ಅಧಿಕಾರದ ಗುಂಗಿನಿಂದ ಹೊರ ಬರದೇ ಕುರ್ಚಿಗೇ ಅಂಟಿದ ಇಸ್ರೇಲಿನ ಮಾಜಿ ಪ್ರಧಾನಿ! ವೀಡಿಯೋ ಇಲ್ಲಿದೆ..

ಜಿರುಸೆಲೆಮ್: ಅಧಿಕಾರದ ಗುಂಗಿನಿಂದ ಹೊರಬರದ ಇಸ್ರೇಲಿನ ಮಾಜಿ ಪ್ರಧಾನಿ ತನ್ನ ಹಳೆಯ ಕುರ್ಚಿಗೇ ಅಂಟಿಕೊಂಡ ಘಟನೆ ನಡೆದಿದೆ! ಹೊಸದಾಗಿ ಆಯ್ಕೆಗೊಂಡ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಅಧಿಕಾರ ಸ್ವೀಕರಿಸುವ ಸಮಾರಂಭ ಅದು. ಅಲ್ಲಿಗೆ ಬಂದ ಪದಚ್ಯುತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೀದಾ ಹೋಗಿ ತನ್ನ ಹಳೆಯ ಕುರ್ಚಿಯಲ್ಲಿ ಕುಳಿತುಕೊಂಡರು. ಆ ವೇಳೆಗಾಗಲೇ ಇದನ್ನು ಗಮನಿಸಿದ ಯಾರೋ ಒಬ್ಬರು, ಇದು ನಿಮ್ಮ ಕುರ್ಚಿ ಅಲ್ಲ ಎಂದು ಎಚ್ಚರಿಸಿದಾಗ ವಾಸ್ತವ ಲೋಕಕ್ಕೆ ಬಂದ ನೆತನ್ಯಾಹು ಹಿಂದಿನ ಸಾಲಿನಲ್ಲಿ ಹೋಗಿ ಕುಳಿತುಕೊಂಡರು. ಘಟನೆಯ ವೀಡಿಯೋ ತುಣುಕನ್ನು … Read more

ಗಾಝಾದ ಮಾಧ್ಯಮ ಸಂಸ್ಥೆಗಳಿದ್ದ ಸಮುಚ್ಚಯದಲ್ಲಿ ಹಮಸ್ ಚಟುವಟಿಕೆಗಳಿದ್ದ ಬಗ್ಗೆ ಪುರಾವೆ ಇಲ್ಲ: ಅಸೋಸಿಯೇಟೆಡ್ ಪ್ರೆಸ್

ನ್ಯೂಯಾರ್ಕ್: ಗಾಝಾದ ಮಾಧ್ಯಮ ಸಂಸ್ಥೆಗಳ ಕಛೇರಿಗಳಿದ್ದ ಕಟ್ಟಡದಲ್ಲಿ ಹಮಸ್ ಕಾರ್ಯಾಚರಣೆ ನಡೆಸುತ್ತಿದ್ದ ಬಗ್ಗೆ ಪುರಾವೆ ಇಲ್ಲವೆಂದು ಅಸೋಸಿಯೇಟೆಡ್ ಪ್ರೆಸ್(AP News) ಹೇಳಿದೆ. ಕಳೆದ ತಿಂಗಳು ಇಸ್ರೇಲ್–ಫೆಲೆಸ್ತೀನ್ ಸಂಘರ್ಷದ ಸಮಯದಲ್ಲಿ ಇಸ್ರೇಲ್ ಸೈನ್ಯವು ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದ ‘ಅಲ್–ಜಲಾ ಟವರ್‘ ಅನ್ನು ಬಾಂಬ್ ಸುರಿಸಿ ನೆಲಸಮ ಮಾಡಿತ್ತು. ಧ್ವಂಸಗೊಳಿಸುವ ಮುನ್ನೆಚ್ಚರಿಕೆ ಕೊಟ್ಟ ಒಂದು ಗಂಟೆಯಲ್ಲೇ ದಾಳಿ ಮಾಡಿತ್ತು. ಅಲ್ಲದೇ ಕಟ್ಟಡದಲ್ಲಿ ಹಮಸ್ ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತೆಂಬ ಸಮರ್ಥನೆಯನ್ನೂ ನೀಡಿತ್ತು. ನಿನ್ನೆಯಷ್ಟೇ ಇಸ್ರೇಲಿನ ಯುಎಸ್, ಯುಎನ್ ರಾಯಭಾರಿಯಾಗಿರುವ ಗಿಲಾದ್ ಇರ್ದಾನ್ ಅಸೋಸಿಯೇಟೆಡ್ ಪ್ರೆಸ್ಸಿನ ಕಛೇರಿಗೆ … Read more

