ಹತ್ರಾಸ್: ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಯುವತಿಯ ತಂದೆಯ ಗುಂಡಿಟ್ಟು ಹತ್ಯೆ

hathras

ಹತ್ರಾಸ್(02-03-2021): ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ 2018 ರಿಂದ ಜೈಲಿನಲ್ಲಿದ್ದ ಆರೋಪಿಯೋರ್ವ ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಯ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ 200ಕಿ.ಮೀ ದೂರದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯ ದೇವಾಲಯದ ಹೊರಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬದ ನಡುವೆ ಘರ್ಷಣೆ ನಡೆದಿದೆ. ಆ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಸಂತ್ರಸ್ತೆಯ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗಳ ಮೇಲೆ ನಡೆದ … Read more

ಹತ್ರಾಸ್ ಕೇಸ್| ಯುಪಿ ಪೊಲೀಸರು ಹೇಳಿದ ಸುಳ್ಳು ಸಿಬಿಐ ಚಾರ್ಜ್‌ಶೀಟ್ ನಲ್ಲಿ ಬಹಿರಂಗ

hathras case

ಉತ್ತರ ಪ್ರದೇಶ (18-12-2020): ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾದ ಹತ್ರಾಸ್ ಪ್ರಕರಣದ ಕುರಿತು ನಾಲ್ವರು ಮೇಲ್ಜಾತಿಯ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಚಾರ್ಜ್ ಶೀಟ್ ನಲ್ಲಿ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ  ಎಂದು ಉಲ್ಲೇಖಿಸಲಾಗಿದೆ. ಈ ಮೊದಲು  ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೊಂಡಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಸಂದೀಪ್, ಲುವ್ ಕೇಶ್, ರವಿ ಮತ್ತು ರಾಮು ವಿರುದ್ಧ ಚಾರ್ಜ್ ಶೀಟ್ … Read more

ಹತ್ರಾಸ್ ಪ್ರಕರಣ| ನಿಮ್ಮ ಮಗಳಾಗಿದ್ದರೆ ಇದೇ ರೀತಿ ದಹನ ಮಾಡ್ತೀರಾ- ಎಡಿಜಿಗೆ ತರಾಟೆಗೆ ತೆಗೆದುಕೊಂಡ ಅಲಹಬಾದ್ ಹೈಕೋರ್ಟ್‌

hathras

ನವದೆಹಲಿ(13-10-2020): ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು 19 ವರ್ಷದ ದಲಿತ ಮಹಿಳೆಯನ್ನು ಮಧ್ಯರಾತ್ರಿಯಲ್ಲಿ ಕುಟುಂಬದ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ಮಾಡಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ವಿಚಾರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆಯ ಕುಟುಂಬದ ವಕೀಲ ಸೀಮಾ ಕುಶ್ವಾಹಾ, ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ನ್ಯಾಯಪೀಠ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಮಗಳಾಗಿದ್ದರೆ ಅದೇ ರೀತಿ ದಹನ ಮಾಡಲು ಅನುಮತಿಸಬಹುದೇ ಎಂದು ಕೇಳಿದರು. ನ್ಯಾಯಾಲಯವು ಪೊಲೀಸ್ … Read more

ಹತ್ರಾಸ್ ಘಟನೆ; ರಾಹುಲ್ ಗಾಂಧಿಯ ಸಹಾಯಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿದ ಯೋಗಿ ಪೊಲೀಸರು

hathras

ನವದೆಹಲಿ(09-10-2020): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಹಾಯಕ ಶ್ಯೋರಾಜ್ ಜೀವನ್ ವಿರುದ್ಧ ದೇಶದ್ರೋಹ ಆರೋಪದಡಿ ಹತ್ರಾಸ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ದಲಿತ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಜೀವನ್ ಹತ್ರಾಸ್‌ನಲ್ಲಿ ಗಲಭೆಗೆ ಪ್ರಚೋದಿಸಿದ್ದಾರೆಂದು ಯೋಗಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿದ್ದಾರೆ. ಬಂಧನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೀವನ್,  ನಾನು ದಂಗೆಕೋರನಲ್ಲ. ಕೋಮು ಸೌಹಾರ್ದತೆಗೆ ಒತ್ತು ಕೊಟ್ಟು ನಾನು ಸಂಪೂರ್ಣ ಜೀವನ ನಡೆಸಿದ್ದೇನೆ. ಕಳೆದ 40 ವರ್ಷಗಳಿಂದ ನಾನು ಜನರ ಸೇವೆಯಲ್ಲಿದ್ದೇನೆ ಮತ್ತು … Read more

