ರಾಮಮಂದಿರ ಕಟ್ಟಲು ದೇಣಿಗೆ ನೀಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸಾವಿರಾರು ಚೆಕ್ಕುಗಳು ಬೌನ್ಸ್!

ಲಕ್ನೋ: ರಾಮಮಂದಿರ ಕಟ್ಟಲೆಂದು ದೇಣಿಗೆಯಾಗಿ ಬಂದಿದ್ದ ಚೆಕ್ಕುಗಳು ಬೌನ್ಸ್ ಆಗಿರುವ ಬಗ್ಗೆ ವರದಿಯಾಗಿದೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಅಂಶವು ಬೆಳಕಿಗೆ ಬಂದಿದೆ. ಸುಮಾರು 15000 ದಷ್ಟು ಚೆಕ್ಕುಗಳು ಬೌನ್ಸ್ ಆಗಿದ್ದು, ಇವೆಲ್ಲಾ ಸೇರಿದರೆ ಸುಮಾರು 22 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ಬೌನ್ಸ್ ಆಗಿರುವ ಹದಿನೈದು ಸಾವಿರ ಚೆಕ್ಕುಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಚೆಕ್ಕುಗಳನ್ನು ಅಯೋಧ್ಯೆಯಲ್ಲಿಯೇ ಸಂಗ್ರಹಿಸಲಾಗಿದೆ. ಕೆಲವು ಖಾತೆಗಳಲ್ಲಿ ಸಾಕಷ್ಟು ಹಣ ಇಲ್ಲದೇ ಹೋದ ಕಾರಣದಿಂದಾಗಿ, ಇನ್ನು ಕೆಲವು ಖಾತೆಗಳಲ್ಲಿ ಕಂಡು ಬಂದ … Read more

ವಿಷಾಹಾರ ಸೇವನೆ: ಗೋ ಶಾಲೆಯಲ್ಲಿ ಭಾರೀ ಪ್ರಮಾಣದಲ್ಲಿ ದನಗಳ ಸಾವು

ಬಿದಾಸರ್(21-11-2020): ರಾಜಸ್ಥಾನದ ಗೋ ಶಾಲೆಯೊಂದರಲ್ಲಿ ಭಾರೀ ಪ್ರಮಾಣದ ದನಗಳು ಸಾವಿಗೀಡಾಗಿವೆ. ವಿಷಾಹಾರ ಸೇವನೆಯೇ ಇದಕ್ಕೆ ಕಾರಣವೆನ್ನಲಾಗಿದೆ. ಚುರು ಜಿಲ್ಲೆಯ ರಾಮ್ ಪುರ ಗ್ರಾಮದ ಗೋಶಾಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಒಂದೊಂದೇ ದನಗಳು ಸಾವಿಗೀಡಾಗುತ್ತಾ ಬಂದಿತ್ತು. ಈ ವರೆಗೆ ಸುಮಾರು ಎಪ್ಪತ್ತೆಂಟು ದನಗಳು ಸಾವಿಗೀಡಾಗಿವೆ. ಪರೀಕ್ಷೆ ನಡೆಸಿದ ವೈದ್ಯರು ದನಗಳು ವಿಷಯುಕ್ತ ಆಹಾರ ಸೇವಿಸಿತ್ತೆಂದು ಕಂಡುಕೊಂಡಿದ್ದಾರೆ. ಹಲವು ದನಗಳು ಗಂಭೀರ ಸ್ಥಿತಿಯಲ್ಲಿವೆ. ಹೆಚ್ಚಿನ ಪರೀಕ್ಷೆಗೆ ಮೇವನ್ನು ಪ್ರಯೋಗಾಲಕ್ಕೆ ರವಾನಿಸಲಾಗಿದೆ. ಈ ಗೋ ಶಾಲೆಯು ಸರಕಾರೀ ಅನುದಾನದಿಂದ ಕಾರ್ಯನಿರ್ವಹಿಸುತ್ತಿದೆ.