ಹೆಬ್ಬೆಟ್‌ ಗಿರಾಕಿ ಮೋದಿಯಿಂದ ದೇಶ ನಲುಗುತ್ತಿದೆ: ರಾಜ್ಯ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ ₹66, ಡೀಸೆಲ್ ₹55 ಕ್ಕೆ ದೊರಕುತ್ತಿತ್ತು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ರನಲ್ಲಿ ಅಭಿಪ್ರಾಯಪಟ್ಟಿದೆ.

ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮೂಲಕ #ಹೆಬ್ಬೆಟ್ಟುಗಿರಾಕಿಮೋದಿ ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಬಿಜೆಪಿ ಆಡಳಿತ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದೆ.

ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಕೇಂದ್ರ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ #ಹೆಬ್ಬೆಟ್‌ಗಿರಾಕಿಮೋದಿ ಯಿಂದ ದೇಶ ನಲುಗುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ. ಬೆಲೆ ಏರಿಕೆಯ ಬಗ್ಗೆ -ಮೌನ, ಕಾಶ್ಮೀರದ ದಳ್ಳುರಿಗೆ -ಮೌನ, ಚೀನಾ ಅತಿಕ್ರಮಣಕ್ಕೆ -ಮೌನ, ರೈತರ ಹತ್ಯೆಗೆ -ಮೌನ, ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ, ನಿರುದ್ಯೋಗದ ಬಗ್ಗೆ -ಮೌನ, ಪತ್ರಿಕಾಗೋಷ್ಠಿಗೆ ಮೌನ ಈ #ಹೆಬ್ಬೆ‌ಟ್‌ಗಿರಾಕಿಮೋದಿ ಎಂದು ಟ್ವೀಟ್ ಮಾಡಿದೆ.

ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ನರೇಂದ್ರ ಮೋದಿ ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. ಹೆಬ್ಬೆಟ್ಟು ಗಿರಾಕಿ ಮೋದಿ ಯಿಂದ ದೇಶ ನರಳುತ್ತಿದೆ ಎಂದಿದೆ.

ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ!ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ!ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ!ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ! #ಹೆಬ್ಬೆಟ್‌ಗಿರಾಕಿಮೋದಿ

👉 ಇಂಧನ ತೈಲಗಳಲ್ಲಿ ಏರಿದ ಸರಕಾರದ ಆದಾಯ.
2014 = ರೂ. 75 ಸಾವಿರ ಕೋಟಿ
2021 = ರೂ. 3.25 ಲಕ್ಷ ಕೋಟಿ.

👉ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕುಸಿತ. 2014ರಲ್ಲಿ- 55,2021ರಲ್ಲಿ – 101ಸರ್ಕಾರದ ಆದಾಯ ಹೆಚ್ಚಿದಂತೆ, ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. #ಹೆಬ್ಬೆಟ್‌ಗಿರಾಕಿಮೋದಿ ಸರ್ಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ? ಎಂದು ಕಾಂಗ್ರೆಸ್ಆರೋಪಿಸಿದೆ.

ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲರ ಹಗರಣದಲ್ಲಿ #ಹೆಬ್ಬೆಟ್‌ಗಿರಾಕಿಮೋದಿ ಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಾಯಕರಿಗಾದ ಹಂಚಿಕೆ ಎಷ್ಟು? ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸುವುದು ಲೂಟಿ ಅಲ್ಲದೇ ಮತ್ತೇನು? ಇದೇನಾ ಅಚ್ಛೇ ದಿನ್? : ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ವಿದ್ಯುತ್, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಮನಸೋಯಿಚ್ಛೆ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ತಲೆಯ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಪ್ಪಡಿ ಎಳೆದಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಶೇ. 30ರಷ್ಟು ಏರಿಸಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಮೊದಲು. ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ಮತ್ತು ಅದಾನಿ ಕಂಪನಿಯಿಂದ ಹೆಚ್ಚು ದರಕ್ಕೆ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇದಕ್ಕೆ … Read more

ಇಂಧನ ಬೆಲೆ ಏರಿಕೆ: ಜೂನ್ 11ಕ್ಕೆ ಕಾಂಗ್ರೆಸ್ ನಿಂದ ದೇಶವ್ಯಾಪಿ ಸಾಂಕೇತಿಕ ಪ್ರತಿಭಟನೆ

ನವದೆಹಲಿ: ದೇಶದಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಇಂಧನ ಬೆಲೆ ಏರಿಕೆ ವಿರೋಧಿಸಿ ಜೂ.11ಕ್ಕೆ ದೇಶವ್ಯಾಪಿ ಸಾಂಕೇತಿಕ ಪ್ರತಿಭಟನೆ ನಡೆಸಲು ಮುಂದಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇಂಧನ ಬೆಲೆಗ ರೂ.100 ಗಡಿ ದಾಟಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷವು ಬೀದಿಗಿಳಿಯಲು ನಿರ್ಧರಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ರಾಜ್ಯ ಘಟಕಗಳಿಗೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಸೂಚಿಸಲಾಗಿದೆ. ಕೋವಿಡ್ ಕಠಿಣ ಸಂದರ್ಭದಲ್ಲಿ ಜನತೆ ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ … Read more

