ಕೆಎಸ್‌ಆರ್ ಟಿಸಿ ಬಸ್ ಪಲ್ಟಿ: ಇಬ್ಬರು ದುರ್ಮರಣ, ಹಲವರು ಗಂಭೀರ

ಚಿತ್ರದುರ್ಗ(06-12-2020): ಹಿರಿಯೂರು ಚಳ್ಳಕೆರೆ ಬಳಿ  ಕೆಎಸ್‌ಆರ್ ಟಿಸಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ನಡೆದಿದೆ. ಯಾದಗಿರಿ ಮೂಲದ ಬಸವರಾಜ್ (32), ಐಶ್ವರ್ಯ ‌(12)ಮೃತರು. ಶಹಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಚಳ್ಳಕೆರೆ ಬಳಿ   ಪಲ್ಟಿಯಾಗಿದೆ. ಬಸ್ಸಿನಲ್ಲಿ ಮಕ್ಕಳು ಸೇರಿ 50ಕ್ಕೂ ಅಧಿಕ ಪ್ರಯಾಣಿಕರಿದ್ದರು. ಘಟನೆಯಲ್ಲಿ  ಐವರು ಗಂಭೀರವಾಗಿದ್ದು,ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಿರಿಯೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.