ಅಮೆರಿಕದ ಮೊದಲ ಮಹಿಳಾ ವೈಸ್ ಫ್ರೆಸಿಡೆಂಟ್ ನಾನಾಗಿರಬಹುದು; ಆದರೆ, ಕೊನೆಯವಳು ನಾನಲ್ಲ: ಕಮಲಾ ಹ್ಯಾರಿಸ್

ವಾಷಿಂಗ್ ಟನ್(08/11/2020): ಅಮೆರಿಕದ ಮೊದಲ ಮಹಿಳಾ ವೈಸ್ ಪ್ರೆಸಿಡೆಂಟ್ ನಾನಾಗಿರಬಹುದು. ಆದರೆ, ಕೊನೆಯವಳು ನಾನಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಭಾರತೀಯ ಮೂಲ ಹಾಗೂ ಕಪ್ಪು ವರ್ಣದ ಅವರು ಅಮೆರಿಕನ್ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಸಮಾನತೆಯನ್ನು ಅನುಭವಿಸುತ್ತಿದ್ದ ಕಪ್ಪು ವರ್ಣದ ಸ್ತ್ರೀಯರ ಹೋರಾಟಕ್ಕೆ ಸಂದ ಜಯವಿದು. ಹೊಸ ಪ್ರಭಾತ ಅರಳಿದೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗೀಧಾರಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನೀವು ಅಮೆರಿಕನ್ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿರುವಿರಿ ಎಂದು ಅವರು ಹೇಳಿದ್ದಾರೆ.