ತನ್ನ ಇನ್ನೊಬ್ಬ ಮಗನ ಸಾಧನೆ ಬಗ್ಗೆ ಖುಷಿ ಹಂಚಿಕೊಂಡ ರೋಹಿತ್ ವೇಮುಲಾ ತಾಯಿ | ಜನರಿಗಾಗಿ ಮತ್ತು ಅವರ ಹಕ್ಕುಗಳಿಗಾಗಿ ನನ್ನ ಮಗನಿನ್ನು ನ್ಯಾಯಾಲಯದಲ್ಲಿ ಹೋರಾಡಲಿರುವನು : ರಾಧಿಕಾ ವೇಮುಲಾ

ಹೈದರಾಬಾದ್(19-12-2020): ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ತನ್ನ ಇನ್ನೊಬ್ಬ ಮಗನ ಸಾಧನೆಯ ಬಗ್ಗೆ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಮಗ ರಾಜಾ ವೇಮುಲನು ಇನ್ನು ಮುಂದೆ ಜನರಿಗಾಗಿ ಮತ್ತು ಜನರ ಹಕ್ಕುಗಳಿಗಾಗಿ ನ್ಯಾಯಾಲಯದಲ್ಲಿ ಹೋರಾಡಲಿದ್ದಾನೆ ಎಂದು ಹೇಳಿದ್ದಾರೆ. ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅಲ್ಲಿ ನಡೆಯುತ್ತಿದ್ದ ಜಾತಿ ತಾರತಮ್ಯದ ಕಾರಣದಿಂದ 2016 ರ ಜನವರಿ ಹದಿನೇಳನೇ ತಾರೀಕಿನಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಷನ್ ಸದಸ್ಯನಾಗಿದ್ದ ರೋಹಿತ್, ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲೂ ಸಕ್ರಿಯನಾಗಿದ್ದ. … Read more