ಆಸ್ಪತ್ರೆಯಿಂದ ಕೋವಿಡ್ ಲಸಿಕೆಯ ಸೀಸೆಗಳು ಕಳವು!

ಜೈಪುರ: ಕೋವಿಡ್ ಲಸಿಕೆ ಕಳವಾಗಿರುವ ಘಟನೆ ವರದಿಯಾಗಿದೆ. ಜೈಪುರದ ಶಾಸ್ತ್ರಿ ನಗರದಲ್ಲಿರುವ ಕಾನ್ವಾತಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕಳವು ನಡೆದಿದ್ದು, ಪೋಲೀಸರಿಗೆ ದೂರು ನೀಡಲಾಗಿದೆ. ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ನಿಂದ ಲಸಿಕಾ ಕೇಂದ್ರಕ್ಕೆ ಸಾಗಿಸುವ ದಾರಿಯಲ್ಲಿ ಈ ಕಳವು ನಡೆದಿದೆ ಎಂಬ ಶಂಕೆ ಪಡಲಾಗಿದೆ. ಸುಮಾರು 320 ಡೋಸುಗಳನ್ನು ಹೊಂದಿದ 32 ಸೀಸೆಗಳು ಕಾಣೆಯಾಗಿದೆ. ಲಸಿಕೆಯು ಕೊರತೆಯಿರುವ ಸನ್ನಿವೇಶದಲ್ಲಿ ಕಳವು ನಡೆದಿರುವುದು ನಮ್ಮನ್ನು ಆತಂಕಕ್ಕೀಡಾಗಿಸಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ. ದೇಶಾದ್ಯಂತ ಲಸಿಕೆಗಳ ಕೊರತೆ ಕಂಡು ಬಂದಿದೆಯಾದರೂ ಇದ್ದುದರಲ್ಲಿ ರಾಜಸ್ತಾನವು … Read more

ಪ್ರತಿಭಟನಾ ನಿರತ ರಾಜಸ್ತಾನಿ ರೈತರು ಮತ್ತು ಪೋಲೀಸರ ನಡುವೆ ಸಂಘರ್ಷ

ನವದೆಹಲಿ(14-12-2020): ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರಾಜಸ್ತಾನಿ ರೈತರು ಮತ್ತು ಪೋಲೀಸರ ನಡುವೆ ಸಂಘರ್ಷವುಂಟಾಗಿದ್ದು, ಹಲವು ರೈತರು ಬಂಧನಕ್ಕೊಳಗಾಗಿದ್ದಾರೆ. ದೆಹಲಿಗೆ ಸಾಗುವ ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸಂಘರ್ಷ ನಡೆದಿದ್ದು, ಬಳಿಕ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ರೈತರು ಧರಣಿಯನ್ನೂ ನಡೆಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈತರನ್ನು ತಮ್ಮ ವಶದಲ್ಲಿರಿಸಿದ ಪೋಲೀಸರಿಗೆ ಬಳಿಕ ಅವರನ್ನು ಬಿಡುಗಡೆಗೊಳಿಸಬೇಕಾಗಿ ಬಂತು. ಪ್ರತಿಭಟನೆಯನ್ನು ತೀವ್ರಗೊಳಿಸುವುದರ ಭಾಗವಾಗಿ ಆಗ್ರಾ ಎಕ್ಸ್ಪ್ರೆಸ್ ಮತ್ತು ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯ ಮೂಲಕ ದೆಹಲಿ ಗಡಿ ತಲುಪಿ, … Read more

ಭೀಕರ ರಸ್ತೆ ಅಪಘಾತಕ್ಕೆ 10 ಜನರು ದುರ್ಮರಣ

accident

ಜೈಪುರ(13-12-2020): ರಾಜಸ್ಥಾನದ ಚಿತ್ತೋರಗರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಕಾರು ಮತ್ತು ಟ್ರೈಲರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಉದಯಪುರ-ನಿಂಬಾಹೇರಾ ಹೆದ್ದಾರಿಯಲ್ಲಿರುವ ಸದುಲ್ಖೇರಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಟ್ರಕ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಚಿತ್ತೋರ್‌ಗರ್ ನಿಂದ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ಚಿತ್ತೋರ್‌ಗರ್ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಶರ್ಮಾ ಈ ಕುರಿತು ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು … Read more

ಒಂದೇ ದಿನದಲ್ಲಿ 9 ಶಿಶುಗಳ ಮರಣ| ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಮಹಾಪ್ರಮಾದ!

infants

ಜೈಪುರ(11-12-2020): ರಾಜಸ್ಥಾನದ ಕೋಟಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂಬತ್ತು ನವಜಾತ ಶಿಶುಗಳು ಒಂದೇ ದಿನವೇ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೆ ಕೆ ಲೋನ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಐದು ಶಿಶುಗಳು ಮತ್ತು ನಿನ್ನೆ ನಾಲ್ಕು ಶಿಶುಗಳು ಸಾವನ್ನಪ್ಪಿವೆ. ಮೃತಪಟ್ಟ ಶಿಶುಗಳು 1-4 ದಿನಗಳ ವಯಸ್ಸಿನದಾಗಿದೆ. ಈ ಕುರಿತು ತನಿಖೆಗೆ ಆರೋಗ್ಯ ಸಚಿವ ರಘು ಶರ್ಮಾ ಸೂಚಿಸಿದ್ದಾರೆ. ಆಸ್ಪತ್ರೆಯ ಅಧೀಕ್ಷಕ ಸುರೇಶ್ ದುಲಾರಾ, ಯಾವುದೇ ಅಸಾಮಾನ್ಯ ಅಥವಾ ತೀವ್ರವಾದ ಕಾರಣ ಅಥವಾ ಸೋಂಕಿನಿಂದ ಶಿಶುಗಳ ಸಾವುಗಳು ಸಂಭವಿಸಿಲ್ಲ. … Read more

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿಯಿಂದ ಸಂತ್ರಸ್ತೆಯ ಕೊಲೆ ಯತ್ನ; ಬಂಧನ

ಜೈಪುರ(16/11/2020): ಅತ್ಯಾಚಾರ ಆರೋಪಿಯೊಬ್ಬ ಸಂತ್ರಸ್ತೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಯಿಂದ ಸಂತ್ರಸ್ತೆಯ ದೇಹದ ಶೇ. 50 ರಷ್ಟು ಬಾಗ ಸುಟ್ಟುಹೋಗಿದ್ದು, ಆರೋಪಿಗೆ ಶೇ.30 ರಷ್ಟು ಗಾಯಗಳಾಗಿವೆ. ಅರೋಪಿಯು ಕಳೆದ 7 ತಿಂಗಳಿನಿಂದ ನಾಪತ್ತೆಯಾಗಿದ್ದ. ಇಂದು ದೀಪಾವಳಿ ಹಬ್ಬದ ನಿಮಿತ್ತ ಮನೆಗೆ ಬಂದವನು ನೆರೆಯಲ್ಲಿದ್ದ ಸಂತ್ರಸ್ತೆಯ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಕೊಲೆಮಾಡಲು ಯತ್ನಿಸಿದ್ದಾನೆ. ಆರೋಪಿಯು ಸಂತ್ರಸ್ತೆಯ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆತ್ಯಾಚಾರ ಆರೋಪಿ, ಆತನ ತಂದೆ ಹಾಗೂ ಇಬ್ಬರು … Read more