ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಆಸ್ಪತ್ರೆಗೆ ದಾಖಲು

pragya

ನವದೆಹಲಿ(20-02-2021): ವಿವಾದಿತ ಬಿಜೆಪಿ ಸಂಸದೆ, ಪ್ರಗ್ಯಾ ಸಿಂಗ್ ಠಾಕೂರ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಸದರ ಕಚೇರಿ ಈ ಕುರಿತು ಅಧಿಕೃತ ಮಾಹಿತಿ ಹೊರಡಿಸಿದೆ. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಡಿಸೆಂಬರ್ ನಲ್ಲಿ ಕೋವಿಡ್ ಸೋಂಕು ತಗುಲಿ ಪ್ರಗ್ಯಾ ಸಿಂಗ್ ಠಾಕೂರ್ ಏಮ್ಸ್​ಗೆ ದಾಖಲಾಗಿದ್ದರು. ಇದೀಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಗ್ ನ್ಯೂಸ್ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಹೃದಯಾಘಾತ

gangoli

ಕೊಲ್ಕತ್ತಾ (02-01-2021): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಡೀರ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ  ಸೌರವ್ ಗಂಗೂಲಿ ಅವರನ್ನು ಕೋಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಗಂಗೂಲಿ ಬಿಸಿಸಿಐನ ಹಾಲಿ ಅಧ್ಯಕ್ಷರಾಗಿದ್ದು, ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ದೊರೆಯಬೇಕಿದೆ.      

ಆಂಧ್ರದಲ್ಲಿ ನಿಗೂಢ ರೋಗಕ್ಕೆ ಓರ್ವ ಬಲಿ, 7 ಮಂದಿ ಗಂಭೀರ: ಕೊರೊನಾ ಮಧ್ಯೆ ವೈದ್ಯರಿಗೆ ಸವಾಲು!

andhra

ವಿಜಯವಾಡ(07-12-2020): ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ರೋಗಕ್ಕೆ ಓರ್ವ ಬಲಿಯಾಗಿದ್ದು, ಆತಂಕ ಮನೆಮಾಡಿದೆ. 45 ವರ್ಷದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 7 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆಂಧ್ರದ ಎಲುರಿನ ಉತ್ತರ ಬೀದಿ, ದಕ್ಷಿಣ ಬೀದಿ, ಅರುಂಧತಿಪೇಟೆ ಮತ್ತು ಅಶೋಕ ನಗರ ಸುತ್ತಮುತ್ತಲ ನಗರದ 290ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಲ್ಲಿ ತಲೆ ನೋವು, ವಾಂತಿ, ತಲೆ ತಿರುಗುವಿಕೆ ಮತ್ತು ಮೂರ್ಛೆರೋಗ ಕಾಣಿಸಿಕೊಂಡಿದೆ. ನಿಗೂಢವಾದ ರೋಗಕ್ಕೆ ಕಾರಣ ಮತ್ತು ರೋಗದ … Read more

ಶಿವಸೇನೆ ಮುಖ್ಯಸ್ಥ ಸಂಜಯ್ ರೌತ್ ಆಸ್ಪತ್ರೆಗೆ ದಾಖಲು

sanjay rawth

ಮುಂಬೈ(12-03-2020): ಶಿವಸೇನೆ ಸಂಸದ ಮತ್ತು ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರೌತ್ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್ ರೌತ್ ಎರಡನೇ ಬಾರಿಗೆ ಆಂಜಿಯೋಪ್ಲ್ಯಾಸ್ಟಿಗಾಗಿ ಹೋಗುತ್ತಿದ್ದಾರೆ. ಸಂಜಯ್ ರೌತ್ ಒಂದು ವರ್ಷದ ಹಿಂದೆ ಮತ್ತೊಂದು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಸಂಜಯ್ ರೌತ್ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾವಿಕಾಸ್ ಅಘಾದಿ  ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.    

BIG BREAKING:ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನ

cm pa

ಬೆಂಗಳೂರು(28-11-2020): ಮುಖ್ಯಮಂತ್ರಿಗಳ ಪರಮಾಪ್ತ, ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಅಚ್ಚರಿಯ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಂತೋಷ್ ಅಸ್ವಸ್ಥರಾಗಿದ್ದು, ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತೀಚೆಗಷ್ಟೇ ಸಂತೋಷ್ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂದು ವರದಿಯಾಗಿತ್ತು.      

ಯುನಿಟಿ ಆಸ್ಪತ್ರೆ ಬಳಿ ಯುವಕನ ಕೊಲೆಯತ್ನ

crime

ಮಂಗಳೂರು(24-11-2020): ಫಳ್ನೀರ್ ನ ಯುನಿಟಿ ಆಸ್ಪತ್ರೆ ಬಳಿ ಯುವಕನ ಮೇಲೆ ತಂಡವೊಂದು ತಡರಾತ್ರಿ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ನೌಶಾದ್ ಎಂಬ ಯುವಕನ ಮೇಲೆ ದಾಳಿ ಮಾಡಲಾಗಿದೆ, ಗಂಭೀರವಾಗಿರುವ ನೌಶಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ಬಂದ ಗುಂಪು ದುಷ್ಕೃತ್ಯವನ್ನು ನಡೆಸಿದ್ದು, ನೌಶಾದ್ ಎದೆಭಾಗಕ್ಕೆ ಗಾಯವಾಗಿದೆ.