ಯುಎಇ: ಇತರರ ಸಾಮಗ್ರಿಗಳನ್ನು ತಮ್ಮೊಂದಿಗೆ ತರುವ ಪ್ರಯಾಣಿಕರಿಗೆ ಕಠಿಣ ಎಚ್ಚರಿಕೆ

ಅಬುದಾಬಿ: ಯುಎಇಗೆ ಬರುವ ಪ್ರಯಾಣಿಕರು ಇತರರ ಸಾಮಗ್ರಿಗಳನ್ನು ತಮ್ಮೊಂದಿಗೆ ತರುವ ವಿಚಾರವಾಗಿ ಯುಎಇ ಕಸ್ಟಮ್ಸ್ ಪ್ರಾಧಿಕಾರವು ಕಠಿಣ ಎಚ್ಚರಿಕೆಯನ್ನು ನೀಡಿದೆ. ಇತರರ ಸಾಮಗ್ರಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಬಳಿಕವೇ ತಮ್ಮೊಂದಿಗೆ ತರಬೇಕೆಂದು ಅದು ತಿಳಿಸಿದೆ. ಕೇವಲ ನಂಬಿಕೆಯ ಆಧಾರದಲ್ಲಿ ಬಂಧು ಮಿತ್ರಾದಿಗಳ ಸಾಮಾನು ಸರಂಜಾಮುಗಳನ್ನು ತರಬಾರದೆಂದು ನಿರ್ದೇಶಿಸಿದೆ. ಇನ್ನು ಅಪರಿಚಿತರ ಸಾಮಗ್ರಿಗಳಾಗಿದ್ದರೆ, ಗರಿಷ್ಠ ಎಚ್ಚರಿಕೆ ವಹಿಸಿಬೇಕಲ್ಲದೇ, ಸೂಕ್ಷ್ಮವಾಗಿ ಅವುಗಳನ್ನು ಪರಿಶೋಧನೆಗೊಳಪಡಿಸಬೇಕು. ಈ ಮೂಲಕ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದೆ. ಇತರ ದೇಶಗಳಲ್ಲಿ … Read more