ಅಧಿಕಾರ ವಹಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಮುಸ್ಲಿಮರ ಪ್ರಯಾಣ ನಿಷೇಧದ ತೆರವು ಸೇರಿದಂತೆ 17 ಮಹತ್ವದ ಆಜ್ಞಾಪನೆಗಳಿಗೆ ಸಹಿ ಹಾಕಿದ ಜೋ ಬಿಡೆನ್

bieden

ಅಮೆರಿಕಾ(21-01-2021): ಜೋ ಬಿಡೆನ್ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಮುಸ್ಲಿಮರಿಗೆ ವಿಧಿಸಿದ್ದ ಪ್ರಯಾಣ ನಿಷೇಧವನ್ನು ವಾಪಾಸ್ಸು ತೆಗೆದುಕೊಂಡಿದ್ದಾರೆ. ಹಲವಾರು ಪ್ರಮುಖ ಮುಸ್ಲಿಂ ಮತ್ತು ಆಫ್ರಿಕನ್ ದೇಶಗಳಿಂದ ತೆರಳದಂತೆ ಅಮೆರಿಕಕ್ಕೆ ಪ್ರಯಾಣ ನಿರ್ಬಂಧವನ್ನು ಟ್ರಂಪ್ ವಿಧಿಸಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ, ಬಿಡೆನ್ 17 ಕಾರ್ಯನಿರ್ವಾಹಕ ಆದೇಶಗಳ ಜ್ಞಾಪಕ ಪತ್ರಗಳಿಗೆ ಸಹಿ ಹಾಕಿದ್ದಾರೆ. ನಿರ್ಬಂಧಿತ ದೇಶಗಳ ವ್ಯಕ್ತಿಗಳಿಗೆ ವೀಸಾ ಪ್ರಕ್ರಿಯೆಯನ್ನು ಪುನರಾರಂಭಿಸಲು ಮತ್ತು ನಿಷೇಧದಿಂದಾಗಿ ಉಂಟಾದ ಹಾನಿಗೆ ಸ್ಪಂದಿಸುವಂತೆ  ಜೋ ಬಿಡೆನ್ ಸೂಚಿಸಿದ್ದಾರೆ. … Read more

ಅಮೆರಿಕಾದಲ್ಲಿ ಅಂತ್ಯದತ್ತ ಟ್ರಂಪ್ ಆಡಳಿತ| ಶ್ವೇತ ಭವನದತ್ತ ಬಿಡೆನ್

jo biden

ನವದೆಹಲಿ(05-11-2020): ಯುಎಸ್ ಡೆಮಕ್ರೆಟಿಕ್ ಪಕ್ಷದ ಜೋ ಬಿಡೆನ್ ಬುಧವಾರ ತಡರಾತ್ರಿ ಮಿಚಿಗನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳನ್ನು ಗೆದ್ದರು ಮತ್ತು ಶ್ವೇತಭವನವನ್ನು ವಶಪಡಿಸಿಕೊಳ್ಳಲು ಒಂದು ಇಂಚು ಮುಂದಕ್ಕೆ  ತೆರಳಿದ್ದಾರೆ. ದೂರದರ್ಶನ ಭಾಷಣವೊಂದರಲ್ಲಿ, ಬಿಡೆನ್ ತನ್ನ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, ತಾನು ವಿಜಯಕ್ಕಾಗಿ ಹೆಚ್ಚು ಮತಗಳನ್ನು ಹೊಂದಿದ್ದೇನೆ. ನಾವು ಶರಣಾಗುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ವರದಿ  ಪ್ರಕಾರ, ಟ್ರಂಪ್ 214 ಮತಗಳನ್ನು ಮತ್ತು ಬಿಡೆನ್ 253 ಮತಗಳನ್ನು ಹೊಂದಿದ್ದಾರೆ. ಬಿಡೆನ್ ಗೆಲುವಿನ ಹೊಸ್ತಿಲಲ್ಲಿದ್ದು, ಟ್ರಂಪ್ ಆಡಳಿತ ಅಮೆರಿಕಾದಲ್ಲಿ ಬಹುತೇಖ … Read more

ಟ್ರಂಪ್ ವಿಧಿಸಿದ ಮುಸ್ಲಿಂ ನಿಷೇಧವನ್ನು ರದ್ದುಪಡಿಸುವ ಭರವಸೆ ನೀಡಿದ ಜೋ ಬಿಡನ್

biden

ಯುಎಸ್(17-10-2020):ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಮುಸ್ಲಿಂ ಅಮೆರಿಕನ್ನರನ್ನು ತಮ್ಮ ಆಡಳಿತದ ಪ್ರತಿಯೊಂದು ಸಾಮಾಜಿಕ ಮತ್ತು ರಾಜಕೀಯ ಅಂಶಗಳಲ್ಲೂ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ “ಮುಸ್ಲಿಂ ನಿಷೇಧ” ವನ್ನು ರದ್ದುಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಾಗರಿಕ ಹಕ್ಕುಗಳ ಸಂಘಟನೆಯಾದ ಮುಸ್ಲಿಂ ವಕೀಲರಿಗೆ ಗುರುವಾರ ನೀಡಿದ ವಿಡಿಯೋ ಸಂದೇಶದಲ್ಲಿ, ಯುಎಸ್ನಲ್ಲಿ ದ್ವೇಷದ ಅಪರಾಧಗಳು ಹೆಚ್ಚಾಗುತ್ತಿದೆ. ಇದರ ವಿರುದ್ಧ ಹೋರಾಡಲು ಶಾಸಕರನ್ನು ಸದನಕ್ಕೆ ಕಳುಹಿಸುವ ಭರವಸೆ ಬಿಡನ್ ನೀಡಿದರು. ಬಹುಮುಖ್ಯ ಆದೇಶಗಳ ಮೂಲಕ ಇರಾನ್ … Read more