6ನೇ ತರಗತಿ ವಿದ್ಯಾರ್ಥಿಗಳಿಗೆ “ಹೊಸ ಧರ್ಮಗಳ ಉದಯ” ಪಾಠವನ್ನು ಬೋಧಿಸದಂತೆ ಸೂಚನೆ

ಬೆಂಗಳೂರು(19-02-2021): 6 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ 7 ನೇ ಪಾಠ (ಹೊಸ ಧರ್ಮಗಳ ಉದಯ)ವನ್ನು ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಚ್ಚರಿಯ ಆದೇಶ ಹೊರಡಿಸಿದೆ. ಈ ಪಠ್ಯವನ್ನು 2020-21ನೇ ಸಾಲಿನಲ್ಲಿ ಬೋಧನೆ, ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಚನೆಯಲ್ಲಿ ತಿಳಿಸಲಾಗಿದೆ. ಹೊಸ ಧರ್ಮಗಳ ಉದಯ ಪಾಠದಲ್ಲಿ ಉತ್ತರ ವೇದಗಳ ಕಾಲದಲ್ಲಿ ಯಜ್ಞ, ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಧಹಿಸುತ್ತಿದ್ದರು. ಇದರಿಂದಾಗಿ ಆಹಾರಗಳ ಕೊರತೆ ಉಂಟಾಗಿದೆ. ವರ್ಣ ವ್ಯವಸ್ಥೆಯಿಂದ … Read more