ಆರ್ಟಿಕಲ್ 370 ರದ್ದು ಹೇಳಿಕೆ ವಿಚಾರ: ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ದಿಗ್ವಿಜಯ್ ಸಿಂಗ್

ನವದೆಹಲಿ: ಆರ್ಟಿಕಲ್ – 370 ರದ್ದು ಹಾಗೂ ಜಮ್ಮು-ಕಾಶ್ಮೀರದ ಕುರಿತು ‘ಕ್ಲಬ್ ಹೌಸ್’ ಎಂಬ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ‘ಆರ್ಟಿಕಲ್ 370 ರದ್ದುಗೊಳಿಸಿರುವುದು ಹಾಗೂ ಜಮ್ಮು-ಕಾಶ್ಮೀರದ ರಾಜ್ಯದ ಸ್ಥಾನವನ್ನು ಕಸಿದು ಕೇಂದ್ರಾಡಳಿತ ಪ್ರದೇಶ ವನ್ನಾಗಿ ಮಾಡಿರುವುದು ಬೇಸರದ ನಿರ್ಧಾರ. ಮೋದಿ ಸರ್ಕಾರದ ಅವಧಿ ಮುಗಿದು ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ವಿಷಯವಾಗಿ ಮರುಪರಿಶೀಲನೆ ನಡೆಸುವುದಾಗಿ ಹೇಳಿರುವುದು’ ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ರಾಷ್ಟ್ರೀಯತೆ … Read more

ಸೂಕ್ತ ಸಮಯದಲ್ಲಿ ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರಳಿ ನೀಡಲಾಗುವುದು-ಅಮಿತ್ ಶಾ

amith sha

ನವದೆಹಲಿ(13-02-2021): ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯತ್ವವನ್ನು ಮರಳಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಷಾ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ 2021 ಕ್ಕೆ ಮತ್ತು ಈ ಪ್ರದೇಶದ ರಾಜ್ಯತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಕೇವಲ ರಾಜಕೀಯದ ಸಲುವಾಗಿ ಇದನ್ನು ವಿರೋಧಿಸಬಾರದು ಎಂದು ಅವರು ವಿರೋಧ ಪಕ್ಷದ ಸದಸ್ಯರನ್ನು ಆಗ್ರಹಿಸಿದರು. ಕೇಂದ್ರ ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡದಿರುವ ಬಗ್ಗೆ ಮಸೂದೆಯಲ್ಲಿ … Read more

ಉದ್ಯಮ ಸ್ಥಾಪನೆಗೆ 3000 ಎಕರೆ ಭೂಮಿ ಕಾಯ್ದಿರಿಸಿದ ಜಮ್ಮು ಕಾಶ್ಮೀರ ಸರಕಾರ

  ಶ್ರೀನಗರ(31/2020): ಕೇಂದ್ರದ ಮೋದಿ ಸರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದವರು ಭೂಮಿ ಖರೀದಿಸಲು ಸಾಧ್ಯವಾಗುವ ನೂತನ ಭೂ ಕಾಯ್ದೆಯನ್ನು ಪರಿಚಯಿಸಿದ ಮೂರು ದಿನಗಳಲ್ಲಿಯೇ ಇಲ್ಲಿನ ಸರ್ಕಾರ ಸುಮಾರು 3000 ಎಕರೆ ಭೂಮಿಯನ್ನು ಉದ್ಯಮ ಸ್ಥಾಪನೆ ಉದ್ದೇಶಕ್ಕಾಗಿ ಕಾಯ್ದಿರಿಸಿದೆ ಎಂದು ವರದಿಯಾಗಿದೆ. ಈಗಾಗಲೇ ಈ ಸಂಬಂಧ ಜಮ್ಮು ಕಾಶ್ಮೀರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಭೂಮಿ ಹಸ್ತಾಂತರಿಸಲಾಗಿದೆ. ಅರಣ್ಯ ಇಲಾಖೆಯ ಸಮ್ಮತಿಯ ನಂತರ ಇಷ್ಟೇ ಪ್ರಮಾಣದ ಭೂಮಿ ಹಸ್ತಾಂತರ ಕುರಿತು ಅಧಿಸೂಚನೆ ಹೊರಬೀಳಲಿದೆ ಎನ್ನುತ್ತಾರೆ ಅಧಿಕಾರಿಗಳು. … Read more

ಮೀಲಾದ್ ಪ್ರಾರ್ಥನೆಗೆ ಮಸೀದಿಗೆ  ತೆರಳದಂತೆ ಫಾರೂಕ್​ ಅಬ್ದುಲ್ಲಾಗೆ ತಡೆ!

farook abdulla

ಶ್ರೀನಗರ(30-10-2020):  ಮೀಲಾದ್ ಪ್ರಾರ್ಥನೆಗೆ ಹಜರತ್ಬಾಲ್ ಮಸೀದಿಗೆ ಹೊರಟಿದ್ದ ನ್ಯಾಷನಲ್ ಕಾನ್ಫರೆನ್ಸ್​ ಅಧ್ಯಕ್ಷ ಫಾರೂಕ್​ ಅಬ್ದುಲ್ಲಾ ಅವರನ್ನು ಜಮ್ಮುಕಾಶ್ಮೀರದ ಆಡಳಿತ ತಡೆದಿರುವ ಘಟನೆ ನಡೆದಿದೆ.  ಪ್ರಾರ್ಥನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದ್ದು, ಈಗ ಅದರ ಉಲ್ಲಂಘನೆಯಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್​ ಆಕ್ರೋಶವನ್ನು ವ್ಯಕ್ತಪಡಿಸಿದೆ. ಪೀಪಲ್ಸ್​ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮುಪ್ತಿ ಕೂಡ ಜಮ್ಮು ಸರ್ವಾಧಿಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.      

