ಭಾರತದ ಅದಮ್ಯ ಚೇತನ ‘ಭಗತ್ ಸಿಂಗ್ ‘ ನೆನಪು…!

“ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಚಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.” ಇಂತಹ ಕೋರಿಕೆಯ ಮಾತುಗಳು ಬ್ರಿಟೀಷ್ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೇಳಿರುವ ಕ್ರಾಂತಿಕಾರಿ ವೀರ ಯಾರು ಗೊತ್ತಾ? ಭಗತ್ ಸಿಂಗ್…!! ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನ ಶಾಹಿದ್ ಭಗತ್ ಸಿಂಗ್. ಬ್ರಿಟಿಷ್ ವಸಾಹತುಶಾಹಿಯ ನೇಣಿಗೆ ನಗು ನಗುತ್ತಲೇ ಕೊರಳೊಡ್ಡಿದ ಭಾರತದ … Read more

ಗೋಡ್ಸೆಯನ್ನು ಆರಾಧಿಸುವವರು ಹೆಚ್ಚಾಗಿದ್ದಾರೆ| ಹುತಾತ್ಮರ ದಿನಾಚರಣೆಯಲ್ಲಿ ಸಿದ್ದರಾಮಯ್ಯ ಮಹತ್ವದ ಭಾಷಣ

ಬೆಂಗಳೂರು(30-01-2021): ಗಾಂಧೀಜಿಯನ್ನು ಹತ್ಯೆ ಮಾಡಿದ ಕೊಲೆಗಡುಕನನ್ನು ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗಿದ್ದಾರೆ. ಗೋಡ್ಸೆ ಈಗ ನಮಗೆ ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ  ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು ಗಾಂಧೀಜಿ ಸಮಾಜ ಸುಧಾರಕರಾಗಿದ್ದರು. ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆ ಎಂಬ ಪಂಚ ಸೂತ್ರಗಳ ಮೇಲೆ ತಮ್ಮ ಜೀವನ ಪಯಣ ನಡೆಸಿದ ಗಾಂಧೀಜಿ ಮಹಾನ್ ಸಮಾಜ ಪರಿವರ್ತಕ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಹಾತ್ಮಗಾಂಧೀಜಿಯವರು ಹುತಾತ್ಮರಾದ ದಿನವನ್ನು … Read more