ಬಂಧನದ ವೇಳೆ ಅರ್ನಬ್ ಮನೆಯಲ್ಲಿ ಪ್ರಹಸನವೇ ನಡೆಯಿತು! ವಿಡಿಯೋ ವೀಕ್ಷಿಸಿ

arnab goswami

ಮುಂಬೈ(04-11-2020):ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಪತ್ರಕರ್ತ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯನ್ನುಮುಂಬೈ ಪೊಲೀಸರು  ಇಂದು ಅವರ ನಿವಾಸದಲ್ಲಿ ಬಂಧಿಸಿದ್ದಾರೆ.  ಇಂದು ಬೆಳಿಗ್ಗೆ ಮುಂಬೈಯಲ್ಲಿರುವ ಅರ್ನಬ್ ಗೋಸ್ವಾಮಿ ನಿವಾಸಕ್ಕೆ ಹಠಾತ್ ದಾಳಿ ನಡೆಸಿದ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ವೇಳೆ ಅರ್ನಬ್ ಪೊಲೀಸರ ಮುಂದೆ ಪ್ರಹಸನವನ್ನು ಮಾಡಿದ್ದು, ಈ ಕುರಿತು ವಿಡಿಯೋ ವೈರಲ್ ಆಗಿದೆ. ವಿಡಿಯೋ ವೀಕ್ಷಿಸಿ, ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಆಗಿ

ಭಾವುಕರಾದ ಧೋನಿ|ವಿಡಿಯೋ ವೈರಲ್

ದೆಹಲಿ(28-10-2020): ಅಭಿಮಾನಿಯ ಪ್ರೀತಿಯನ್ನು ಕಂಡು ಎಂ.ಎಸ್ ಧೋನಿ ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋ ಸಿಎಸ್ ಕೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮಿಳುನಾಡಿನ ಗೋಪಿಕೃಷ್ಣನ್​ ಎಂಬವರು ತಮ್ಮ ಮನೆಗೆ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸಂಕೇತವಾದ ಹಳದಿ ಬಣ್ಣ ಹಾಗೂ ಮನೆಯ ತುಂಬೆಲ್ಲ ಧೋನಿಯ ಚಿತ್ರ ಬಿಡಿಸಿದ್ದರು. ಇದು ಧೋನಿ ಭಾವುಕರಾಗಲು ಕಾರಣವಾಗಿದೆ. ಇನ್​ಸ್ಟಾಗ್ರಾಂನಲ್ಲಿ ನಾನು ಈ ವಿಡಿಯೋ ನೋಡಿದೆ. ಇದು ಕೇವಲ ನನ್ನ ಮೇಲಿರುವ ಪ್ರೀತಿ ಮಾತ್ರವಲ್ಲ. ಸಿಎಸ್​ಕೆ ತಂಡದ ಮೇಲಿನ ಅಭಿಮಾನ ಎಂದು  ಧೋನಿ … Read more

ಶಾಸಕ ಕೆಎಂ ಶಾಜಿ ನಿವಾಸವನ್ನು ನೆಲಸಮಗೊಳಿಸುವಂತೆ ಆದೇಶ

km shaji

ಕೋಝಿಕ್ಕೋಡ್(24-10-2020): ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಕೋಝಿಕ್ಕೊಡ್ ಶಾಸಕ ಕೆಎಂ ಶಾಜಿಗೆ ಕೋಝಿಕೋಡ್  ಕಾರ್ಪೊರೇಷನ್ ನೋಟಿಸ್ ನೀಡಿದ್ದು, ಅವರ ನಿವಾಸವನ್ನು ನೆಲಸಮಗೊಳಿಸುವಂತೆ ಆದೇಶಿಸಿದೆ. ಶಾಜಿಯ ಮನೆಯನ್ನು ನಿರ್ಮಿಸುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಮನೆಯನ್ನು ಉರುಲಿಸಲು ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ಮನೆಯ ವಿಸ್ತೀರ್ಣವನ್ನು ಅಳೆಯುತ್ತಾರೆ ಮತ್ತು  ಮನೆ ನಿಗದಿಪಡಿಸಿದ ಪ್ರದೇಶವನ್ನು ಮೀರಿದೆ ಎಂದು ದಾಖಲಿಸಿದ್ದಾರೆ. 200 ಚದರ ಅಡಿ ಭೂಮಿಯಲ್ಲಿ ಮನೆ ನಿರ್ಮಿಸಲು ಶಾಜಿ ಕೋಝಿಕ್ಕೋಡ್ ಕಾರ್ಪೊರೇಶನ್‌ನಿಂದ ಅನುಮತಿ ಕೋರಿದ್ದರು. ಆದರೆ, ಈಗ ಈ … Read more

ಯೋಗಿ ರಾಜ್ಯದಲ್ಲಿ ಸೈನಿಕರೂ ಸೇಫ್ ಅಲ್ಲ? ಮಾಜಿ ಸೈನಿಕನ ಮನೆಗೆ ನುಗ್ಗಿ ಗೂಂಡಾಗಿರಿ

ನವದೆಹಲಿ(09-10-2020): ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ನಿವೃತ್ತ ಸೈನಿಕ ಮತ್ತು ಅವರ ಕುಟುಂಬದ ಸದಸ್ಯರನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಗೂಂಡಾಗಳು ಕ್ರೂರವಾಗಿ ಥಳಿಸಿದ್ದಾರೆ. ಕೋಲುಗಳು ಮತ್ತು ಕಬ್ಬಿಣದ ಸರಳುಗಳಿಂದ ಶಸ್ತ್ರಸಜ್ಜಿತವಾದ ಕೆಲವು ಅಪರಿಚಿತ ಯುವಕರು ಮಾಜಿ ಸೈನಿಕನ ಮನೆಗೆ ನುಗ್ಗಿ  ಹಲ್ಲೆ ನಡೆಸಿದ್ದಾರೆ. ಗೂಂಡಾಗಳು ಕುಟುಂಬದ ಮಹಿಳಾ ಸದಸ್ಯರ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ … Read more

ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ

dkc

ಬೆಂಗಳೂರು(05-10-2020):  ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ಡಿಕೆಶಿ ಅವರ ಕನಕಪುರ, ಸದಾಶಿವ ನಗರದ ಮನೆ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಬೆಂಗಳೂರು ಸಿಬಿಐ ಅಧಿಕಾರಗಳ ತಂಡ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದಾರೆ.