ಇಸ್ಲಾಮಿಕ್ ಸ್ಟೇಟ್ ಕುರಿತ ಅನ್ವೇಷಣಾ ವರದಿಯಲ್ಲಿ ಲೋಪ | ಪೀಬೋಡಿ ಅವಾರ್ಡನ್ನು ಹಿಂದಿರುಗಿಸಲಿರುವ ನ್ಯೂಯಾರ್ಕ್ ಟೈಮ್ಸ್

ವಾಷಿಂಗ್ಟನ್, ಡಿ.ಸಿ(19-12-2020): ಇಸ್ಲಾಮಿಕ್ ಸ್ಟೇಟ್ ಕುರಿತ ಅನ್ವೇಷಣಾ ವರದಿಯಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ, ವರದಿಗಾಗಿ ತನಗೆ ಲಭಿಸಿದ ಪಿಬೋಡಿ ಅವಾರ್ಡನ್ನು ನ್ಯೂಯಾರ್ಕ್ ಟೈಮ್ಸ್ ಹಿಂದಿರುಗಿಸಲಿದೆ. ಇಸ್ಲಾಮಿಕ್ ಸ್ಟೇಟ್ ಕುರಿತಾದ “ಕಾಲಿಫಾತ್” ಎಂಬ ಪೋಡ್ ಕ್ಯಾಸ್ಟನ್ನು ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ರುಕ್ಮಿಣಿ ಕಲ್ಲಿಮಾಚಿ ಸಿದ್ಧಗೊಳಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಈ ವರದಿಯು ಅತ್ಯಲ್ಪ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ಪ್ರಚಾರಗಳಿಸಿತ್ತು. ರುಕ್ಮಿಣಿಯು ಸಂಘರ್ಷ ಪೀಡಿತ ಪ್ರದೇಶಗಳ ಬಗೆಗಿನ ವರದಿಗಳನ್ನು ಸಿದ್ಧಪಡಿಸುವ ವರದಿಗಾರ್ತಿಯಾಗಿದ್ದು, ಆಕೆ ಸಿದ್ಧಪಡಿಸಿದ “ಕಾಲಿಫಾತ್” ಹನ್ನೆರಡು ಭಾಗಗಳಿರುವ … Read more