ಐರ್ಲೆಂಡ್ ಸರಕಾರದಿಂದ ಫೆಲೆಸ್ತೀನಿಯನ್ನರಿಗೆ 1.5 ದಶಲಕ್ಷ ಯುರೋಗಳ ತುರ್ತು ಸಹಾಯ | ಮುಂದುವರಿದ ಐರ್ಲೆಂಡ್-ಫೆಲೆಸ್ತೀನ್ ಬಾಂಧವ್ಯ

ಡಬ್ಲಿನ್: ಐರ್ಲೆಂಡ್ ಸರಕಾರವು ಇಸ್ರೇಲ್ ಅತಿಕ್ರಮಣದಿಂದ ನಷ್ಟವನ್ನನುಭವಿಸಿದ ಫೆಲೆಸ್ತೀನಿಯನ್ ಜನರಿಗೆ 1.5 ದಶಲಕ್ಷ ಯುರೋಗಳ ತುರ್ತು ಸಹಾಯವನ್ನು ಒದಗಿಸಿದೆ. “ಫೆಲೆಸ್ತೀನಿನ ಗಾಝಾ ಪಟ್ಟಿಯಲ್ಲಿರುವ ಜನರು ಈ ಮೊದಲೇ ಬಡತನ, ಆಹಾರದ ಅಭಾವ ಮುಂತಾದ ಕ್ಲಿಷ್ಠಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದೀಗ ಇನ್ನೊಂದು ಸುತ್ತಿನ ದೌರ್ಜನ್ಯದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಭೀಕರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಪ್ರಸ್ತುತ ಅತಿಕ್ರಮಣಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ.” ಎಂದು ನೆರವು ಘೋಷಣೆಯ ವೇಳೆಯಲ್ಲಿ ಐರ್ಲೆಂಡ್ ವಿದೇಶಾಂಗ ಸಚಿವ ಸಿಮೋನ್ ಕವೆನೆ ಹೇಳಿದ್ದಾರೆ. ಐರ್ಲೆಂಡ್ ಒಂದು ದಶಲಕ್ಷ ಯುರೋವನ್ನು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಾಚರಣಾ ಇಲಾಖೆ … Read more

ಮುಗಿಲು ಮುಟ್ಟಿದ ಫೆಲೆಸ್ತೀನಿಯನ್ನರ ಸಂಭ್ರಮ | ವಿಜಯೋತ್ಸವ ಆಚರಿಸುತ್ತಿರುವವರ ಮೇಲೆ ಟಿಯರ್ ಗ್ಯಾಸ್ ಪ್ರಯೋಗ

ಜಿರುಸೆಲಮ್: ಹನ್ನೊಂದು ದಿನಗಳ ಇಸ್ರಾಯೀಲ್–ಫೆಲಸ್ತೀನ್ ಸಂಘರ್ಷವು ಏಕಾಏಕಿ ಯುದ್ಧ ವಿರಾಮ ಘೋಷಣೆಯೊಂದಿಗೆ ಮುಕ್ತಾಯಗೊಂಡಿದೆ. ಇಸ್ರೇಲ್ ಭದ್ರತಾ ಸಂಪುಟವೂ ಆದಷ್ಟು ಬೇಗ ಯುದ್ಧ ವಿರಾಮ ಜಾರಿಗೆ ಬರುವಂತೆ ಸರ್ವಾನುಮತದಿಂದ ಅಂಗೀಕರಿಸಿದೆ. ದ್ವಿಪಕ್ಷೀಯ ಸಮ್ಮತಿಯೊಂದಿಗೆ ಘೋಷಣೆಯಾದ ಯುದ್ಧ ವಿರಾಮದ ಬಳಿಕ ಫೆಲೆಸ್ತೀನ್ ಜನರು ತಮ್ಮ ದೇಶದಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹಮಸ್ ಕೂಡಾ ಇದು ತನ್ನ ವಿಜಯವೆಂದು ಬಣ್ಣಿಸಿದೆ. ಈ ನಡುವೆ ಇಂದು ಶುಕ್ರವಾರದ ಜುಮಾ ನಮಾಜು ಬಳಿಕ ಅಲ್–ಅಖ್ಸಾ  ಮಸೀದಿಯಲ್ಲಿ ಸೇರಿದ ಸಾವಿರಾರು ಫೆಲೆಸ್ತೀನಿಯರು ತಮ್ಮ ದೇಶದ ದ್ವಜ ಹಿಡಿದು, ‘ವಿ‘ ಸಂಕೇತವನ್ನು ಪ್ರದರ್ಶಿಸುತ್ತಾ ಗೆಲುವಿನ ಸಂಭ್ರಮವನ್ನು … Read more

