ನ್ಯಾಯಾಲಯದ ಕದ ತಟ್ಟಿದ ವಾಟ್ಸಪ್ | ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಜಾರಿ ಹಿನ್ನೆಲೆ

ನವದೆಹಲಿ: ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಜಾರಿ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ವಾಟ್ಸಪ್ ಸಂಸ್ಥೆಯು ನ್ಯಾಯಾಲಯದ ಕದ ತಟ್ಟಿರುವುದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳಿಗೆ ಅನ್ವಯವಾಗುವಂತೆ ಸರಕಾರವು ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದು ಇಂದಿನಿಂದ ಜಾರಿಯಾಗಿದೆ. ಇದರ ವಿರುದ್ಧ ವಾಟ್ಸಪ್ ಕಾನೂನು ಸಮರಕ್ಕೆ ಮುಂದಾಗಿದ್ದು, ದೆಹಲಿ ಹೈಕೋರ್ಟಿನಲ್ಲಿ ದೂರು ದಾಖಲಿಸಿದೆ. 2007 ರ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪನ್ನು ಆಧಾರವಾಗಿಟ್ಟುಕೊಂಡು ವಾಟ್ಸಪ್ ಈ ಕಾನೂನು ಹೋರಾಟಕ್ಕೆ ಸಿದ್ಧವಾಗುತ್ತಿದೆಯೆನ್ನಲಾಗಿದೆ. ಮೆಸೇಜುಗಳನ್ನು ಟ್ರೇಸ್ ಮಾಡುವುದು ಸಂವಿಧಾನ ವಿರೋಧಿ ಮತ್ತು ಖಾಸಗಿತನದ … Read more

‘ಮಾಹಿತಿ ತಂತ್ರಜ್ಞಾನ ಮಾರ್ಗ ಸೂಚಿ 2021’ ಇಂದಿನಿಂದ ಜಾರಿ ಇನ್ನೂ ಉತ್ತರ ನೀಡದ ಟ್ವಿಟರ್

ನವದೆಹಲಿ: ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ 2021 ಇಂದಿನಿಂದ ಜಾರಿಗೊಂಡಿದೆ. ನೂತನ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ಫೇಸ್ಬುಕ್, ಯೂಟ್ಯೂಬ್ ಮತ್ತು ಗೂಗಲ್ ಮೊದಲಾದ ಹಲವು ಸಂಸ್ಥೆಗಳು ಸರಕಾರಕ್ಕೆ ತಿಳಿಸಿವೆ. ಆದರೆ ಹಿಂದಿನಿಂದಲೂ ಸರಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಟ್ವಿಟರ್ ಈ ನೂತನ ಮಾರ್ಗಸೂಚಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಸಕರಾತ್ಮಕ ಉತ್ತರ ನೀಡಿಲ್ಲ. ನೂತನ ಮಾರ್ಗಸೂಚಿಯಂತೆ ಕಾನೂನಿಗೆ ವಿರುದ್ಧವಾದ ವಿಚಾರಗಳನ್ನು ಯಾರಾದರೂ ಪ್ರಕಟಿಸಿದರೆ, ಅದರ ಜವಾಬ್ಧಾರಿಯನ್ನು ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಹೊರಬೇಕಿದೆ. ಜೊತೆಗೆ ತನ್ನ ಜಾಲತಾಣದಲ್ಲಿ ನಡೆಯುತ್ತಿರುವ ಅಪರಾಧಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನೇಮಿಸಬೇಕಿದೆ ಮತ್ತು … Read more