ರೈತರಿಂದ ದೇಶ ವ್ಯಾಪಿ ‘ಸಂಪೂರ್ಣ ಕ್ರಾಂತಿ ದಿನ’ ಆಚರಣೆ | ಬಿಜೆಪಿ ನಾಯಕರ ಮನೆ ಮುಂದೆ ಪ್ರದರ್ಶನ

ನವದೆಹಲಿ: ಸರಕಾರದ ರೈತ ವಿರೋಧೀ ಕಾನೂನುಗಳನ್ನು ವಿರೋಧಿಸಿ, ದೇಶವ್ಯಾಪಿ ‘ಸಂಪೂರ್ಣ ಕ್ರಾಂತಿ ದಿನ‘ ಆಚರಿಸಲಾಯಿತು. ಕೃಷಿ ಕಾಯ್ದೆಗಳ ಸುಗ್ರೀವಾಜ್ಞೆ ಹೊರಡಿಸಿ, ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತರಿಂದ ತೀವ್ರ ಪ್ರತಿಭಟನೆ ಎದುರಾಗಿದೆ. ನಿರಂತರ ರೈತ ಹೋರಾಟ ನಡೆಯುತ್ತಿರುವ ದೆಹಲಿ ಗಡಿಗಳಲ್ಲೂ, ಇನ್ನಿತರ ದೇಶದ ಹಲವು ಕಡೆಗಳಲ್ಲೂ ರೈತರು ಸರಕಾರದ ವಿರುದ್ಧ ಪ್ರದರ್ಶನ ನಡೆಸಿದರು. ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ತೆಲಂಗಾಣ, ತ್ರಿಪುರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಪ್ರತಿಭಟನೆ ಆಯೋಜಿಸಿದ್ದರು. ರೈತ ಕಾಯ್ದೆಗಳ ಪ್ರತಿಗಳನ್ನು ಸುಡುವುದು, … Read more

ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ರೈತರ ನಿರ್ಧಾರ | ಈ ತಿಂಗಳ ಇಪ್ಪತ್ತಾರರಂದು ದೇಶಾದ್ಯಂತ ಕರಾಳ ದಿನ ಆಚರಣೆ

ನವದೆಹಲಿ: ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವು ಮತ್ತೊಮ್ಮೆ ತೀವ್ರಗೊಳ್ಳುವ ಸೂಚನೆಗಳು ಕಂಡು ಬರುತ್ತಿದೆ. ಆರು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟವು ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ತುಸು ಅಬ್ಬರ ಕಡಿಮೆಯಾಗಿತ್ತಾದರೂ ಮುಂದುವರಿಯುತ್ತಲೇ ಇತ್ತು. ಇದೀಗ ಹೋರಾಟವನ್ನು ಮತ್ತೊಮ್ಮೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಈ ವರೆಗೆ ಹನ್ನೊಂದು ಬಾರಿ ಸರಕಾರ ಮತ್ತು ರೈತ ಮುಖಂಡರ ನಡುವೆ ಮಾತುಕತೆಗಳು ನಡೆದಿತ್ತು. ಆದರೆ ಎಲ್ಲವೂ ವಿಫಲವಾಗಿವೆ. ಸರಕಾರವೂ ತನ್ನ ಪಟ್ಟು ಬಿಡುತ್ತಿಲ್ಲ. ರೈತರೂ ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ವ್ಯವಸಾಯ … Read more

ಭಾರತದ ಕೃಷಿ ಮಸೂದೆಯನ್ನು ವಿರೋಧಿಸಿ ಲಂಡನ್ ನಲ್ಲಿ ಪ್ರತಿಭಟನೆ| ವಿದೇಶಗಳಲ್ಲಿ ಮೊಳಗಿದ ರೈತರ ಪರ ಧ್ವನಿ

london

ಲಂಡನ್(07-12-2020):ಭಾರತ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಲಂಡನ್‌ನಲ್ಲಿ ಜನರು ಪ್ರತಿಭಟನೆ ನಡೆಸಿದ್ದು ಹಲವರನ್ನು ಬಂಧಿಸಲಾಗಿದೆ. ಬ್ರಿಟಿಷ್ ರಾಜಧಾನಿಯ ಮಧ್ಯಭಾಗದಲ್ಲಿರುವ ಆಲ್ಡ್ವಿಚ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಗುಂಪು ಸೇರಿಕೊಂಡು ಜನರು ಪ್ರತಿಭಟನೆಯನ್ನು ನಡೆಸಿದ್ದಾರೆ ಮಾಸ್ಕ್ ಹಾಕಿರುವ ಹಲವಾರು ಪೊಲೀಸ್ ಅಧಿಕಾರಿಗಳು ನಾವು ಪಂಜಾಬ್‌ನ ರೈತರೊಂದಿಗೆ ನಿಲ್ಲುತ್ತೇವೆ ಪ್ರದರ್ಶನದಿಂದ ಚದುರಿಹೋಗುವಂತೆ ಜನರಲ್ಲಿ ಮನವಿಯನ್ನು ಮಾಡಿದ್ದಾರೆ. ಕರೋನವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿವೆ ಎಂದು ಎಚ್ಚರಿಸಿದ್ದಾರೆ.ಪ್ರತಿಭಟನೆಯ ವೇಳೆ 30 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. … Read more