ಇಸ್ರೇಲ್ – ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಘೋಷಣೆ

ಜಿರುಸೆಲಮ್: ಇಸ್ರೇಲ್ – ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಏರ್ಪಟ್ಟಿದೆ. ಹಲವು ಜೀವಗಳನ್ನು ಬಲಿ ಪಡೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ಕ್ರೂರ ಯುದ್ಧವು ಕೊನೆಗೂ ನಿಂತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಭೇರಿ ಮೂಲಗಳು ಫೆಲೆಸ್ತೀನಿಯರೊಂದಿಗಿನ ಯುದ್ಧ ವಿರಾಮವನ್ನು ಅಧಿಕೃತವಾಗಿ ಘೋಷಿಸಿತು. ಹಮಸ್ ಮತ್ತು ಇಸ್ಲಾಮಿಕ್ ಜಿಹಾದ್ ಸೇನೆಯು ಕೂಡಾ ಇದನ್ನು ದೃಢೀಕರಿಸಿದೆ. ಇದೊಂದು ದ್ವಿಪಕ್ಷೀಯ ಮತ್ತು ಏಕಕಾಲಿಕ ಯುದ್ಧ ವಿರಾಮವೆಂದು ಹೇಳಿದೆ. ಇಸ್ರೇಲಿನ ವೈಮಾನಿಕ ದಾಳಿಗೆ ಒಟ್ಟು 232 ಫೆಲೆಸ್ತೀನಿಯರು ಬಲಿಯಾಗಿದ್ದಾರೆ. ಅದರಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು … Read more

ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯೆಯ ವಿರುದ್ಧ ವಿಶ್ವಾದ್ಯಂತ ಭುಗಿಲೆದ್ದ ಆಕ್ರೋಶ | ಭಾರತದ ಕಾಶ್ಮೀರ ಸೇರಿದಂತೆ ಹಲವೆಡೆ ಫೆಲೆಸ್ತೀನ್ ಬೆಂಬಲಿಸಿ ಸಮಾವೇಶಗಳು

ಜೆರುಸೆಲೆಮ್: ಒಂದು ವಾರದಿಂದ ಫೆಲೆಸ್ತೀನಿನ ಮೇಲೆ ಇಸ್ರೇಲಿನ ಸತತ ಆಕ್ರಮಣದ ವಿರುದ್ಧ ವಿಶ್ವಾದ್ಯಂತ ಆಕ್ರೋಶವು ಭುಗಿಲೆದ್ದಿದೆ. ಫೆಲಸ್ತೀನಿಗೆ ಬೆಂಬಲವಾಗಿ ಬೃಹತ್ ಸಮಾವೇಶಗಳು ಜರುಗುತ್ತಿವೆ. ಯುರೋಪಿಯನ್ ದೇಶಗಳಾದ ಬ್ರಿಟನ್, ಅಮೇರಿಕಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೈನ್ ಗಳಲ್ಲಿ ಪ್ರತಿಭಟನಾ ಸಮಾವೇಶಗಳು ಕಂಡು ಬಂದಿದೆ. ಇರಾಕಿನಲ್ಲೂ ಹಲವಾರು ಕಡೆಗಳಲ್ಲಿ ಜನರು ಒಟ್ಟು ಗೂಡಿ, ಇಸ್ರೇಲ್ ವಿರುದ್ಧ ಧ್ವನಿಯೆತ್ತಿದ್ದಾರೆ. ಕತರ್ , ಲೆಬನಾನ್, ಜೋರ್ಡಾನ್, ತುನೇಸಿಯಾ, ಅರ್ಜೈಂಟೈನಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾಗಳಲ್ಲೂ ಪ್ರತಿಭಟನೆಗಳು ಕಂಡು ಬಂದಿದೆ. ಭಾರತದ ಕಾಶ್ಮೀರದಲ್ಲೂ ಫೆಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ ನಡೆದಿದೆ. ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆ … Read more

ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿ ಮಹಿಳೆ ಮತ್ತು ಮಕ್ಕಳನ್ನು ಕೊಂದು ಹಾಕಿದ ಇಸ್ರೇಲ್ | ಫೆಲೆಸ್ತೀನಿನಲ್ಲಿರುವ ಅಲ್ ಜಝೀರ ಒಳಗೊಂಡ ಅಂತರಾಷ್ಟ್ರೀಯ ಮಾಧ್ಯಮಗಳ ಕಛೇರಿಗಳಿರುವ ಕಟ್ಟಡವೂ ನೆಲಸಮ

ಜೆರುಸೆಲೆಮ್: ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲಿನ ವೈಮಾನಿಕ ದಾಳಿಯು ಸತತ ಆರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ನಿರಾಶ್ರಿತ ಶಿಬಿರವೊಂದನ್ನು ಗುರಿಯಾಗಿಸಿದೆ. ದಾಳಿಯಲ್ಲಿ ಎಂಟು ಮಕ್ಕಳು ಮತ್ತು ಇಬ್ಬರು ಮಹಿಳೆಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜಾಗತಿಕವಾಗಿ ಜನಪ್ರಿಯ ಮತ್ತು ಪ್ರಭಾವಶಾಲಿ ಮಾಧ್ಯಮ ಸಂಸ್ಥೆಗಳಲ್ಲೊಂದಾಗಿರುವ ಅಲ್ ಜಝೀರ ಸುದ್ಧಿ ಸಂಸ್ಥೆ, ಮತ್ತಿತರ ಅಂತರಾಷ್ಟ್ರೀಯ ಮಾಧ್ಯಮಗಳ ಕಛೇರಿಗಳಿರುವ ಎತ್ತರದ ಕಟ್ಟಡವನ್ನೂ ಇಸ್ರೇಲ್ ಬಾಂಬ್ ಸುರಿಸಿ ನೆಲಸಮ ಮಾಡಿದೆ. ಇನ್ನೊಂದು ಗಂಟೆಯೊಳಗೆ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಛೇರಿಗಳಿರುವ ಕಟ್ಟಡವನ್ನು ಧ್ವಂಸಗೊಳಿಸಲಿರುವೆನು ಎಂದು ಎಚ್ಚರಿಕೆ ನೀಡಿದ ಕೆಲವೇ ಸಮಯದಲ್ಲಿ ಇಸ್ರೇಲ್ ಈ ಕಾರ್ಯಾಚರಣೆ … Read more

ಫೆಲೆಸ್ತೀನಿಯನ್ನರ ಹೋರಾಟವನ್ನು ಹಾಡಿ ಹೊಗಳಿದ ಗ್ರೀಕ್ ಆರ್ಚ್ ಬಿಷಪ್

ಜೆರುಸಲೆಮ್: ಇಸ್ರೇಲ್ ವಿರುದ್ಧ ಫೆಲೆಸ್ತೀನಿಯನ್ನರ ಹೋರಾಟವನ್ನು ಗ್ರೀಕ್ ಆರ್ಥಡಾಕ್ಸ್ ಚರ್ಚಿನ ಆರ್ಚ್ ಬಿಷಪ್ ಹಾಡಿ ಹೊಗಳಿದ್ದಾರೆ. ಅಲ್ ಅಖ್ಸಾದಲ್ಲಿ ಇಸ್ರೇಲಿಗೆ ಶರಣಾಗಲು ತಯಾರಿಲ್ಲದ ವೀರರನ್ನು ಕಂಡೆ. ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಮಾಡಲಾಗುತ್ತಿರುವ ಝಿಯೋನಿಸ್ಟ್ ಪಿತೂರಿಗಳ ವಿರುದ್ಧ ಅವರು ಹೋರಾಡುತ್ತಿದ್ದಾರೆ. ಇಸ್ರೇಲಿನ ವಸಾಹತುಷಾಹಿ ಧೋರಣೆ, ದಬ್ಬಾಳಿಕೆ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡಿ, ಅವರು ಜನರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಷಪ್ ಹೇಳಿದ್ದಾರೆ. ಜೆರುಸಲೇಮಿನ ಗ್ರೀಕ್ ಆರ್ಥಡಾಕ್ಸ್ ಚರ್ಚಿನ ಆರ್ಚ್ ಬಿಷಪ್ ಆಗಿರುವ ಅಥೆಲ್ಲ ಹನ್ನಾ, ಈ ಮೊದಲೂ ಇಸ್ರೇಲ್ ಆಕ್ರಮಣ ಮತ್ತು ವಸಾಹತು ಸ್ಥಾಪನೆಯ ವಿರುದ್ಧ … Read more

