ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು?

ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು ? ಮೂಲ : ಜಾನಕಿ ನಾಯರ್  ಅನುವಾದ : ನಾ ದಿವಾಕರ, ಹಿರಿಯ ಲೇಖಕರು ಮಹಿಳೆಯರ ವಿರುದ್ಧ ದ್ವೇಷ ಕಾರುವ ಮಾತುಗಳನ್ನಾಡಲು ಕರ್ನಾಟಕದ ಬಿಜೆಪಿ ನಾಯಕರು ಮತ್ತು ಸಚಿವರು ಪೈಪೋಟಿಯ ಮೇಲೆ ಮುಗಿಬಿದ್ದಿದ್ದಾರೆ. ಎರಡನೆ ಬಾರಿ ಆರೋಗ್ಯ ಸಚಿವರಾಗಿರುವ ಕೆ ಸುಧಾಕರ್, ನಿಮ್ಹಾನ್ಸ್ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಾ “ ಉದಾತ್ತ ಭಾರತೀಯ ಕುಟುಂಬದ ” ಶಮನಕಾರಕ ಗುಣಲಕ್ಷಣಗಳನ್ನು ಕೊಂಡಾಡಿರುವುದೇ ಅಲ್ಲದೆ ಆಧುನಿಕ ಭಾರತದ ಮಹಿಳೆಯರು ವಿವಾಹವಾಗಲು … Read more

ಹುಲಿಯ ಹಾಲು ಕುಡಿದ ಗಜಗರ್ಭ ಅಂಬೇಡ್ಕರ್

– ಬಾಲಾಜಿ ಕುಂಬಾರ, ಚಟ್ನಾಳ ಜಗತ್ತಿನ ಇತಿಹಾಸವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದಾಗ ಬುದ್ಧನಿಂದ ಅಶೋಕನವರೆಗೆ ನಮಗೆ ನೂರಾರು ಮಹಾನ್ ವ್ಯಕ್ತಿಗಳ ಹೋರಾಟದ ಬದುಕು ಹಾಗೂ ಚಿಂತನೆ ಕಾಣಿಸುತ್ತದೆ. ಅವರು ತಮ್ಮದೇ ಆದ ಒಂದೊಂದು ಕ್ಷೇತ್ರದಲ್ಲಿ ಅವರು ಪಾಂಡಿತ್ಯವನ್ನು ಗಳಿಸಿರುತ್ತಾರೆ. ಆದರೆ ಭಾರತದ ಸಂವಿಧಾನ ಶಿಲ್ಪಿಗಳಾದ ಡಾ. ಅಂಬೇಡ್ಕರ್ ಅವರು ರಾಜಕೀಯ,ಸಾಮಾಜಿಕ,ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ವಿಶೇಷವಾದ ಛಾಪು ಮೂಡಿಸಿ ಸಮಾಜದ ಮೇಲೆ ಬೆಳಕು ಚೆಲ್ಲಿದರು. ಇತಿಹಾಸ, ತತ್ವಶಾಸ್ತ್ರ, ರಾಜಕೀಯ, ಸಂವಿಧಾನ ಕಾನೂನು, ಪತ್ರಿಕೋದ್ಯಮ ಸೇರಿದಂತೆ ಮುಂತಾದ … Read more

ಕೊರೋನಾ ಲಸಿಕೆಯು ಎಂಟರಿಂದ ಹತ್ತು ತಿಂಗಳುಗಳ ಕಾಲ ರಕ್ಷಣೆ ನೀಡಬಲ್ಲದು: ಏಮ್ಸ್ ನಿರ್ದೇಶಕ

ನವದೆಹಲಿ: ಕೊರೋನಾ ಲಸಿಕೆಯು ಎಂಟರಿಂದ ಹತ್ತು ತಿಂಗಳುಗಳ ಕಾಲ ರಕ್ಷಣೆ ನೀಡಬಲ್ಲುದು ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಜನರು ಕೊರೋನಾ ಸಾಂಕ್ರಾಮಿಕ ರೋಗವು ಮುಗಿದ ಅಧ್ಯಾಯವೆಂದು ಭಾವಿಸಿದ್ದಾರೆ. ಯಾವುದೇ ಭಯವಿಲ್ಲದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ. ಇದುವೇ ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಗುಲೇರಿಯಾ ಅಭಿಪ್ರಾಯ ಪಟ್ಟಿದ್ದಾರೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಅನಿವಾರ್ಯ ಕಾರಣಗಳಿಗಾಗಿಯಲ್ಲದೇ ಸುತ್ತಾಡದಿರುವುದು ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಸಲಹೆ ನೀಡಿದ್ದಾರೆ. ಐಪಿಎಸ್ ಸಂಘ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಅಮೆರಿಕದ ಮೊದಲ ಮಹಿಳಾ ವೈಸ್ ಫ್ರೆಸಿಡೆಂಟ್ ನಾನಾಗಿರಬಹುದು; ಆದರೆ, ಕೊನೆಯವಳು ನಾನಲ್ಲ: ಕಮಲಾ ಹ್ಯಾರಿಸ್

