ಬಹು ವಿವಾದಿತ ಸಿಎಎ ಜಾರಿ! ಮುಸ್ಲಿಮ್ ಅಲ್ಲದ ನಿರಾಶ್ರಿತರಿಂದ ಅರ್ಜಿ ಸಲ್ಲಿಸಲು ಕೋರಿಕೆ

ನವದೆಹಲಿ: ಬಹು ವಿವಾದಿತ ಪೌರತ್ವ ಕಾಯ್ದೆ(ಸಿಎಎ)ಯನ್ನು ಜಾರಿಗೊಳಿಸಲು ಮುಂದಾಗಿರುವ ಒಕ್ಕೂಟ ಸರಕಾರವು ಮುಸ್ಲಿಂ ಅಲ್ಲದ ನಿರಾಶ್ರಿತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಮುಸ್ಲಿಮೇತರರು ಪೌರತ್ವ ಕಾಯ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಥಮ ಹಂತವಾಗಿ ಗುಜರಾತ್‌, ರಾಜಸ್ಥಾನ, ಛತ್ತೀಸಗಡ, ಹರಿಯಾಣ ಮತ್ತು ಪಂಜಾಬ್‌ ರಾಜ್ಯಗಳ 13 ಜಿಲ್ಲೆಗಳಲ್ಲಿ ನೆಲೆಸಿರುವವಿಗೆ ಈ ಅವಕಾಶ ನೀಡಲಾಗಿದೆ. 2019 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಾಗ ಭಾರೀ ಪ್ರತಿಭಟನೆ ಎದುರಾಗಿತ್ತು. ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಗೊಳಿಸುವುದನ್ನು ಮುಂದೂಡಲಾಗಿತ್ತು. ಜೊತೆಗೆ ಸಿಎಎ ವಿರೋಧೀ ಪ್ರತಿಭಟನೆಗಳೂ ನಿಂತಿತ್ತು. … Read more

ಭಾರತದ ಪ್ರಜೆಯನ್ನು ಯಾವುದೇ ರಾಜ್ಯದಲ್ಲಿ ‘ಪರಕೀಯ’ ಎಂದು ನೋಡಬಾರದು| ರಾಜ್ಯಪಾಲರ ಹೇಳಿಕೆ ಬಿಜೆಪಿ ಆಡಳಿತದ ರಾಜ್ಯಕ್ಕೂ ಅನ್ವಯವಾಗಲಿ!

governr

ಪಶ್ಚಿಮ ಬಂಗಾಳ(06-01-2021): ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನ್​ಕರ್ ಮಹತ್ವದ ಹೇಳಿಕೆಯೊಂದರಲ್ಲಿ ಭಾರತದ ಯಾವುದೇ ಪ್ರಜೆಯನ್ನು ಯಾವುದೇ ರಾಜ್ಯದಲ್ಲಿ ‘ಪರಕೀಯ’ ಎಂದು ನೋಡುವುದು ಸಂವಿಧಾನದ ಆಶಯಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಕೋಲಾಘಾಟ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಕೆಲವರು ಹೊರ ರಾಜ್ಯಗಳಿಂದ ಬರುವವರನ್ನು ಪರಕೀಯರು ಎಂದು ಕರೆದಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಅವರು ಈ ದೇಶದವರೇ ಆಗಿರುತ್ತಾರೆಯೇ ಹೊರತು ಹೊರಗಿನವರಾಗುವುದಿಲ್ಲ. ಒಂದುವೇಳೆ ಹಾಗೆ ಕರೆದರೆ ಅದು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿದಂತೆ ಎಂದು ಹೇಳಿದ್ದಾರೆ. ಪ.ಬಂಗಾಳದಲ್ಲಿ … Read more

ಸಂವಿಧಾನ ಬದಲಿಸಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಸರಕಾರ ಸಜ್ಜಾಗುತ್ತಿದೆಯೇ? ಸಂವಿಧಾನದ ಪುಟಗಳ ವಿನ್ಯಾಸಗಳನ್ನು ಬದಲಿಸಲಾಗಿದೆ ಎನ್ನಲಾದ ವೀಡಿಯೋ ವೈರಲ್

indian constitution

ಲಕ್ನೋ (30-10-2020): ಸಂವಿಧಾನ ಬದಲಿಸಿ, ಹಿಂದೂ ರಾಷ್ಟ್ರವೆಂದು ಘೋಷಿಸಲು ಸರಕಾರ ಸಜ್ಜುಗೊಳ್ಳುತ್ತಿದೆಯೆಂದೂ, ಅದರ ಮುನ್ನುಡಿಯಾಗಿ ಸಂವಿಧಾನದ ಪುಟಗಳ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಲಾಗಿದೆಯೆಂದೂ ತೋರಿಸುವ ವೀಡಿಯೋ ವೈರಲ್ ಆಗಿದೆ. ಅಕ್ಟೋಬರ್ ಒಂಭತ್ತರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಒಂದು ಸಾರ್ವಜನಿಕ ಸಮಾರಂಭದಲ್ಲಿ ಈ ವೀಡಿಯೋ ಮಾಡಲಾಗಿದ್ದು, ಅದರಲ್ಲಿ ರಾಮರಾಜ್ಯದ ಕನಸಿನ ಸಂವಿಧಾನವು ಸಿದ್ಧಗೊಂಡಿದೆಯೆಂದು ಆರೋಪಿಸಲಾಗಿದೆ. ಇದರ ವಿರುದ್ಧ ಆಂದೋಲನ ನಡೆಸಬೇಕೆಂದು ಕರೆ ನೀಡಲಾಗಿದೆ. ಸಂವಿಧಾನದ ಪುಟಗಳಲ್ಲಿ ರಾಮ, ಕೃಷ್ಣ, ಹನುಮಾನ್, ಕಾಳಿ, ದುರ್ಗಾ ಮುಂತಾದ ದೇವ ದೇವತೆಗಳ ಚಿತ್ರಗಳನ್ನು … Read more