ವಿಟ್ಲದ ನಿವಾಸಿ ಅಬುದಾಬಿಯಲ್ಲಿ ನಿಧನ

ismail

ಅಬುದಾಬಿ(15-12-2020): ವಿಟ್ಲ ಕನ್ಯಾನ ಮೂಲದ ವ್ಯಕ್ತಿಯೋರ್ವರು ಅಬುದಾಬಿಯಲ್ಲಿ ನಿಧನರಾಗಿದ್ದಾರೆ. ಇಸ್ಮಾಯಿಲ್(40) ಮೃತರು. ಜ್ವರದಿಂದಾಗಿ ಮೃತಪಟ್ಟಿದ್ದಾರೆಂದು ಪ್ರಾಥಮಿಕ ಮೂಲದಿಂದ ತಿಳಿದು ಬಂದಿದೆ. ಇವರು ವಿಟ್ಲದ ಕನ್ಯಾನ ನಿವಾಸಿಯಾಗಿದ್ದು, ಮೂಲತಃ ನೆಲ್ಲಿಗುಡ್ಡೆಯವರಾಗಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 1ವರ್ಷದ ಮೊದಲು ಊರಿಗೆ ಬಂದು ಮತ್ತೆ ಅಬುದಾಬಿಗೆ ತೆರಳಿದ್ದರು. ಇವರ ಪತ್ನಿ ಕೆಲವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರು ಮೂವರು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.