ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ : ಪಾಪ್ಯುಲರ್ ಫ್ರಂಟ್ ಖಂಡನೆ

ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಮೇಲಿನ ಹಿಂಸಾಚಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ ಸಲಾಂ ಖಂಡಿಸಿದ್ದಾರೆ. ನೆರೆಯ ದೇಶದಲ್ಲಿ ಕೇಳಿ ಬರುತ್ತಿರುವ ಸಾವು ಮತ್ತು ವಿನಾಶದ ಸುದ್ದಿಗಳು ಅತ್ಯಂತ ಆತಂಕಕಾರಿ ಹಾಗೂ ದುರಾದೃಷ್ಟಕರವಾಗಿವೆ. ಕೆಲವು ಅನಧಿಕೃತ ಆರೋಪಗಳ ಆಧಾರದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಇತರ ಸಮುದಾಯಗಳಿಗೆ ಸೇರಿದ ಅಮಾಯಕರನ್ನು ಗುರಿಪಡಿಸುವ ವಿಚಾರ ಯಾವುದೇ ನಾಗರಿಕ ಸಮಾಜಕ್ಕೆ ಬೆದರಿಕೆಯಾಗಿದೆ. ಇತರರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಇಂತಹ ಜನರನ್ನು ನಿಯಂತ್ರಿಸಿ ಶಿಕ್ಷೆಗೆ … Read more

ಈ ವರ್ಷದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಾಳೆಯಿಂದ ಆರಂಭ

ಬೆಂಗಳೂರು: 2021-22 ಶೈಕ್ಷಣಿಕ ವರ್ಷದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ನಾಳೆಯಿಂದ ಆರಂಭವಾಗಲಿದೆ. ಶಾಲೆಗಳಿಗೆ ಮಕ್ಕಳ ಪ್ರವೇಶಾತಿ, ಅಧ್ಯಾಪಕರನ್ನು ಸಜ್ಜುಗೊಳಿಸುವುದು, ವಿವಿಧ ಪಠ್ಯಕ್ರಮಗಳನ್ನು ಬೋಧಿಸಲು ಸಮಯವನ್ನು ನಿಗದಿ ಪಡಿಸುವುದು ಮುಂತಾದ ಕಾರ್ಯಚಟುವಟಿಕೆಗಳು ನಾಳೆಯಿಂದ ಆರಂಭವಾಗಬಹುದು. ಶಾಲೆ ಆರಂಭಿಸುವ ಪೂರ್ವಭಾವಿ ಸಿದ್ಧತೆಗಳನ್ನು ಜೂನ್ 15 ರಿಂದ 30 ರವರೆಗೆ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಪ್ರಸಕ್ತ ಸಾಲಿನ (2021-22) ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಪ್ರಕಟಿಸಿದೆ. 5ರಿಂದ 10ನೇ ತರಗತಿ … Read more

ಕಾರ್ಡುಗಳೇ ಕಾರ್ಡುಗಳು!! ಆಧಾರ್ ಬಳಿಕ ಇದೀಗ ಅದೇ ಮಾದರಿಯಲ್ಲಿರುವ ‘ಫ್ಯಾಮಿಲಿ ಐಡಿ’!

ನವದೆಹಲಿ: ಈಗಾಗಲೇ ಹಲವು ಐಡಿಗಳನ್ನು ಹೊತ್ತುಕೊಂಡು ನಡೆಯುತ್ತಿರುವ ಜನರಿಗೆ ಅವುಗಳ ಜೊತೆಗೆ ಮತ್ತೂ ಒಂದು ಐಡಿಯನ್ನು ಇರಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗುವ ಸಾಧ್ಯತೆಯಿದೆ. ದೇಶಾದ್ಯಂತ ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಸರಕಾರವು ಚಿಂತನೆ ನಡೆಸುತ್ತಿದೆಯೆಂದು ವರದಿಯಾಗಿದೆ. ಆಧಾರ್ ಕಾರ್ಡ್ ಮಾದರಿಯಲ್ಲೇ ‘ಫ್ಯಾಮಿಲಿ ಐಡಿ ಕಾರ್ಡ್‘ ವ್ಯವಸ್ಥೆ ದೇಶಾದ್ಯಂತ ಜಾರಿಗೆ ಬರಲಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಕುಟುಂಬದ ಜೊತೆಗೆ ಸೇರಿಸಿಕೊಂಡು ಗುರುತಿಸಿ, ವ್ಯವಹರಿಸಲು ಇದು ಸಹಕಾರಿಯಾಗಲಿದೆಯೆಂದು ಮೂಲಗಳು ತಿಳಿಸಿವೆ. ‘ಫ್ಯಾಮಿಲಿ ಐಡಿ ಕಾರ್ಡ್‘ ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ಕಡೆಯೂ ಜಾರಿಗೆ ಬರಲಿದ್ದು, ಅಲ್ಲಿ ಜಾರಿಯಾದ ಸರಕಾರೀ ಯೋಜನೆಗಳ … Read more