ಬಿಜೆಪಿ ಸರ್ಕಾರಕ್ಕೆ ಹೆಡ್‌ಲೈನ್‌ ಮೇಲೆಯೇ ಆಸಕ್ತಿ, ಡೆಡ್‌ಲೈನ್‌ ಮೇಲೆ ಅಲ್ಲ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಕೋವಿಡ್‌ ಲಸಿಕೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಡ್‌ಲೈನ್‌ಗಳ ಬಗ್ಗೆ ಆಸಕ್ತಿಯೇ ಹೊರತು, ಡೆಡ್‌ಲೈನ್‌ ಬಗ್ಗೆ ಅಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಅವರು, ಎಲ್ಲ ಭಾರತೀಯರಿಗೂ ಉಚಿತವಾಗಿ ಲಸಿಕೆ ಸಿಗಬೇಕು. ಇದಕ್ಕಾಗಿ ಕೋವಿನ್‌ನಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಬಾರದು. ಏಕೆಂದರೆ, ಡಿಜಿಟಲ್‌ ಸೌಲಭ್ಯವಿಲ್ಲದವರೂ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದು ಪ್ರತಿಪಾದಿಸಿದರು. ರಾಜ್ಯಗಳಿಗೆ ಲಸಿಕೆ ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಪಾಡಬೇಕು, ಈ ವರ್ಷಾಂತ್ಯದ ವೇಳೆಗೆ ಸರ್ವರಿಗೂ … Read more

ಕೊಳಕು ಸೃಷ್ಟಿಸುವ ಬಿಜೆಪಿ ಐಟಿ ಸೆಲ್ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಡವೇ? ಎಂದ ಬ್ರಿಜೇಶ್ ಕಾಳಪ್ಪ

ಬೆಂಗಳೂರು : ಸೋನಿಯಾಗಾಂಧಿಯವರನ್ನು ನಿಂದಿಸುತ್ತಿರುವ ಕೊಳಕನ್ನು ಸೃಷ್ಟಿ ಮಾಡಿ ಬಿಜೆಪಿ ಐಟಿ ಸೆಲ್ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಕು ಬಾರಿಸಬೇಕು ಎನಿಸುವುದಿಲ್ಲವೇ ಎಂದು ಕಾಂಗ್ರೆಸ್ ವಕ್ತಾರ, ನ್ಯಾಯವಾದಿ ಬ್ರಿಜೇಶ ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೂಲ ಕಾರಣ ಏನೆಂದರೆ ಕಾಂಗ್ರೇಸ್ ನಾಯಕಿ ಸೋನಿಯಾ ಗಾಂಧಿ ಅವರ ಪೋಟೊ ಒಂದನ್ನು ಎಡಿಟ್ ಮಾಡಿ ಸುಳ್ಳು ಸುದ್ಧಿ ಹರಡಿಸಿದ ಬಿಜೆಪಿ ಐಟಿ ಸೆಲ್ ವಿರುದ್ಧ ಬ್ರಿಜೇಶ್ ಕಾಳಪ್ಪ ನವರು ಪೋಸ್ಟ್ ಒಂದು ಹಾಕಿದ್ದಾರೆ. ಆ ಪೋಸ್ಟ್ ಇಲ್ಲಿದೆ, ನೆಹರೂ-ಗಾಂಧಿ ಕುಟುಂಬದ ಸದಸ್ಯರ … Read more

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೊರೊನಾ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಇಡೀ ದೇಶ ತತ್ತರಿಸಿದೆ. ದೇಶದ ವಿವಿಧ ಪಕ್ಷಗಳ ಮುಖಂಡರಿಗೆ, ಮುಖ್ಯಮಂತ್ರಿಗಳಿಗೆ, ನಟ, ಕಲಾವಿದರಿಗೆ, ಸೇರಿದಂತೆ ಯಾರಿಗೂ ಬಿಡದೇ ಕೊರೊನಾ ಮಹಾಮಾರಿ ಕಾಡುತ್ತಿದೆ. ಈಗ
ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ ಕರೋನ ಸೋಂಕು ಧೃಡಪಟ್ಟಿದ್ದು, ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

‘ನನಗೆ ಕೋವಿಡ್ ಸೋಂಕು ರೋಗದ ಲಕ್ಷಣಗಳನ್ನು ಕಾಣಿಸಿದ ನಂತರ, ಕರೋನ ಸೊಂಕು ಇರೋದು ಪತ್ತೆಯಾಗಿದ್ದು, ಇತ್ತೀಚೆಗೆ ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರೂ, ದಯವಿಟ್ಟು ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಿನ್ನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆಗಾಗಿ ನಿನ್ನೆಯಿಂದ ಆಸ್ಪತ್ರೆಯಲ್ಲಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಿಲ್ಲ , ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ಸಹಾಯ ಧನ | ಅಸ್ಸಾಮಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ

ಗುವಾಹಟಿ: ಅಸ್ಸಾಮ್ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಗುವಾಹಟಿಯಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯು ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ. ಅದಕ್ಕಾಗಿಯೆಂದೇ ವಿಶೇಷ ಕಾನೂನನ್ನು ಮಾಡುತ್ತೇವೆ ಮೊದಲಾದ ಅಂಶಗಳು ಪ್ರಣಾಳಿಕೆಯಲ್ಲಿ ಅಡಕವಾಗಿವೆ. ರಾಜ್ಯದ ಪ್ರತಿಯೊಬ್ಬ ಗೃಹಿಣಿಗೂ ಮಾಸಿಕ ತಲಾ ಎರಡು ಸಾವಿರ ರೂಪಾಯಿಗಳಂತೆ ನೀಡಲಾಗುವುದು. ಇನ್ನೂರು ಯುನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು. ಚಹಾ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠಕೂಲಿಯನ್ನು 365 ರೂಪಾಯಿಗಳನ್ನಾಗಿ ಮಾಡುತ್ತೇವೆ. ಸರಕಾರೀ ಕ್ಷೇತ್ರದಲ್ಲಿ … Read more