ಪೊಲೀಯೋ ಲಸಿಕೆ ಎಂದು ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಆರೋಗ್ಯ ಸಿಬ್ಬಂದಿಗಳು|12 ಮಕ್ಕಳು ಅಸ್ವಸ್ಥ

polio

ಮಹಾರಾಷ್ಟ್ರ(02-02-2021): ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಸೋಮವಾರ ಪೋಲಿಯೊ ಲಸಿಕೆ ಬದಲಿಗೆ ಸ್ಯಾನಿಟೈಸರ್ ಹನಿಗಳನ್ನು ನೀಡಿದ ನಂತರ ಐದು ವರ್ಷದೊಳಗಿನ 12 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯವತ್ಮಾಲ್ ಜಿಲ್ಲಾ ಕೌನ್ಸಿಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕೃಷ್ಣ ಪಂಚಲ್  ಈ ಕುರಿತು ಮಾಹಿತಿಯನ್ನು ನೀಡಿದ್ದು, ಈಗ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.  ಮತ್ತು ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತ, ವೈದ್ಯ, ಮತ್ತು ಆಶಾ ಕಾರ್ಯಕರ್ತ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.    

ದೆಹಲಿಯಲ್ಲಿ ಭೂಕಂಪನ

earthquick

ದೆಹಲಿ(27-01-2021): ಪಶ್ಚಿಮ ದೆಹಲಿಯಲ್ಲಿ ಲಘು ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.8 ದಾಖಲಾಗಿದೆ. ಬೆಳಿಗ್ಗೆ 9.17 ಕ್ಕೆ ಭೂಕಂಪನ ಸಂಭವಿಸಿದ್ದು, ಪ್ರಾಣಹಾನಿ, ನಷ್ಟದ ಬಗ್ಗೆ ವರದಿಯಾಗಿಲ್ಲ. ಅಕ್ಷಾಂಶ 28.66ಎನ್ ಮತ್ತು ರೇಖಾಂಶ 77.13 ಇ 15 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಇದು ಒಂದು ಸಣ್ಣ ಭೂಕಂಪ, ಆದ್ದರಿಂದ ಎಲ್ಲೆಡೆ ನಡುಕ ಅನುಭವವಾಗಿಲ್ಲ. ಪಶ್ಚಿಮ ದೆಹಲಿಯ ಸುತ್ತಮುತ್ತಲಿನಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೆಂಟರ್ ಫಾರ್ ಸೆಸ್ಮಾಲಜಿ (ಎನ್‌ಸಿಎಸ್) ನ ಮುಖ್ಯಸ್ಥ ಗೌತಮ್ … Read more

18 ಮಹಿಳೆಯರನ್ನು ಕೊಲೆ ಮಾಡಿದ ಸೀರಿಯಲ್ ಕಿಲ್ಲರ್|  ಈತ ಘೋರ ಕೃತ್ಯವನ್ನು ನಡೆಸಲು ಕಾರಣವಾಯ್ತಂತೆ ಈತನ ಜೀವನದಲ್ಲಿ ನಡೆದ ಘಟನೆ!

 ಹೈದರಾಬಾದ್ (27-01-2021): ಆಘಾತಕಾರಿ ಘಟನೆಯೊಂದರಲ್ಲಿ, ಹೈದರಾಬಾದ್ ಪೊಲೀಸರು 18 ಮಹಿಳೆಯರನ್ನು ಕೊಲೆ ಮಾಡಿದ್ದಕ್ಕಾಗಿ 45 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸರಣಿ ಕೊಲೆಗಾರ ಮೈನಾ ರಾಮುಲು, ಉದ್ಯೋಗದಿಂದ ಕಲ್ಲು ಕತ್ತರಿಸುವವನಾಗಿದ್ದಾನೆ. ನಗರ ಪೊಲೀಸ್ ಕಾರ್ಯಪಡೆ ಮತ್ತು ರಾಚಕೊಂಡ ಕಮಿಷನರೇಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆತನ ಬಂಧನದೊಂದಿಗೆ, ಮಹಿಳೆಯರ ಇತ್ತೀಚಿನ ಎರಡು ಕೊಲೆ ಪ್ರಕರಣದ ಆರೋಪಿ ಕೂಡ ಅರೆಸ್ಟ್ ಆದಂತಾಗಿದೆ. ಈ ವ್ಯಕ್ತಿಯು 21 ನೇ ವಯಸ್ಸಿನಲ್ಲಿ ವಿವಾಹವಾಗಿದ್ದ. ವಿವಾಹದ ಬಳಿಕ ಆತನ ಪತ್ನಿ ಶೀಘ್ರದಲ್ಲೇ ಓಡಿಹೋಗಿದ್ದಳು. ಅಂದಿನಿಂದ ಆ … Read more