ಇನ್ನು ಮುಂದೆ ಜಮ್ಮು ಕಾಶ್ಮೀರದಲ್ಲಿ ಹೊರರಾಜ್ಯದವರಿಗೂ ಭೂಮಿ ಖರೀದಿಸಬಹುದು

jammu kashmir

ಶ್ರೀನಗರ(27/10/2020): ಇನ್ನು ಮುಂದೆ ಜಮ್ಮುಕಾಶ್ಮೀರದಲ್ಲಿ ಹೊರರಾಜ್ಯದವರು ಭೂಮಿಯನ್ನು ಖರೀದಿಸುವುದು ಸುಲಭವಾಗಲಿದೆ. ಈ ಸಂಬಂಧ ಕೇಂದ್ರ ಸರಕಾರ ಹಲವು ಕಾನೂನುಗಳ ತಿದ್ದುಪಡಿಯನ್ನು ಮಾಡಿದೆ. ಇದುವರೆಗೆ ಜಮ್ಮುಕಾಶ್ಮೀರದಲ್ಲಿ ಆ ರಾಜ್ಯದ ಶಾಶ್ವತ ನಿವಾಸಿಗೆ ಮಾತ್ರ ಭೂಮಿ ಖರೀದಿಸಲು ಸಾಧ್ಯವಾಗುತ್ತಿತ್ತು. ಆದರೆ, ಈಗ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಒಂದು ವರ್ಷವಾಗುತ್ತಿದ್ದಂತೆ ಕೇಂದ್ರ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್‌ 17ರಿಂದ ‘ರಾಜ್ಯದ ಶಾಶ್ವತ ನಿವಾಸಿ’ ಎಂಬುದನ್ನು ತೆಗೆದು ಹಾಕಿದ್ದು, ಇನ್ನು ಮುಂದೆ ಹೊರ ರಾಜ್ಯದವರೂ ಇಲ್ಲಿ … Read more

ಜಮ್ಮುಕಾಶ್ಮೀರ; ನಿಷೇಧಾಜ್ಞೆಯ ನಡುವೆಯೂ ರಾಷ್ಟ್ರಧ್ವಜ ಹಾರಿಸಲೆತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ

jammu

ಶ್ರೀನಗರ(26/10/2020): ಜಮ್ಮುಕಾಶ್ಮೀರದ ಲಾಲ್‌ ಚೌಕ್‌ ಬಳಿ ಇರುವ ಕ್ಲಾಕ್‌ ಟವರ್‌ ಮೇಲೆ ನಿಷೇಧಾಜ್ಞೆಯ ನಡುವೆಯೂ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಬಿಜೆಪಿಯ ಕಾರ್ಯಕರ್ತರನ್ನು ಸ್ಥಳೀಯ ಪೊಲೀಸರು  ಬಂಧಿಸಿದ್ದಾರೆ. ‘ನಿಷೇದಾಜ್ಞೆಯ ನಡುವೆಯೂ ಬಿಜೆಪಿ ಕಾರ್ಯಕರ್ತರ ಗುಂಪು ಅಕ್ರಮವಾಗಿ ಘಂಟಾ ಘರ್‌ ಮೇಲೆ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದು,  ತಕ್ಷಣವೇ ಅವರನ್ನು ವಶಕ್ಕೆ  ಪಡೆದು ಕೋಟಿಬಾಗ್‌ ಠಾಣೆಗೆ ಕರೆದೊಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ 14 ತಿಂಗಳ ಗೃಹ ಬಂಧನದಿಂದ ಬಿಡುಗಡೆಯಾದ ನಂತರ ಪಿಡಿಪಿ ಮುಖ್ಯಸ್ಥೆ ಜಮ್ಮು ಕಾಶ್ಮೀರ್ ಮಾಜಿ ಮುಖ್ಯಮಂತ್ರಿ  … Read more

ಜಮ್ಮುಕಾಶ್ಮೀರದಲ್ಲಿ ವಿಧಿ 370ರ ಮರುಸ್ಥಾಪನೆಗೆ ಮಹಾ ಮೈತ್ರಿಕೂಟ ರಚನೆ

mufthi

ಶ್ರೀನಗರ(15/10/2020): ವಿಶೇಷ ವಿಧಿ  370ರ ಮರುಸ್ಥಾಪನೆಗಾಗಿ ಜಮ್ಮು ಮತ್ತು ಕಾಶ್ಮೀರ ಪ್ರಮುಖ ಪಕ್ಷಗಳಾದ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್  ಹಾಗೂ ಇತರ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಮಾಜಿ ಮುಖ್ಯಮಂತ್ರಿ ಮುಫ್ತಿ ಮೆಹಬೂಬಾ ನಾಯಕತ್ವದ ಪಿಡಿಪಿ ಮತ್ತು ಫಾರೂಕ್ ಆಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್  ಹಾಗೂ ರಾಜ್ಯದ ಹಲವು ರಾಜಕೀಯ ಪಕ್ಷಗಳು ಈ ಮೈತ್ರಿಕೂಟದಲ್ಲಿರಲಿದೆ. ಮೈತ್ರಿಕೂಟದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಮಾತನಾಡಿ, ಜಮ್ಮುಕಾಶ್ಮೀರದಲ್ಲಿ ವಿಧಿ 370ರ ಮರುಸ್ಥಾಪನೆ ಮಾಡುವ ಉದ್ದೇಶದಿಂದ ನಾವು ಮಹಾ ಮೈತ್ರಿಕೂಟ ರಚನೆ ಮಾಡಿದ್ದೇವೆ. … Read more