ಯುಎಇ : ಭಾರತದಿಂದ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧ ಜೂನ್ 30 ರ ವರೆಗೆ ಮುಂದುವರಿಕೆ

ಅಬುದಾಬಿ: ಭಾರತದಿಂದ ಯುಎಇ ಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧದ ಅವಧಿಯನ್ನು ಜೂನ್ 30 ರ ವರೆಗೆ ಮುಂದೂಡಲಾಗಿದೆ. ಜೂನ್ ಹದಿನಾಲ್ಕರಂದು ನಿಷೇಧ ಮುಗಿಯಲಿದೆಯೆಂದು ನಿರೀಕ್ಷಿಸಿದ್ದ ಅನಿವಾಸಿಗಳಿಗೆ ಮತ್ತೊಮ್ಮೆ ನಿರಾಸೆ ಅನುಭವಿಸಬೇಕಾಗಿ ಬಂದಿದೆ. ಈ ಬಗ್ಗೆ ಯುಎಇಯ ನಾಗರಿಕ ವಿಮಾನಯಾನ ಇಲಾಖೆಯು ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಜಂಟಿಯಾಗಿ ಪ್ರಕಟಣೆ ಹೊರಡಿಸಿದೆ. ಈ ಮೊದಲು ಪ್ರಕಟಿಸಿದಂತೆಯೇ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, ಹದಿನಾಲ್ಕು ದಿನಗಳೊಳಗೆ ಭಾರತದ ಮೂಲಕ ಯುಎಇ ಪ್ರವೇಶಿಸುವ ಇತರ ದೇಶದವರಿಗೂ ಯುಎಇ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಮತ್ತು ಗೋಲ್ಡನ್ ವೀಸಾ … Read more

ಯುಎಇ : ಭಾರತದಿಂದ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧದ ಅವಧಿ ಇನ್ನೊಮ್ಮೆ ವಿಸ್ತರಣೆ

ಅಬುದಾಬಿ: ಭಾರತದಿಂದ ಯುಎಇಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧದ ಅವಧಿಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಭಾರತದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಹೇಳಿಕೊಳ್ಳುವಂಥ ಯಾವುದೇ ಇಳಿಕ ಕಂಡು ಬರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಅನಿರ್ಧಿಷ್ಠಾವಧಿಗೆ ವಿಮಾನ ಪ್ರಯಾಣದ ಮೇಲಿನ ನಿಷೇಧ ಹೇರಿ, ಆದೇಶ ನೀಡಲಾಗಿತ್ತು. ಇದೀಗ ಅದು ಜೂನ್ 14  ಎಂದು ನಿರ್ಧರಿಸಿ, ಮುಂದೂಡಲಾಗಿದೆ ಎಂದು ಯುಎಇಯ ನಾಗರಿಕ ವಿಮಾನಯಾನ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಈಗಾಗಲೇ ಭಾರತದಲ್ಲಿ ಬಾಕಿಯಾಗಿರುವ ಲಕ್ಷಾಂತರ ಅನಿವಾಸಿಗಳಿಗೆ ಹೊಸ ಆತಂಕ ಎದುರಾಗಿದೆ. ಜೊತೆಗೆ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, … Read more