ವಾಷಿಂಗ್ ಟನ್(08/11/2020): ಅಮೆರಿಕದ ಮೊದಲ ಮಹಿಳಾ ವೈಸ್ ಪ್ರೆಸಿಡೆಂಟ್ ನಾನಾಗಿರಬಹುದು. ಆದರೆ, ಕೊನೆಯವಳು ನಾನಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಭಾರತೀಯ ಮೂಲ ಹಾಗೂ ಕಪ್ಪು ವರ್ಣದ ಅವರು ಅಮೆರಿಕನ್ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಸಮಾನತೆಯನ್ನು ಅನುಭವಿಸುತ್ತಿದ್ದ ಕಪ್ಪು ವರ್ಣದ ಸ್ತ್ರೀಯರ ಹೋರಾಟಕ್ಕೆ ಸಂದ ಜಯವಿದು. ಹೊಸ ಪ್ರಭಾತ ಅರಳಿದೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗೀಧಾರಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನೀವು ಅಮೆರಿಕನ್ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿರುವಿರಿ ಎಂದು ಅವರು ಹೇಳಿದ್ದಾರೆ.

ಭಾರತೀಯ ಮೀನುಗಾರರ ಮೇಲೆ ಆಕ್ರಮಿಸಿದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು

fisherman attacked

ಚೆನ್ನೈ(27-10-2020): ಭಾರತೀಯ ಮೀನುಗಾರರ ಗುಂಪಿನ ಮೇಲೆ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಮೀನುಗಾರರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಭಾರತೀಯ ಮೀನುಗಾರರು ತಾವು ಲಂಕಾ ನೀರಿನಲ್ಲಿ ಅತಿಕ್ರಮಣ ಮಾಡಿರುವುದನ್ನು ನಿರಾಕರಿಸಿದ್ದಾರೆ. ಕಲ್ಲುಗಳನ್ನು ಎಸೆದು ಅವರ ಬಲೆಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಇನ್ನೂ ಔಪಚಾರಿಕ ದೂರು ನೀಡಿಲ್ಲ ಮತ್ತು ಘಟನೆಯ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನ ರಾಮೇಶ್ವರಂ ಮೂಲದವರು ಗಾಯಗೊಂಡ ಮೀನುಗಾರರು. ಲಂಕಾ ಅಧಿಕಾರಿಗಳು ಮೀನುಗಾರರಿಗೆ ಕಿರುಕುಳ ನೀಡುವ ವಿಷಯವನ್ನು ಈ ಹಿಂದೆ … Read more

ಕೋರೋನಾ ಕಾರಣದಿಂದ ಶಾಲೆಗಳು ಮುಚ್ಚಿರುವುದರಿಂದ ದೇಶದ ಬೊಕ್ಕಸಕ್ಕೆ ಎಷ್ಟು ನಷ್ಟವಾಗಲಿದೆ ಗೊತ್ತೇ?

indian school

ಹೊಸದೆಹಲಿ:(12/10/2020): ಕೋವಿಡ್-19 ಕಾರಣದಿಂದ ಮುಚ್ಚಿರುವ ಶಾಲೆಗಳಿಂದ ದೇಶದ ಬೊಕ್ಕಸಕ್ಕೆ 29.33 ಲಕ್ಷ ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಎಂದು ವಿಶ್ವಬ್ಯಾಂಕ್‌ನ ವರದಿ ತಿಳಿಸಿದೆ. ಕೋವಿಡ್ 19 ಕಾರಣದಿಂದ 55 ಲಕ್ಷ ಮಕ್ಕಳು ಶಾಲೆ ಬಿಡುವ ಆತಂಕವಿದ್ದು,  ಇದು ವಿದ್ಯಾರ್ಥಿಗಳ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ. ‘ಕೋವಿಡ್‌ ಕಾರಣದಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 39.1 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.