ಸೌದಿ ಅರೇಬಿಯಾ: ಮೇ ತಿಂಗಳಲ್ಲಿ ‘ಸೌದಿಯಾ ಏರ್ ಲೈನ್ಸ್’ನ ಅಂತರಾಷ್ಟ್ರೀಯ ಸೇವೆ ಪುನರಾರಂಭ

ರಿಯಾದ್: ಬರುವ ತಿಂಗಳು ‘ಸೌದಿಯಾ ಏರ್ ಲೈನ್ಸ್‘(Saudia airlines) ತನ್ನ ಅಂತರಾಷ್ಟ್ರೀಯ ಸೇವೆಗಳನ್ನು ಪುನರಾರಂಭಿಸಲಿದೆ. ಅದಕ್ಕೆ ಬೇಕಾಗಿರುವ ಸಿದ್ಧತೆಗಳೆಲ್ಲವನ್ನೂ ಮಾಡಲಾಗುತ್ತಿದೆ ಎಂದು ಸೌದಿ ಸಾರಿಗೆ ಸಚಿವ ಸ್ವಾಲಿಹ್ ಅಲ್–ಜಾಸರ್ ಹೇಳಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗವು ತೀವ್ರಗತಿಯಲ್ಲಿ ಏರುತ್ತಿದ್ದ ಹಿನ್ನೆಲೆಯಲ್ಲಿ 2020 ರ ಮಾರ್ಚ್ ತಿಂಗಳಲ್ಲಿ ‘ಸೌದಿಯಾ ಏರ್ ಲೈನ್ಸ್‘(Saudia airlines) ತನ್ನೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ನಂತರದ ದಿನಗಳಲ್ಲಿ ಅದು ಆಂತರಿಕ ವಿಮಾನಯಾನ ಸೇವೆಗಳನ್ನಷ್ಟೇ ನೀಡಲು ತೊಡಗಿತು. ಇದೀಗ ಮೇ ತಿಂಗಳ ಹದಿನೇಳನೇ ತಾರೀಕಿನಂದು ಅದು ಅಂತರಾಷ್ಟ್ರೀಯ ಸೇವೆಗಳನ್ನೂ ನೀಡಲು … Read more

ಒಮನ್ ಹೊರತಾದ ಎಲ್ಲಾ ಕೊಲ್ಲಿ ದೇಶಗಳಲ್ಲೂ ಮಂಗಳವಾರ ರಮದಾನ್ ತಿಂಗಳು ಆರಂಭ

ರಿಯಾದ್: ಒಮನ್ ಹೊರತಾದ ಎಲ್ಲಾ ಕೊಲ್ಲಿ ದೇಶಗಳಲ್ಲೂ ಮಂಗಳವಾರದಿಂದ ರಮದಾನ್ ತಿಂಗಳು ಆರಂಭವಾಗಲಿದೆ. ಸೌದಿ ಅರೇಬಿಯಾದ ವಿವಿಧ ಕಡೆಗಳಲ್ಲಿ ಚಂದ್ರ ದರ್ಶನಕ್ಕಾಗಿ ಜನರು ಕಾದು ಕುಳಿತಿದ್ದರೂ ಎಲ್ಲಿಯೂ ಕಂಡು ಬಂದಿಲ್ಲ. ಹೀಗಾಗಿ ಮಂಗಳವಾರದಿಂದಲೇ ಉಪವಾಸದ ತಿಂಗಳು ಆರಂಭವಾಗುವುದು ಖಚಿತವಾಗಿದೆ. ಇಂದು ಚಂದ್ರ ದರ್ಶನದ ನಿರೀಕ್ಷೆಯಿಲ್ಲವೆಂದು ಅಲ್ ಖಾಸಿಮ್ ವಿಶ್ವವಿದ್ಯಾಲಯದ ಅಬ್ದುಲ್ಲಾ ಅಲ್–ಮಿಸ್ನದ್ ಸೇರಿದಂತೆ ಹಲವು ಖಗೋಳ ಶಾಸ್ತ್ರಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ. ಕತರ್ ವಕ್ಫ್ ಸಚಿವಾಲಯವೂ ಕೂಡಾ ಎಪ್ರಿಲ್ ಹದಿಮೂರು ಮಂಗಳವಾರದಂದು ರಮದಾನ್ ತಿಂಗಳು ಆರಂಭವಾಗುವುದೆಂದು ಪ್ರಕಟಿಸಿದೆ. ಭಾನುವಾರದಂದು … Read more

