಆಪರೇಟರ್ ಸೇರಿದಂತೆ ಅನೇಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 30 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿದಾರರು 10ನೇ ತರಗತಿ ಉತ್ತೀರ್ಣರಾಗಿರಬೇಕು.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು cochinshipyard.com ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅ.10ರ ಒಳಗೆ … Read more

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ; 8,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

army school

ನವದೆಹಲಿ(07-10-2020): ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ 8,000 ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಕುರಿತು ಆರ್ಮಿ ಪಬ್ಲಿಕ್ ಶಾಲೆ ಪ್ರಕಟಣೆ ಹೊರಡಿಸಿದ್ದು, ಸಿಬಿಎಸ್ ಇನಿಂದ ಅನುಮೋದಿತ ದೇಶದ ವಿವಿಧ ಭಾಗಗಳಲ್ಲಿನ 137 ಆರ್ಮಿ ಪಬ್ಲಿಕ್ ಶಾಲೆಗಳಲ್ಲಿ ಖಾಲಿ ಇರುವ 8,000 ಶಿಕ್ಷಕರ ನೇಮಕಕ್ಕೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದೆ. ಅರ್ಜಿದಾರರು ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಪದವಿ ಶಿಕ್ಷಣವನ್ನು ಪಡೆದಿರಬೇಕು.https://aps-csb.in/ ಲಿಂಕ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. … Read more