ಕೋವಿಡ್ ಗೆದ್ದು, ಮತ್ತೆ ಜೈಲು ಕೋಣೆಗೆ ಸ್ಥಳಾಂತರಗೊಂಡ ಜೆಎನ್‍ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್

ನವದೆಹಲಿ: ಕೋವಿಡ್ ತಗುಲಿ ಚಿಕಿತ್ಸೆಯಲ್ಲಿದ್ದ ಜೆಎನ್‍ಯುವಿನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರೋಗ ಮುಕ್ತರಾಗಿದ್ದಾರೆ. ಇದೀಗ ಅವರನ್ನು ಮತ್ತೆ ಜೈಲು ಕೋಣೆಗೆ ಸ್ಥಳಾಂತರಿಸಲಾಗಿದೆ. ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸಂಚು ಹೂಡಿದ್ದಾರೆಂದು ಆರೋಪ ಹೊತ್ತುಕೊಂಡು ಜೈಲು ಪಾಲಾಗಿದ್ದ ಉಮರ್ ಖಾಲಿದಿಗೆ ವಾರಗಳ ಹಿಂದೆ ಕೋವಿಡ್ ತಗುಲಿತ್ತು. ಈ ಹಿನ್ನೆಲೆಯಲ್ಲಿ ಜೈಲು ಆವರಣದೊಳಗಿದ್ದ ಪ್ರತ್ಯೇಕ ನಿರೀಕ್ಷಣಾ ಕೊಠಡಿಗೆ ವರ್ಗಾಯಿಸಲಾಗಿತ್ತು. ವೈದ್ಯಕೀಯ  ಚಿಕಿತ್ಸೆ ಪಡೆದ ಅವರು, ಕೋವಿಡ್ ನಿಂದ ಮುಕ್ತರಾಗಿ ಮತ್ತೆ ಜೈಲು ಕೋಣೆಗೆ ಸ್ಥಳಾಂತರಗೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿವಿಧ ಕೇಸುಗಳನ್ವಯ ಬಂಧಿತರಾಗಿದ್ದ ಉಮರ್ ವಿರುದ್ಧವಾಗಿ … Read more