ಫೆಲೆಸ್ತೀನಿನ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ | ಒಂಭತ್ತು ಮಕ್ಕಳ ಸಹಿತ ಇಪ್ಪತ್ತು ಬಲಿ

ಗಾಝಾ: ಫೆಲೆಸ್ತೀನ್ ಭೂ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಸೇನೆಯು ಮಕ್ಕಳ ಸಹಿತ ಹಲವು ಫೆಲೆಸ್ತೀನಿಯರನ್ನು ಬಲಿ ಪಡೆದುಕೊಂಡಿದೆ. ಒಂಭತ್ತು ಮಕ್ಕಳ ಸಹಿತ ಸುಮಾರು ಇಪ್ಪತ್ತು ಮಂದಿ ಫೆಲೆಸ್ತೀನಿಯರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅರುವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಇಸ್ರೇಲಿನಿತ್ತ ಫೆಲೆಸ್ತೀನಿನ ಹಮಸ್ ಹಲವು ಬಾರಿ ರಾಕೆಟ್ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಹಮಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ಆರಂಭಿಸಿರುವುದಾಗಿ ಇಸ್ರೇಲ್ ಸೈನ್ಯವು ಹೇಳಿಕೊಂಡಿದೆ. ದಾಳಿಯಲ್ಲಿ ಹಮಸಿನ ಸೇನಾ ಕಮಾಂಡರ್ ಓರ್ವರು ಮೃತಪಟ್ಟಿದ್ದಾರೆ. 9 Palestinians were … Read more

ಇಸ್ರೇಲಿಗೆ ಇರಾನಿನಿಂದ ತಿರುಗೇಟು? ಯುಎಇ ಸಮೀಪ ಇಸ್ರೇಲೀ ಹಡಗಿನ ಮೇಲೆ ಆಕ್ರಮಣ

ದುಬೈ: ಯುಎಇ ಯ ಫುಜೈರಾ ಬಂದರಿನ ಸಮೀಪದಲ್ಲಿದ್ದ ಇಸ್ರೇಲಿನ ಹಡಗೊಂದರ ಮೇಲೆ ದಾಳಿಯಾಗಿದೆಯೆಂದು ಇಸ್ರೇಲೀ ಮಾಧ್ಯಮಗಳು ವರದಿ ಮಾಡಿದೆ. ಇದು ಇರಾನ್ ನಡೆಸಿರುವುದೆಂದು ಇಸ್ರೇಲ್ ಆರೋಪಿಸಿದೆ. ಇರಾನಿನ ನತಾನ್ಝ್ ಅಣು ಸ್ಥಾವರದಲ್ಲಿ ಸ್ಪೋಟವೊಂದು ಉಂಟಾಗಿತ್ತಲ್ಲದೇ, ಇಸ್ರೇಲ್ ಇದರ ಹೊಣೆಯನ್ನೂ ಹೊತ್ತುಕೊಂಡಿತ್ತು. ಬಳಿಕ ಪ್ರತಿಕ್ರಿಯೆ ನೀಡಿದ ಇರಾನ್, ಸ್ಪೋಟಕ್ಕೆ ಪ್ರತಿಕಾರ ತೀರಿಸುತ್ತೇವೆಂದು ಶಪಥ ಮಾಡಿತ್ತು. ಹಡಗಿನ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ. ಹಡಗು ಭಾಗಶಃ ಜಖಂಗೊಂಡಿದೆ. ಮಾನವ ರಹಿತ ಡ್ರೋನ್ ಅಥವಾ ಮಿಸೈಲ್ ಬಳಸಿ ಆಕ್ರಮಣ ಮಾಡಿರಬಹುದೆಂದು ಅಂತಾರಾಷ್ಟ್ರೀಯ … Read more