ಅಹ್ಮದಾಬಾದ್: ಜಿಗ್ನೇಸ್ ಮೇವಾನಿ, ಹಾರ್ದಿಕ್ ಪಟೇಲ್ ಸೇರಿದಂತೆ ಹಲವರ ಬಂಧನ

jignes mevani

ಅಹ್ಮದಾಬಾದ್(07/10/2020): ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚೌಡ, ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್, ಪಕ್ಷೇತರ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಸಿ ಮೇವಾನಿ ಸೇರಿದಂತೆ ವಿವಿಧ ಸಂಘಟನೆ, ಪಕ್ಷಗಳ ಇನ್ನೂ ಹಲವು ಮುಖಂಡರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಹತ್ರಾಸ್ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪರಿಶಿಷ್ಟ ಜಾತಿಯ ಯುವತಿಗೆ ನ್ಯಾಯ‌ವನ್ನು ಆಗ್ರಹಿಸಿ ಪ್ರತಿಕಾರ್ ಯಾತ್ರೆ ನಡೆಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ‌ ವಿವಿಧ ಪಕ್ಷದ ನಾಯಕರು ಭಾಗವಹಿಸಿದ್ದರು. ಕೋಚ್ ರಬ್ ಆಶ್ರದಿಂದ ಸಬರಮತಿ ಆಶ್ರಮದವರೆಗೆ … Read more

ಹತ್ರಾಸ್ ಗೆ ತೆರಳುತ್ತಿದ್ದ ಸಿಎಫ್ ಐ ನಾಯಕರ ಬಂಧನ ಕಾನೂನು ಬಾಹಿರ-ಪಿಎಫ್ ಐ

pfi

ನವದೆಹಲಿ(07-10-2020):ಉತ್ತರಪ್ರದೇಶದ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ಸಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿರುವ ಯೋಗಿ ಸರಕಾರದ ನಡೆಯನ್ನು ಪಿಎಫ್ ಐ ಸಂಘಟನೆ ಖಂಡಿಸಿದೆ. ಮುಜಫರ್ನಗರದ ಅತೀಕ್-ಉರ್ ರೆಹಮಾನ್, ಮಲಪ್ಪುರಂನ ಸಿದ್ದೀಕ್, ಬಹ್ರೇಚ್‌ನ ಮಸೂದ್ ಅಹ್ಮದ್ ಮತ್ತು ರಾಂಪುರದ ಆಲಂ ಅವರ ಬಂಧನವನ್ನು ಪಿಎಫ್ ಐ ಕಾನೂನು ಬಾಹಿರ ಎಂದು ಹೇಳಿದೆ. ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ನಿನ್ನೆ ತೆರಳುತ್ತಿರುವಾಗ ಮಥುರಾದ ಮಠ ಟೋಲ್ ಪ್ಲಾಜಾದಲ್ಲಿ ನಾಲ್ವರನ್ನು ಪೊಲೀಸರು ಅನುಮಾನಾಸ್ಪದರು ಎಂದು ಹೇಳಿ ಬಂಧಿಸಿತ್ತು.

ಹತ್ರಾಸ್ ಸಂತ್ರಸ್ತೆಯನ್ನು ರಾತ್ರಿಯಲ್ಲಿ ಯಾಕೆ ದಹನ ಮಾಡಿದ್ರು? ಯುಪಿ ಸರಕಾರ ಸುಪ್ರೀಂ ಕೋರ್ಟ್ ಗೆ ಹೇಳಿದ್ದೇನು?

ಉತ್ತರ ಪ್ರದೇಶ(06-10-2020): ಸಂಭವಿಸಬಹುದಾದ ಹಿಂಸಾಚಾರವನ್ನು ತಪ್ಪಿಸಲು ರಾತ್ರಿಯಲ್ಲಿ ಹತ್ರಾಸ್ ಸಂತ್ರಸ್ತೆಯನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಯುಪಿ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ಬೆಳಿಗ್ಗೆ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ತಪ್ಪಿಸಲು ರಾತ್ರಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವುದರಿಂದ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳು ಕೆಟ್ಟ ಉದ್ದೇಶಗಳೊಂದಿಗೆ ನಕಲಿ, ಸುಳ್ಳು … Read more