ಪ್ರಸಿದ್ಧ ಪರಿಸರ ಹೋರಾಟಗಾರ, ಚಿಪ್ಕೋ ಚಳವಳಿಯ ಸುಂದರ್ ಲಾಲ್ ಬಹುಗುಣ ಕೋವಿಡ್ ಗೆ ಬಲಿ

ನವದೆಹಲಿ: ಪ್ರಸಿದ್ಧ ಪರಿಸರ ಹೋರಾಟಗಾರ, ಚಿಪ್ಕೋ ಚಳವಳಿಯ ಸುಂದರ್ ಲಾಲ್ ಬಹುಗುಣ ಕೋವಿಡ್ ತಗುಲಿ ಮೃತಪಟ್ಟಿದ್ದಾರೆ. ಇವರಿಗೆ 94 ವರ್ಷ ವಯಸ್ಸಾಗಿತ್ತು. ಮೇ ಎಂಟರಂದು ಕೋವಿಡ್ ಪಾಸಿಟಿವ್ ಆದ ಬಳಿಕ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆಯಿಂದ ಅವರ ದೇಹದಲ್ಲಿರುವ ಆಕ್ಸಿಜನ್ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಚಿಪ್ಕೋ ಚಳವಳಿಯ ಮುಂದಾಳುವಾಗಿದ್ದ ಬಹುಗುಣ 1970 ರಲ್ಲಿ ಮರ ಕಡಿಯುವುದರ ವಿರುದ್ಧ ಮರ ಗಳನ್ನು ಅಪ್ಪಿಕೊಳ್ಳುವ ಮೂಲಕ ವಿಶಿಷ್ಠ ಚಳವಳಿಗೆ ರೂಪು ಕೊಟ್ಟಿದ್ದರು. ಇವರೊಂದಿಗೆ ಗ್ರಾಮೀಣ ಜನರೂ ಕೈ ಜೋಡಿಸಿದ್ದರು.  ಇನ್ನಿತರ … Read more

ತೌಖ್ತೆ ಚಂಡಮಾರುತ: ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು: ಈ ವರ್ಷದ ಮೊದಲ ಚಂಡಮಾರುತವಾದ ತೌಖ್ತೆ ಚಂಡಮಾರುತವು ಇಂದೂ ಮುಂದುವರಿಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ತೌಖ್ತೆಯ ವೇಗ 115-125ರಿಂದ 140 ಕಿ.ಮೀ ಇರಲಿದೆಯೆಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ನಂತರದ ಎರಡು ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಮಲೆನಾಡುಗಳಲ್ಲಿ ಲೌಖ್ತೆಯ ಪರಿಣಾಮವು ತೀವ್ರವಾಗಿದ್ದು, ಭಾರೀ ಮಳೆಯಾಗುತ್ತಿದೆ. ತೀರದಾದ್ಯಂತ ಬೃಹದಾಕಾರದ ಸಮುದ್ರದ ಅಲೆಗಳು ಎದ್ದು, ತೀವ್ರ ಕಡಲ್ಕೊರೆತಕ್ಕೆ ಕಾರಣವಾಗಿದೆ. ರಭಸವಾದ ಮಳೆಯಿಂದಾಗಿ ವಿದ್ಯುತ್ ಅಡಚಣೆ, ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹ,  … Read more

ತೌಕ್ಟೆ ಚಂಡಮಾರುತ: ಸಂಕಷ್ಟಕ್ಕೆ ಸಿಲುಕಿದ ಜನರನ್ನು ಸಹಾಯ ಮಾಡುವಂತೆ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಮನವಿ

ನವದೆಹಲಿ: ದೇಶದಲ್ಲಿ ತೌಕ್ಟೆ ಚಂಡಮಾರುತ ಆರಂಭವಾಗುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ ಜನರನ್ನು ಸಹಾಯ ಮಾಡುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕ ರಾಜ್ಯದಲ್ಲಿ ಸೈಕ್ಲೋನ್ ಚಂಡಮಾರುತದ ಎಚ್ಚರಿಕೆಯನ್ನು ನೀಡಲಾಗಿದೆ. ಹೀಗಾಗಿ ಆಗತ್ಯವಿರುವವರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ದಯವಿಟ್ಟು, ಎಲ್ಲರೂ ಸುರಕ್ಷಿತವಾಗಿ ಇರುವಂತೆಯೂ ಅವರು ಸೂಚಿಸಿದ್ದಾರೆ. #CycloneAlert has been issued in … Read more

ಗುಜರಾತ್: ಗೋಧಾಮ್ ಮಹಾತೀರ್ಥ ಪಾಠಮೇದದ ಗೋಶಾಲೆಯಿಂದ ಕೋವಿಡ್ ರೋಗಿಗಳಿಗೆ ದನದ ಗಂಜಲದಿಂದ ಮದ್ದು!

