ಏನಿದು ಅತ್ತಾಲ ಕೊಟ್ಟಿ!? | ಕಾಲ ಗರ್ಭದಲ್ಲಿ ಯಾಕೆ ಮರೆಯಾಗಿ ಹೋಯಿತು?

– ಇಸ್ಮತ್ ಪಜೀರ್, ಯುವ ಬರಹಗಾರರು ಅತ್ತಾಲ ಎಂದರೆ ಸಹರಿ. ಉಪವಾಸಿಗರು ಮುಂಜಾವಿನ ಆಝಾನ್‌ಗಿಂತ ಮುನ್ನ ತೆಗೆದುಕೊಳ್ಳುವ ಉಪಹಾರ. ಸಾಮಾನ್ಯವಾಗಿ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಸಹರಿ ಉಣ್ಣುತ್ತಾರೆ. ಅದಕ್ಕೆ ಬ್ಯಾರಿ ಭಾಷೆಯಲ್ಲಿ ಅತ್ತಾಲ ಎನ್ನುತ್ತಾರೆ. ಅತ್ತಾಲ ಎನ್ನುವುದು ಒಂದು ಧಾರ್ಮಿಕ ಆಚರಣೆಯಾದರೂ ಒಂದೊಮ್ಮೆ ನಮ್ಮ ಕರಾವಳಿ ಕರ್ನಾಟಕದ ಬ್ಯಾರಿ ಮುಸ್ಲಿಮರಲ್ಲಿ ಅದಕ್ಕೊಂದು ಸಾಂಸ್ಕೃತಿಕ ಸ್ಪರ್ಶವಿತ್ತು. ಈಗ ಆಧುನಿಕತೆಯ ಭರಾಟೆಯಲ್ಲಿ ಅತ್ತಾಲ ಮತ್ತೆ ಒಂದು ಧಾರ್ಮಿಕ ಪ್ರಕ್ರಿಯೆಯಾಗಿಯೇ ಮನೆಯೊಳಕ್ಕೆ ಸೇರಿಬಿಟ್ಟಿದೆ. ಅತ್ತಾಲಕೊಟ್ಟಿ ಹಾಗೆಂದರೇನು? ರಮಝಾನ್ ತಿಂಗಳಲ್ಲಿ ಮಧ್ಯರಾತ್ರಿ ಸರಿದು ಮುಂಜಾನೆಯಾಗುವುದಕ್ಕಿಂತ … Read more