ಕೆಸರಿನಿಂದ ತುಂಬಿದ ಜನ್ನಘಟಾ ಗ್ರಾಮದ ರಸ್ತೆ| ಅಧಿಕಾರಿಗಳ ನಿರ್ಲಕ್ಷ್ಯ, ಗ್ರಾಮಸ್ಥರ ಆಕ್ರೋಶ

Jnanaghata village

ಕೋಲಾರ(28-10-2020): ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಜನ್ನಘಟಾ ಗ್ರಾಮದ ರಸ್ತೆ ಪರಿಸ್ಥಿತಿ ಹದಗೆಟ್ಟಿದ್ದು, ಅಧಿಕಾರಿಗಳು ನಿರ್ಲಕ್ಷ್ಯವನ್ನು ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. 2018-19ರಲ್ಲಿ ಈ ಕುರಿತು ಜನ್ನಘಟಾ ಗ್ರಾಮ ಪಂಚಾಯತ್ ಗೆ ರಸ್ತೆ ದುರಸ್ಥಿ ಮಾಡುವಂತೆ ಸ್ಥಳೀಯರು ಹಲವು ಬಾರಿ ಮನವಿಯನ್ನು ಮಾಡಿದ್ದಾರೆ. ಆದರೆ ಪಂಚಾಯತ್ ಅಧಿಕಾರಿಗಳು ಮಾತ್ರ ಭರವಸೆ ನೀಡಿ ನುಣುಚಿಕೊಂಡಿದ್ದು, ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಗ್ರಾಮದ ರಸ್ತೆಯಲ್ಲಿ ಮಳೆ ಎಂದರೆ ಜನರು ಹೊರಗೆ ಬರದಂತಾಗಿದೆ. ಶಾಲಾ-ಕಾಲೇಜುಗಳಿಗೂ ತೆರಳದಂತಾಗಿದೆ. ಗ್ರಾಮದ ಸಂಪರ್ಕ ರಸ್ತೆ ಕೆಸರಿನಿಂದ ತುಂಬಿಕೊಂಡಿದ್ದು, … Read more