18 ಮಹಿಳೆಯರನ್ನು ಕೊಲೆ ಮಾಡಿದ ಸೀರಿಯಲ್ ಕಿಲ್ಲರ್|  ಈತ ಘೋರ ಕೃತ್ಯವನ್ನು ನಡೆಸಲು ಕಾರಣವಾಯ್ತಂತೆ ಈತನ ಜೀವನದಲ್ಲಿ ನಡೆದ ಘಟನೆ!

 ಹೈದರಾಬಾದ್ (27-01-2021): ಆಘಾತಕಾರಿ ಘಟನೆಯೊಂದರಲ್ಲಿ, ಹೈದರಾಬಾದ್ ಪೊಲೀಸರು 18 ಮಹಿಳೆಯರನ್ನು ಕೊಲೆ ಮಾಡಿದ್ದಕ್ಕಾಗಿ 45 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸರಣಿ ಕೊಲೆಗಾರ ಮೈನಾ ರಾಮುಲು, ಉದ್ಯೋಗದಿಂದ ಕಲ್ಲು ಕತ್ತರಿಸುವವನಾಗಿದ್ದಾನೆ. ನಗರ ಪೊಲೀಸ್ ಕಾರ್ಯಪಡೆ ಮತ್ತು ರಾಚಕೊಂಡ ಕಮಿಷನರೇಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆತನ ಬಂಧನದೊಂದಿಗೆ, ಮಹಿಳೆಯರ ಇತ್ತೀಚಿನ ಎರಡು ಕೊಲೆ ಪ್ರಕರಣದ ಆರೋಪಿ ಕೂಡ ಅರೆಸ್ಟ್ ಆದಂತಾಗಿದೆ. ಈ ವ್ಯಕ್ತಿಯು 21 ನೇ ವಯಸ್ಸಿನಲ್ಲಿ ವಿವಾಹವಾಗಿದ್ದ. ವಿವಾಹದ ಬಳಿಕ ಆತನ ಪತ್ನಿ ಶೀಘ್ರದಲ್ಲೇ ಓಡಿಹೋಗಿದ್ದಳು. ಅಂದಿನಿಂದ ಆ … Read more

16 ವರ್ಷದ ಬಾಲಕಿಯನ್ನು ಬಲವಂತವಾಗಿ  56 ವರ್ಷದ ವ್ಯಕ್ತಿಗೆ ವಿವಾಹ| ನಿಕಾಹ್ ನಡೆಸಿಕೊಟ್ಟ ಖಾಜಿ ಸೇರಿ ಮಧ್ಯವರ್ತಿಗಳು ಅರೆಸ್ಟ್

up police

ಹೈದರಾಬಾದ್ (31-12-2020): ಕೇರಳ ಮೂಲದ 56 ವರ್ಷದ ವ್ಯಕ್ತಿಗೆ 16 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸಿದ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ರಕ್ಷಿಸಿದ್ದಾರೆ. ಬಾಲಕಿಯ ಚಿಕ್ಕಮ್ಮ ಮತ್ತು ಮಧ್ಯವರ್ತಿಗಳು ಮತ್ತು ನಿಕಾಹ್ ನಡೆಸಿಕೊಟ್ಟ ಖಾಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಯಾಗಿ ವರ್ತಿಸಿದ ಅಬ್ದುಲ್ ರಹಮಾನ್ ಮತ್ತು ವಸೀಮ್ ಖಾನ್ ಮತ್ತು ನಿಕಾಹ್ ಅನ್ನು ಮಾಡಿಸಿದ ಮಲಕ್ಪೇಟ್‌ನ ಖಾಜಿ ಮೊಹಮ್ಮದ್ ಬದಿಯುದ್ದೀನ್ ಕ್ವಾದ್ರಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಕೇರಳ ಮೂಲದ … Read more

Fact Check: ಒಂದೇ ದಿನದಲ್ಲಿ 92 ಪೊಲೀಸ್ ಸಿಬ್ಬಂದಿಗಳ ಅಮಾನತು!

police

ಹೈದರಾಬಾದ್ (04-12-2020):ಡಿ.1 ರಂದು ನಡೆದ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ರಾಜಕಾರಣಿಗಳಿಗೆ ಪಕ್ಷಪಾತ ತೋರಿದ ಕಾರಣಕ್ಕಾಗಿ 92 ಪೊಲೀಸ್ ಸಿಬ್ಬಂದಿಯನ್ನು ಒಂದೇ ದಿನದಲ್ಲಿ ಅಮಾನತುಗೊಳಿಸಲಾಗಿದೆ ಎಂಬ ವರದಿಯನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ನಿರಾಕರಿಸಿದ್ದಾರೆ. 72 ಕಾನ್‌ಸ್ಟೆಬಲ್‌ಗಳು ಮತ್ತು 20 ಮುಖ್ಯ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮತ್ತು ವೇತನ ಕಡಿತ ಮಾಡಲಾಗಿದೆ ಎಂದು ವರದಿಯಾಗಿತ್ತು. ನಕಲಿ ಸುದ್ದಿಗಳನ್ನು ವರದಿ ಮಾಡಿದ ಮಾದ್ಯಮದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಅಂಜನಿ ಕುಮಾರ್ ಹೇಳಿದ್ದಾರೆ. ಒಂದೇ … Read more

