ಉದ್ಯೋಗಿಗಳಿಗೆ ವೇತನ ನೀಡಲು ಹಣದ ಕೊರತೆ | ಪ್ರತಿಷ್ಠಿತ ಹೋಟೆಲ್ ಹಯಾತ್ ರಿಜೆನ್ಸಿ ಬಂದ್.‍.

ಮುಂಬಯಿ: ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗದೇ ಪ್ರಸಿದ್ಧ ಮತ್ತು ಪ್ರತಿಷ್ಠಿತ ಹೋಟೆಲ್ ಹಯಾತ್ ರಿಜೆನ್ಸಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕೋವಿಡ್ ಸಂದಿಗ್ಧತೆಯ ಕಾರಣದಿಂದ ಇತ್ತೀಚಿಗಿನ ದಿನಗಳಲ್ಲಿ ಹೋಟೆಲ್ ನಷ್ಟದಿಂದ ನಡೆಯುತ್ತಿತ್ತು ಎನ್ನಲಾಗಿದೆ. ಉದ್ಯೋಗಿಗಳಿಗೆ ವೇತನ ನೀಡಲು ಸೇರಿದಂತೆ, ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ ಎಂದು ಹೋಟೆಲ್ ನಿರ್ವಾಹಕರು ತಿಳಿಸಿದ್ದಾರೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವೇ ಇರುವ ಈ ಹೋಟೆಲ್ ‘ಏಸಿಯನ್ ವೆಸ್ಟ್ ಲಿಮಿಟೆಡ್‘ ಎಂಬ ಸಂಸ್ಥೆಯ ಮಾಲಕತ್ವದಲ್ಲಿತ್ತು. ‘ಏಸಿಯನ್ ವೆಸ್ಟ್ ಲಿಮಿಟೆಡ್‘ ಸಂಸ್ಥೆ ಕೂಡಾ ಹೋಟೆಲನ್ನು ಮುನ್ನಡೆಸಲು, ಉದ್ಯೋಗಿಗಳಿಗೆ ವೇತನ ನೀಡಲು ಬೇಕಾಗಿರುವ ಹಣವನ್ನು ಕಳುಹಿಸಿ ಕೊಟ್ಟಿರಲಿಲ್ಲ. … Read more