ಪ್ರೇಮಿಗಳ ದಿನದಂದು ಪತ್ನಿಗೆ ಕಿಡ್ನಿ ನೀಡಿದ ಪತಿ

ನವದೆಹಲಿ(15-02-2021): ಪ್ರೇಮಿಗಳ ದಿನದಂದು ಹೂವುಗಳು, ಚಾಕೊಲೇಟ್‌ಗಳು ಅಥವಾ ದುಬಾರಿ ಉಡುಗೊರೆಗಳನ್ನು ಕೊಡುವುದನ್ನು ನಾವು ನೋಡಿದ್ದೇವೆ ಆದರೆ ಇಲ್ಲೊಬ್ಬ ವ್ಯಕ್ತಿಯು ತನ್ನ ಹೆಂಡತಿಗೆ ಎಂದಿಗೂ ಮರೆಯಲಾಗದ ದುಬಾರಿ ಗಿಫ್ಟನ್ನು ನೀಡಿ ಸುದ್ದಿಯಾಗಿದ್ದಾನೆ. ಪ್ರೇಮಿಗಳ ದಿನದಂದು ಪ್ರೀತಿಯ ಸಂಕೇತವಾಗಿ, ವ್ಯಕ್ತಿಯೊಬ್ಬರು ತಮ್ಮ 23 ನೇ ವಿವಾಹ ವಾರ್ಷಿಕೋತ್ಸವದಂದು ಅಹಮದಾಬಾದ್‌ನಲ್ಲಿರುವ ತಮ್ಮ ಅನಾರೋಗ್ಯ ಪೀಡಿತ ಹೆಂಡತಿಗೆ ಕಿಡ್ನಿಯನ್ನು ದಾನಮಾಡಿದ್ದಾರೆ. ವಿನೋದ್ ಪಟೇಲ್ ಅವರು ಪತ್ನಿ ರಿಟಾಬೆನ್ ಪಟೇಲ್ ಅವರಿಗೆ ಈ ದುಬಾರಿ ಗಿಫ್ಟ್ ನ್ನು ನೀಡಿದ್ದಾರೆ. ಮೂತ್ರಪಿಂಡ ಕಾಯಿಲೆಯಿಂದ ರಿಟಾಬೆನ್ ಬಳಲುತ್ತಿದ್ದರು. … Read more

ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ ಮಹಿಳಾ ಐಪಿಎಸ್ ಅಧಿಕಾರಿ

varthika katyar

ಬೆಂಗಳೂರು(06-02-2021):  ಮಹಿಳಾ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವರ್ತಿಕಾ ಕಟಿಯಾರ್ ತಮ್ಮ ಪತಿ ಐಎಫ್ ಎಸ್ ಅಧಿಕಾರಿ ನಿತಿನ್ ಸುಭಾಷ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ನಿತಿನ್ ಸೇರಿದಂತೆ 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ವರ್ತಿಕಾ ಅವರಿಗೆ 2011ರಲ್ಲಿ ನಿತಿನ್ ಜೊತೆ ಮದುವೆಯಾಗಿತ್ತು. ಪತಿ ವರದಕ್ಷಿಣೆಗಾಗಿ ಕಿರುಕುಳ ಮತ್ತು ದೈಹಿಕ ದೌರ್ಜನ್ಯವನ್ನೂ ನೀಡುತ್ತಿದ್ದಾರೆ … Read more

ಮೊದಲ ಪತ್ನಿಯ ದರ್ಶನವಾಗುವ ವರೆಗೂ ತೆಂಗಿನ ಮರವೇರಿ ಕುಳಿತ!

ಬಳ್ಳಾರಿ(16-12-2020): ಪತ್ನಿಯರು ತನ್ನ ಜೊತೆಗೆ ಬದುಕುತ್ತಿಲ್ಲವೆಂದು ಬೇಸತ್ತು ಪತಿರಾಯ ತೆಂಗಿನ ಮರವೇರಿ ಕುಳಿತ ವಿಲಕ್ಷಣ ಘಟನೆಯು ಬಳ್ಳಾರಿ ಜಿಲ್ಲೆಯ ದಾಸೋಬನಹಳ್ಳಿಯಲ್ಲಿ ನಡೆದಿದೆ. ಕೊನೆಗೆ ಮೊದಲ ಪತ್ನಿ ಬಂದು ಮುಖ ದರ್ಶನ ಮಾಡಿದ ಬಳಿಕ ನಲ್ವತ್ತು ವರ್ಷ ವಯಸ್ಸಿನ ದೊಡ್ಡಪ್ಪ ಎನ್ನುವ ಈ ವ್ಯಕ್ತಿ ಮರದಿಂದ ಕೆಳಗಿಳಿದಿದ್ದಾರೆ. ಮೊದಲ ಬಾರಿ ತನ್ನ ಸೋದರ ಸೊಸೆಯೊಂದಿಗೆ ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲ. ಇದೇ ಕಾರಣದಿಂದ ಆಕೆ ಪತಿಯನ್ನು ಬಿಟ್ಟು ತವರಿಗೆ ತೆರಳಿದ್ದಳು. ಬಳಿಕ ಇನ್ನೊಂದು ಮದುವೆಯಾಗಿ, ಮೂರು ಮಕ್ಕಳನ್ನು ಪಡೆದರು. ಆದರೆ ಐದು … Read more

ಜ್ಯೋತಿಷಿಯ ಮಾತು ಕೇಳಿ ಪತ್ನಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣನಾದ ಪತಿ ಪೊಲೀಸ್ ಬಲೆಗೆ

  ಬೆಂಗಳೂರು(15/11/2020): ಜೋತಿಷ್ಯರೊಬ್ಬರ ಮಾತು ಕೇಳಿ ಪತ್ನಿಗೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಪತಿ ಈಗ ಜೈಲು ಸೇರಿದ್ದಾ‌ನೆ. ಆತ್ಮಹತ್ಯೆ ಮಾಡಿಕೊಂಡಿರುವ ವಿವಾಹಿತೆಯನ್ನು ಅಶ್ವಿನಿ(25) ಎಂದು ಗುರುತಿಸಲಾಗಿದೆ. 9 ತಿಂಗಳ ಹಿಂದೆಯಷ್ಟೇ ಈಕೆಗೆ ಯುವರಾಜ್ ಎಂಬಾತನೊಂದಿಗೆ ಲವ್ ಮ್ಯಾರೇಜ್ ಆಗಿತ್ತು. ಕಾಲೇಜ್ ದಿನಗಳಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿ, ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದರು. ಇತ್ತೀಚೆಗೆ ಯುವರಾಜ್ ಜ್ಯೋತಿಷ್ಯರೊಬ್ಬರನ್ನು ಭೇಟಿ ಮಾಡಿದ್ದು, ಅವರು ಅಶ್ವಿನ್ ಗೆ ಮಕ್ಕಳಾಗುವುದಿಲ್ಲ ಎಂದಿದ್ದರು. ಆನಂತರ ಯುವರಾಜಗ ಹಾಗೂ ಆತನ ಕುಟುಂಬ ಅಶ್ವಿನಿಗೆ … Read more