ಹೈದ್ರಾಬಾದ್ ಗೆ ಟ್ರಂಪ್ ಮಾತ್ರ ಬರಲು ಬಾಕಿ| ಬಿಜೆಪಿ ನಾಯಕರ ಪ್ರಚಾರದ ಅಬ್ಬರಕ್ಕೆ ಒವೈಸಿ ಪ್ರತಿಕ್ರಿಯೆ

owaisi

ಹೈದರಾಬಾದ್‌ (29-11-2020): ಹೈದರಾಬಾದ್‌ನಲ್ಲಿ ನಡೆಯಲಿರುವ ಸ್ಥಳೀಯ ಪುರಸಭೆ ಚುನಾವಣೆಗೆ ಬಿಜೆಪಿಯ ಅತಿದೊಡ್ಡ ನಾಯಕರು ಮೆರವಣಿಗೆ ನಡೆಸುತ್ತಿರುವ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಟೀಕಿಸಿದ್ದು, ಟ್ರಂಪ್ ಮಾತ್ರ ಬರಲು ಬಾಕಿ ಎಂದು ಹೇಳಿದ್ದಾರೆ. ಹೈದರಾಬಾದ್‌ನ ಲ್ಯಾಂಗರ್ ಹೌಸ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಬಿಜೆಪಿಗಾಗಿ ಪ್ರಚಾರ ಮಾಡುವ ನಾಯಕರ ಪ್ರಕಾರ ಇದು ಹೈದರಾಬಾದ್ ಚುನಾವಣೆಯಂತೆ ಕಾಣುತ್ತಿಲ್ಲ. ಪ್ರಧಾನಿಯನ್ನು ಆಯ್ಕೆ ಮಾಡುವಂತಿದೆ. ನಾನು ಕಾರ್ವಾನ್‌ನಲ್ಲಿ ನಡೆದ ರ್ಯಾಲಿಯಲ್ಲಿದ್ದೆ ಎಲ್ಲರನ್ನು ಅದನ್ನೇ ಹೇಳುತ್ತಿದ್ದರು ಎಂದು ಹೇಳಿದರು. ಅವರು ರ್ಯಾಲಿಗೆ … Read more

ಸ್ಥಳೀಯ ಸಂಸ್ಥಗಳ ಚುನಾವಣೆ ಪ್ರಚಾರಕ್ಕೆ ಇಳಿದ ಬಿಜೆಪಿಯ ಟಾಪ್ ಲೀಡರ್ಸ್| ಮಹತ್ವದ ವಿಚಾರಗಳನ್ನು ಉಲ್ಲೇಖಿಸಿ ಒವೈಸಿ ಭಾಷಣ..  

owaisi

ಹೈದರಾಬಾದ್ (28-11-2020): ಬಿಜೆಪಿ ಯಾವುದೇ ವಿರೋಧ ಪಕ್ಷ ದೇಶದಲ್ಲಿ ಇರಬಾರದು ಎಂದು ಬಯಸುತ್ತದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಚುನಾವಣಾ ಸಭೆಗಳನ್ನುದ್ದೇಶಿಸಿ ಮಾತನಾಡಿದ ಓವೈಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಚಾರ ಮಾಡಲು ಬಿಜೆಪಿ ಹಲವಾರು ಉನ್ನತ ನಾಯಕರನ್ನು ಧುಮುಕಿಸಿಕೊಂಡಿದೆ. ಅಂತರಾಷ್ಟ್ರೀಯವಾಗಿ ನೋಡುವುದಾದರೆ, ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪ್ರಚಾರಕ್ಕಾಗಿ ಅಮೆರಿಕಕ್ಕೆ ತೆರಳಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆಯನ್ನು ಎತ್ತಿದ್ದರು. ಮೋದಿಯವರು ಯಾರನ್ನು ಬೆಂಬಲಿಸಿದರೂ ಅವರು ಸೋತಿದ್ದಾರೆ. ಮೋದಿ … Read more