ಗಾಂಧಿನಗರ: ಗುಜರಾತಿನ ಹಳ್ಳಿಯೊಂದರಲ್ಲಿ ಗೋ ಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರನ್ನು ತೆರೆಯಲಾಗಿದ್ದು, ಅಲ್ಲಿ ದನದ ಗಂಜಲದಿಂದ ಮಾಡಿದ ಮದ್ದನ್ನು ಕೋವಿಡ್ ರೋಗಿಗಳಿಗೆ ಕೊಡಲಾಗುತ್ತಿದೆ ಎಂದು ವರದಿಯಾಗಿದೆ. ಉತ್ತರ ಗುಜರಾತಿನ ಬನಸಕಾಂತ ಜಿಲ್ಲೆಯಲ್ಲಿರುವ ತೆಟೋಡ ಎಂಬಲ್ಲಿ ರಾಜಾರಾಮ್ ಗೋಶಾಲಾ ಆಶ್ರಮ ಎಂಬ ಹೆಸರಿನಲ್ಲಿರುವ ಗೋ ಶಾಲೆಯೊಂದು ಮೇ ಐದರಂದು ಉದ್ಘಾಟನೆಯಾಗಿದೆ. ಇದು ಗೋಧಾಮ್ ಮಹಾತೀರ್ಥ ಪಾಠಮೇದ ಎಂಬ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಘಟಕವಾಗಿದೆ. ಇಲ್ಲಿ ದನದ ಗಂಜಲ, ಹಾಲು ಮತ್ತು ಅದರ ಉತ್ಪನ್ನಗಳಿಂದ ಮದ್ದು ತಯಾರಿಸಲಾಗುತ್ತಿದೆ ಎಂದು ಪಾಠಮೇದದ ಟ್ರಸ್ಟಿಯೆಂದು ಗುರುತಿಸಿಕೊಂಡಿರುವ ಮೋಹನ್ ಜಾಧವ್ … Read more

‘ಡಿಆರ್ ಡಿಒ’ ತಯಾರಿಸಿದ ಕೋವಿಡ್ ಮದ್ದು ತುರ್ತು ಬಳಕೆಗೆ ಅನುಮತಿ | ಹುಡಿ ರೂಪದಲ್ಲಿರುವ ಈ ಮದ್ದು ನೀರಿನಲ್ಲಿ ಕಲಸಿ ಕುಡಿಯುವಂಥದ್ದು

ನವದೆಹಲಿ: ಕೋವಿಡ್ ಎರಡನೇ ಅಲೆಗೆ ದೇಶವು ತತ್ತರಿಸಿರುವಂತೆಯೇ ಶುಭ ಸುದ್ದಿಯೊಂದು ಬಂದಿದೆ. ‘ಡಿಆರ್ ಡಿಒ’ ತಯಾರಿಸಿದ ಕೋವಿಡ್ ಮದ್ದುಗಳು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್ (ಡಿಆರ್ ಡಿಒ) ತಯಾರಿಸಿದ ಹೊಸ ಮದ್ದು, ಕೋವಿಡ್ ರೋಗವನ್ನು ಗುಣಪಡಿಸುವಲ್ಲಿ ಸಫಲವಾಗಿದೆಯೆಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಸಂಸ್ಥೆಯು ಇದರ ತುರ್ತು ಬಳಕೆಗೆ ಅನುಮತಿ ನೀಡಿದೆ. ‘2-ಡಿಓಕ್ಸ್–ಡಿ–ಗ್ಲುಕೋಸ್‘ ಎಂದು ಕರೆಯಲಾಗುವ ಈ ಮದ್ದಿಗೆ ಕೋವಿಡ್ ರೋಗವನ್ನು ಗುಣಪಡಿಸುವ ಸಾಮರ್ಥ್ಯವಿದೆಯೆಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ. ಒಳರೋಗಿಗಳಿಗೆ ಈ ಮದ್ದನ್ನು … Read more