ಮೋದಿ ಭಾರತದ ಭೂಪ್ರದೇಶದ ಒಂದು ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ-ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ

raulgandhi

ನವದೆಹಲಿ(12-02-2021): ಲಡಾಖ್ ಬಗೆಗಿನ ಪ್ರಧಾನಿ ನಿಲುವಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ನರೇಂದ್ರ ಮೋದಿಯವರ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಪ್ರಧಾನಿ ಭಾರತದ ಭೂಪ್ರದೇಶದ ಒಂದು ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಚೀನಾದ ವಿರುದ್ಧ ದೃಢವಾಗಿ ಪ್ರಧಾನಿ ನಿಲ್ಲುತ್ತಿಲ್ಲ. ಅವರು ನಮ್ಮ ಸೈನ್ಯದ ತ್ಯಾಗಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಭಾರತದಲ್ಲಿ ಯಾರಿಗೂ ಇದನ್ನು ಮಾಡಲು ಅನುಮತಿಸಬಾರದು. ಈಗ, ನಮ್ಮ ಸೈನ್ಯವು ಫಿಂಗರ್ 3 ರಲ್ಲಿ ಬೀಡುಬಿಡಲಿದೆ ಎಂದು ನಾವು ಕಂಡುಕೊಂಡಿದ್ದೇವೆ. … Read more