ಕುರಾನಿನ 26 ಸೂಕ್ತಗಳನ್ನು ರದ್ದುಗೊಳಿಸಲು ಕೋರಿದ ಅರ್ಜಿ ವಜಾ: ಅರ್ಜಿದಾರನಿಗೆ 50 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಇಸ್ಲಾಂ ಧರ್ಮದ ಪವಿತ್ರ ಕುರಾನ್ ಗ್ರಂಥದ 26 ಸೂಕ್ತಗಳನ್ನು ರದ್ದುಗೊಳಿಸಲು ಕೋರಿ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಜೀಮ್ ರಿಝ್ವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.‌ ಕುಚೇಷ್ಠೆಯ ಅರ್ಜಿ ಸಲ್ಲಿಕೆಗಾಗಿ ವಜೀಮ್ ರಿಝ್ವಿಗೆ ಇಂದು ಸುಪ್ರೀಂ ಕೋರ್ಟ್ ಐವತ್ತು ಸಾವಿರ ದಂಡವನ್ನೂ ವಿಧಿಸಿದೆ.‌ ನ್ಯಾಯಾಲಯಗಳು ಧರ್ಮ, ವಿಜ್ಞಾನ, ತತ್ತ್ವಶಾಸ್ತ್ರಗಳ ಬಗ್ಗೆ ವಿಚಾರ ಮತ್ತು ನ್ಯಾಯನಿರ್ಣಯಗೊಳಿಸಲು ಇರುವುದಲ್ಲ ಎಂದು ಕಲ್ಕತಾ ಹೈಕೋರ್ಟ್ ಚಂದಮಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಉಲ್ಲೇಖಿಸಿದೆ.

ದಲಿತರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಇಲ್ಲ!

ravishankar prasad

ನವದೆಹಲಿ(13-02-2021): ದಲಿತರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು  ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.  ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದರಿಂದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಮತ್ತು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಕ್ಷೇತ್ರಗಳಿಂದ ಸಂಸದೀಯ ಅಥವಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯನ್ನು ಇದು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಸದಸ್ಯ ಜಿ.ವಿ.ಎಲ್ ಅವರ ಪ್ರಶ್ನೆಗೆ ಉತ್ತರವಾಗಿ. … Read more