ಐರ್ಲೆಂಡ್ ಸರಕಾರದಿಂದ ಫೆಲೆಸ್ತೀನಿಯನ್ನರಿಗೆ 1.5 ದಶಲಕ್ಷ ಯುರೋಗಳ ತುರ್ತು ಸಹಾಯ | ಮುಂದುವರಿದ ಐರ್ಲೆಂಡ್-ಫೆಲೆಸ್ತೀನ್ ಬಾಂಧವ್ಯ

ಡಬ್ಲಿನ್: ಐರ್ಲೆಂಡ್ ಸರಕಾರವು ಇಸ್ರೇಲ್ ಅತಿಕ್ರಮಣದಿಂದ ನಷ್ಟವನ್ನನುಭವಿಸಿದ ಫೆಲೆಸ್ತೀನಿಯನ್ ಜನರಿಗೆ 1.5 ದಶಲಕ್ಷ ಯುರೋಗಳ ತುರ್ತು ಸಹಾಯವನ್ನು ಒದಗಿಸಿದೆ. “ಫೆಲೆಸ್ತೀನಿನ ಗಾಝಾ ಪಟ್ಟಿಯಲ್ಲಿರುವ ಜನರು ಈ ಮೊದಲೇ ಬಡತನ, ಆಹಾರದ ಅಭಾವ ಮುಂತಾದ ಕ್ಲಿಷ್ಠಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದೀಗ ಇನ್ನೊಂದು ಸುತ್ತಿನ ದೌರ್ಜನ್ಯದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಭೀಕರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಪ್ರಸ್ತುತ ಅತಿಕ್ರಮಣಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ.” ಎಂದು ನೆರವು ಘೋಷಣೆಯ ವೇಳೆಯಲ್ಲಿ ಐರ್ಲೆಂಡ್ ವಿದೇಶಾಂಗ ಸಚಿವ ಸಿಮೋನ್ ಕವೆನೆ ಹೇಳಿದ್ದಾರೆ. ಐರ್ಲೆಂಡ್ ಒಂದು ದಶಲಕ್ಷ ಯುರೋವನ್ನು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಾಚರಣಾ ಇಲಾಖೆ … Read more