ಬೀದಿಗೆ ಬಂದ ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ

ಹುಬ್ಬಳ್ಳಿ(07-10-2020): ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ. ಧಾರವಾಡ ಕಮೀಷನರೇಟ್‌ನಲ್ಲಿನ ಪೊಲೀಸ್ ಕಮೀಷನರ್ ಆರ್. ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವೆ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಕಮೀಷನರ್ ಭೇಟಿಗೆ ಅವಕಾಶ ಕೊಡುತ್ತಿಲ್ಲವೆಂದು ಡಿಸಿಪಿ ಆಕ್ಷೇಪ‌ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸ್ ಕಮೀಷನರಿಗೆ ಪತ್ರ ಬರೆದಿರುವ ಡಿಸಿಪಿ, ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದ್ದಾರೆ‌. ಸೂಕ್ಷ್ಮ ಪ್ರಕರಣದ ತನಿಖೆ ವಿಷಯವಾಗಿ ತಿಳಿಸಬೇಕಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಬೇಕಿದೆ.‌ ಕಚೇರಿಗೆ ಬಂದರೆ ಭೇಟಿಗೆ ಅವಕಾಶ ಸಿಗುತ್ತಿಲ್ಲ. … Read more