ವೀರ್ ಚಕ್ರ ಸೈಯದ್ ಶಾಹಿದ್  ನಖ್ವಿ ನಿಧನ| ಐಎಎಫ್‌ನ ಮರೆಯಲಾಗದ ಸಾಧಕ ಇನ್ನಿಲ್ಲ

Shahid Naqv

ಹೈದರಾಬಾದ್(27-11-2020): ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಏರ್ ಮಾರ್ಷಲ್ ಸೈಯದ್ ಶಾಹಿದ್ ಹುಸೇನ್ ನಖ್ವಿ ನಿಧನರಾಗಿದ್ದಾರೆ. ಸುಲ್ತಾನ್ ಶಾಹಿಯ ಡೈರಾ ಮಿರ್ ಮೊಮಿನ್ನಲ್ಲಿರುವ ಕಬರಸ್ಥಾನದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಭಾರತೀಯ ವಾಯುಪಡೆ (ಐಎಎಫ್) ಅಗಲಿದ ಮಹಾನ್ ಆತ್ಮಕ್ಕೆ ಗೌರವ ಸಲ್ಲಿಸಿತು. ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಏರ್ ಮಾರ್ಷಲ್ ಶಾಹಿದ್ ನಖ್ವಿ ಅವರ ಮಗ ಕ್ಯಾಪ್ಟನ್ ಸೈಯದ್ ಶಕೀಲ್ ನಖ್ವಿ ಮತ್ತು ಇಬ್ಬರು ಹೆಣ್ಣುಮಕ್ಕಳು ಯುಎಸ್ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ … Read more

ಬೆಳ್ಳಂಬೆಳಿಗ್ಗೆ ಬೆಟ್ಟದಿಂದ ಕೆಳಗೆ ಬಿದ್ದ ವ್ಯಾನ್| ಒಂದೇ ಕುಟುಂಬದ 7 ಮಂದಿ ದುರ್ಮರಣ

accident

ಹೈದರಾಬಾದ್(30-10-2020): ಬೆಳ್ಳಂಬೆಳಿಗ್ಗೆ ಸಂಭವಿಸಿದ ಭೀಕರ ದುರಂತದಲ್ಲಿ ವ್ಯಾನ್ ವೊಂದು ಬೆಟ್ಟದಿಂದ ಉರುಳಿ ಬಿದ್ದು 7 ಮಂದಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಂಟಿಕೊಂಡ ಬಳಿ ದುರ್ಘಟನೆ ನಡೆದಿದೆ. ವ್ಯಾನ್ ನ  ಬ್ರೇಕ್ ಫೇಲ್ ಆದ ಕಾರಣ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತರು ಒಂದೇ ಕುಟುಂಬದವರಾಗಿದ್ದು ವಿವಾಹ ಕಾರ್ಯಕ್ರಮಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ಲೋಬಲ್ ಸಿಟಿ ಎಂದು ಘೋಷಿಸಿದ ಒಂದು ವಾರದಲ್ಲೇ ಪ್ರವಾಹಕ್ಕೆ ಮುಳುಗಿದ ಸಿಟಿ| ಈ ಅನಾಹುತಕ್ಕೆ ಕಾರಣ ಏನು?

globel city

ಹೈದರಾಬಾದ್ (16-10-2020): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೈದರಾಬಾದ್ ಅನ್ನು ‘ಜಾಗತಿಕ ನಗರ’ ಎಂದು ಹೆಸರಿಸಿದ್ದಾರೆ. ಇದೇ ಹೈದರಾಬಾದ್ ಈ ವಾರದ ಆರಂಭದಲ್ಲಿ ಪ್ರವಾಹಕ್ಕೆ ತುತ್ತಾಗಿತ್ತು ಮತ್ತು ಪ್ರಮುಖ ರಸ್ತೆಗಳು ಕುಸಿದು ನಂತರ ಇತರ ಭಾಗಗಳಿಂದ ಸಂಪರ್ಕವನ್ನೇ ಕಡಿದುಕೊಂಡಿದೆ. ನಗರೀಕರಣದ ಕಳಪೆ ನಗರ ಯೋಜನೆ, ಅವಾಸ್ತವ ಒಳಚರಂಡಿ ವ್ಯವಸ್ಥೆ ಮತ್ತು ನದಿ, ಬಹು ಹೊಳೆಗಳು ಮತ್ತು ನೀರು-ಸಂಗ್ರಹ ಟ್ಯಾಂಕ್‌ಗಳ ಕರುಣಾಜನಕ ಸ್ಥಿತಿಯಿಂದ ಪ್ರವಾಹಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಹೈದರಾಬಾದ್‌ನ ಹೆಚ್ಚಿನ ಭಾಗಗಳು ಪ್ರವಾಹದ ನಂತರ ಎರಡು … Read more