ಪತ್ರಕರ್ತ ಸಿದ್ದೀಕ್ ಕಪ್ಪನ್ ಬಂಧನ | ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

kerala journalist

ನವದೆಹಲಿ(16-11-2020): ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪತ್ರಕರ್ತರ ಪರವಾಗಿ ವಾದಿಸುತ್ತಾ, ಎಫ್‌ಐಆರ್ ನಲ್ಲಿ ಅವರ ವಿರುದ್ಧ ಯಾವುದೇ ಅಪರಾಧವನ್ನು ಬಹಿರಂಗಪಡಿಸುವುದಿಲ್ಲ. ಅವರು ಅಕ್ಟೋಬರ್ 5 ರಿಂದ ಜೈಲಿನಲ್ಲಿದ್ದಾರೆ. ನಾವು ಪತ್ರಕರ್ತರನ್ನು ಭೇಟಿಯಾಗಲು ಅನುಮತಿ ಕೇಳುತ್ತಾ ಮ್ಯಾಜಿಸ್ಟ್ರೇಟ್ ಬಳಿ ಹೋದಾಗ ಅವರು ಜೈಲಿಗೆ ಹೋಗಿ ಎಂದು ಹೇಳಿದ್ದಾರೆ ಎಂದು ಸಿಬಲ್ ಕೋರ್ಟ್ ಗಮನಕ್ಕೆ ತಂದಿದ್ದಾರೆ. … Read more