ಹತ್ರಾಸ್; ಜಾತಿ ಆಧಾರಿತ ಸಂಘರ್ಷಕ್ಕೆ ಪ್ರಚೋದಿಸಿದ್ದಾರೆಂದು ದೇಶದ್ರೋಹದ ಪ್ರಕರಣ ದಾಖಲು

ಉತ್ತರ ಪ್ರದೇಶ(06-10-2020): ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ  ‘ಜಾತಿ ಆಧಾರಿತ’ ಸಂಘರ್ಷಕ್ಕೆ ಪ್ರಚೋದಿಸಿದ್ದಾರೆಂದು ಯುಪಿ ಪೊಲೀಸರು ಅನಾಮಧೇಯ ವ್ಯಕ್ತಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. 19 ವರ್ಷದ ದಲಿತ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ, ಸಾವು ವಿವಾದದ ಮಧ್ಯೆ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ನಿರಂತರ ಪ್ರತಿಭಟನೆಗಳು  ಮಾಡಿದ ಕಾರಣ ಪೊಲೀಸರು ಈ ರೀತಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಎಫ್‌ಐಆರ್ ನ್ನು ಚಂದಪಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಆರೋಪಿಗಳನ್ನು “ಅಜ್ಞಾತ” ಎಂದು ಹೆಸರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು … Read more

ಗ್ಯಾಂಗ್ ರೇಪ್ ನಡೆದಿಲ್ಲ ಎನ್ನಲು ನಡೆಯಿತೇ ರಾತ್ರೋ ರಾತ್ರಿ ಸಂತ್ರಸ್ತೆಯ ದಹನ?

ಲಖನೌ (05-10-2020): ಹತ್ರಾಸ್ ಗ್ಯಾಂಗ್​ರೇಪ್​ ಪ್ರಕರಣವನ್ನು ಕಾಶಿ ಕ್ಷೇತ್ರದ ಬಿಜೆಪಿ ಜಾಲತಾಣ ಮುಖ್ಯಸ್ಥ ಶಶಿಕುಮಾರ್​ ವಿಭಿನ್ನ ಕಥೆಯನ್ನು ಕಟ್ಟಿ ನಿರೂಪಿಸಿದ್ದಾರೆ. ಇದು ತನಿಖೆಯ ದಿಕ್ಕನ್ನು ತಪ್ಪಿಸುವ ತಂತ್ರವಾ ಅಥವಾ ವಾಸ್ತವತೆಯಾ ಎನ್ನುವುದು ನಿಷ್ಪಕ್ಷಪಾತ ತನಿಖೆಯಿಂದಲೇ ತಿಳಿದು ಬರಬೇಕಿದೆ. ಹತ್ರಾಸ್​ ಪ್ರಕರಣದಲ್ಲಿ ಸತ್ಯ ಬೇರೆ ಇದೆ ಇಡೀ ಪ್ರಕರಣವನ್ನು ಗ್ಯಾಂಗ್​ರೇಪ್​ ಮತ್ತು ಕೊಲೆ ಎಂದು ತಿರುಚಿದ್ದಾರೆ. ಕಾಂಗ್ರೆಸ್​ ತನ್ನ ರಾಜಕೀಯ ಅಜೆಂಡಾವನ್ನಾಗಿ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿ ಶಶಿಕುಮಾರ್​  ಸರಣಿ ಟ್ವೀಟ್​ ಮಾಡಿದ್ದಾರೆ.       … Read more

ಹತ್ರಾಸ್; ಪೊಲೀಸರು ರಾತ್ರಿಯಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಅತ್ಯಾಚಾರ ಸಂತ್ರಸ್ತೆಯನ್ನಾ? ಇಲ್ಲಿರುವ ಅನುಮಾನಗಳೇನು?

ಉತ್ತರ ಪ್ರದೇಶ(03-10-2020): ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಅವಸರದ ದಹನವು ಇಡೀ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರ ಪಾತ್ರದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಮಾಧ್ಯಮದ ಜೊತೆ ಮಾತನಾಡಿದ 19 ವರ್ಷದ ದಲಿತ ಸಂತ್ರಸ್ತೆಯ ತಂದೆ ನಿಜವಾಗಿಯೂ ರಾತ್ರಿಯಲ್ಲಿ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದು ಅವರ ಮಗಳನ್ನಾ ಎಂದು ಪ್ರಶ್ನಿಸಿದ್ದಾರೆ. ನಾವು 2 ಗಂಟೆಗಳ ಕಾಲ ಕೇಳಿದರೂ ಪೊಲೀಸರು ಅವಳನ್ನು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದರು. ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ ಎಂದು ಕಣ್ಣೀರಿಟ್ಟ ತಂದೆ ಹೇಳಿದರು. ಸಂತ್ರಸ್ತೆಯ ಸಹೋದರನೂ … Read more