ಕೋವಿಡ್ ತಗುಲಿದವರ ಕುಟುಂಬಗಳಿಗೆ ಉಚಿತ ಆಹಾರ ಸಾಮಾಗ್ರಿಗಳ ಕಿಟ್ : ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಣೆ

ಚಂದೀಗಢ್: ಕೋವಿಡ್ ಹರಡುವಿಕೆ, ಲಾಕ್ಡೌನ್, ಉದ್ಯೋಗ ನಷ್ಠ, ಉದ್ಯೋಗಕ್ಕೆ ಹೋಗಲು ಸಾಧ್ಯವಾಗದಿರುವ ಪರಿಸ್ಥಿತಿ ಇತ್ಯಾದಿಗಳಿಂದ ಸಂಕಷ್ಟಕ್ಕೀಡಾದ ಪಂಜಾಬ್ ಜನರೆಡೆಗೆ ಅಲ್ಲಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೆರಳಾಗಿ ಧಾವಿಸಿದ್ದಾರೆ. ಕೋವಿಡ್ ಬಾಧಿತರಿರುವ ಕುಂಟುಂಬಗಳಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳ ಕಿಟ್ಟುಗಳನ್ನು ವಿತರಿಸಲಾಗುವುದೆಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ಒಂದು ಲಕ್ಷ ಕಿಟ್ಟುಗಳು ವಿತರಣೆಗೆ ಸಿದ್ಧವಾಗಿದ್ದು, ಅಗತ್ಯ ಬಂದಂತೆ ಇನ್ನಷ್ಟು ಕಿಟ್ಟುಗಳು ತಯಾರಿಸಲಾಗುತ್ತದೆ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. ಪ್ರತಿ ಕಿಟ್ಟಿನಲ್ಲೂ ಹತ್ತು ಕೆಜಿ ಗೋಧಿ, ಎರಡು ಕೆಜಿ ಸಕ್ಕರೆ ಮತ್ತು ಎರಡು ಕೆಜಿ ಕಡಲೆ ಇರುವುದು. ಕೋವಿಡಿನ ಎರಡನೇ ಅಲೆಯು … Read more