ಬಿಹಾರ ವಿಧಾನ ಸಭೆಗೆ ಆಯ್ಕೆಯಾದವರಲ್ಲಿ‌ ಅಪರಾಧ ಹಿನ್ನೆಲೆಯವರ ಅಂಕಿಅಂಶ ಬಹಿರಂಗ

ಹೊಸದೆಹಲಿ(11/11/2020): ಬಿಹಾರ ವಿಧಾನಸಭೆಯ ಫಲಿತಾಂಶ ಪ್ರಕಟಗೊಂಡಿದ್ದು, ಎನ್ ಡಿಎ ಬಹುಮತ ಪಡಿದಿದೆ. ಅದೇನಿದ್ದರೂ ಇದೀಗ ಅಲ್ಲಿ‌ ವಿಧಾನ ಸಭೆಗೆ ಆಯ್ಕೆಯಾದ ನೂತನ ಶಾಸಕರಲ್ಲಿ ಶೇ.68 ಮಂದಿ ಅಪರಾಧ ಹಿನ್ನೆಲೆಯವರು ಎಂಬ ಆಘಾತಕಾರಿ ಸುದ್ದಿಯನ್ನು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದೆ. ಬಿಹಾರದಲ್ಲಿ ವಿಧಾನ ಸಭೆಗೆ ಆಯ್ಕೆಯಾದ ಶೇ.68 ಮಂದಿ‌ ಅಪರಾಧಿ‌ ಹಿನ್ನೆಲೆಯನ್ನು ಹೊಂದಿದ್ದಾರೆ. ಶೇ. 81ಮಂದಿ ಕರೋಡ್ ಪತಿಗಳಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಬಿಹಾರ ಚುನಾವಣೆ; ಹಿಲ್ಸಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಬಿಹಾರದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ; ಎಷ್ಟು ಮತಗಳ ಅಂತರದಿಂದ ಅವರು ಜಯಿಸಿದ್ದಾರೆ ಗೊತ್ತೇ?*

ಪಾಟ್ನಾ(11/11/2020): ಬಿಹಾರದ ವಿಧಾನ ಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡು, ಎನ್ ಡಿಎ ಬಹುಮತ ಪಡೆದಿದ್ದರೂ ಈ ಬಾರಿಯ ಚುನಾವಣಾ ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿತ್ತು. ಎದುರಾಳಿಗಳು ಕಡಿಮೆ ಅಂತರದಿಂದ ಗೆದ್ದಿರುವುದು ಈ ಚುನಾವಣೆಯ ಇಂದು ವಿಶೇಷ ಎನ್ನಬಹುದು. ಅದರಲ್ಲೂ ಮುಖ್ಯವಾಗಿ ಹಿಲ್ಸಾ ವಿಧಾನ ಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಕೇವಲ 12 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇಷ್ಟು ಕಡಿಮೆ ಅಂತರದಲ್ಲಿ‌ ಜಯಿಸಿರುವುದು ಬಿಹಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ. ಜೆಡಿಯು ಅಭ್ಯರ್ಥಿ ಕೃಷ್ಣ ಮುರಾರಿ 61,848 … Read more