ಯುಎಇ: ಬಹುಬಾರಿ ಪ್ರವೇಶಿಸಲು ಸಾಧ್ಯವಾಗುವ ಪ್ರವಾಸಿ ವೀಸಾಗೆ ಅನುಮತಿ

  ಅಬುದಾಬಿ: ಬಹುಬಾರಿ ಯುಎಇ ಪ್ರವೇಶಿಸಲು ಸಾಧ್ಯವಾಗುವಂಥ ಪ್ರವಾಸಿ ವೀಸಾಗೆ ಅನುಮತಿ ದೊರೆತಿದೆ. ಯಾವುದೇ ದೇಶದ ಪ್ರಜೆಗಳಿಗೆ ಈ ವೀಸಾ ಪಡೆಯಬಹುದಾಗಿದೆ. ಇಂತಹ ವೀಸಾಗಳು ಯುಎಇಯಿಂದ ಹಲವು ಬಾರಿ ನಿರ್ಗಮಿಸಲು ಮತ್ತು ಹಲವು ಆಗಮಿಸಲು ಸಾಧ್ಯವಾಗುವಂತಹ ಸುಧೀರ್ಘ ಕಾಲಾವಧಿಯುಳ್ಳವುಗಳು.  ಪ್ರತಿ ಬಾರಿ ಯುಎಇಗೆ ಬಂದಾಗಲೂ ತೊಂಭತ್ತು ದಿನಗಳ ವರೆಗೆ ಅಲ್ಲಿಯೇ ತಂಗಬಹುದು. ಅಗತ್ಯ ಬಂದರೆ, ಇನ್ನೂ ತೊಂಭತ್ತು ದಿನಗಳಿಗೆ ವಿಸ್ತರಿಸಲೂ ಅವಕಾಶವಿದೆ. ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುವವರಿಗೆ ವಿಶೇಷವಾದ ವರ್ಚುವಲ್ ಉದ್ಯೋಗ ವೀಸಾಗಳಿಗೂ ಅನುಮತಿ ಸಿಗಲಿದ್ದು, ಇಂತಹ ವೀಸಾಗಳಿಗೆ … Read more

ತೈಲಯುಗವು ಅತಿ ಶೀಘ್ರದಲ್ಲೇ ಅಂತ್ಯಗೊಳ್ಳಲಿದ್ದು, ಇದು ಕಟ್ಟಕಡೆಯ ಬೆಲೆಯೇರಿಕೆ : ಕತರ್ ಮಾಜಿ ಪ್ರಧಾನಿ

ದೋಹ: ಇಂಧನ ಅಗತ್ಯಗಳಿಗಾಗಿ ತೈಲ ಮತ್ತು ತೈಲೋತ್ಪನ್ನಗಳನ್ನು ಅವಲಂಬಿಸುವ ಯುಗವು ಅತಿ ಶೀಘ್ರದಲ್ಲೇ  ಅಂತ್ಯಗೊಳ್ಳಲಿದೆ. ಕೊಲ್ಲಿ ದೇಶಗಳು ಅದಕ್ಕನುಗುಣವಾಗಿಯೇ ತಮ್ಮ ಕಾರ್ಯಯೋಜನೆಗಳನ್ನು ಸಿದ್ಧಪಡಿಸಬೇಕಿದೆಯೆಂದು ಮಾಜಿ ಕತರ್ ಪ್ರಧಾನಮಂತ್ರಿ ಶೈಖ್ ಹಮದ್ ಬಿನ್ ಜಾಸಿಮ್ ಅಭಿಪ್ರಾಯಪಟ್ಟಿದ್ದಾರೆ. ಇಂಧನ ಅಗತ್ಯಗಳಿಗಾಗಿ ಪರ್ಯಾಯ ವ್ಯವಸ್ಥೆಗಳು ಲಭ್ಯವಿರುವ ಈ ಸನ್ನಿವೇಶದಲ್ಲಿ ಇದು ಕಟ್ಟಕಡೆಯ ತೈಲಬೆಲೆಯೇರಿಕೆಯಾಗಿದೆಯೆಂದು ಹೇಳಿದ್ದಾರೆ. “ಸದ್ಯದ ತೈಲ ಬೆಲೆಯೇರಿಕೆಯು ಭಾರೀ ಕುಸಿತಕ್ಕೆ ಮೊದಲಿರುವ ಕಟ್ಟಕಡೆಯ ಬೆಲೆಯೇರಿಕೆಯಾಗಿದೆ. ಆ ಬಳಿಕ ತೈಲಬೆಲೆಯಲ್ಲಿ ಗಣನೀಯ ಇಳಿಕೆಯಾಗಲು ಆರಂಭವಾಗುವುದು. ತೈಲಯುಗವು ಅವಸಾನದತ್ತ ಸಾಗುತ್ತಿದೆ. ಮಾರುಕಟ್ಟೆಯಲ್ಲಿದೊಡ್ಡ ಸ್ಪರ್ಧೆಯೇ ಏರ್ಪಟ್ಟಿದೆ. … Read more

ಮಲೇಶ್ಯದಲ್ಲೂ ತನ್ನ ಬಾಹುಗಳನ್ನು ವಿಸ್ತರಿಸಲಿರುವ ಲುಲು ಗ್ರೂಪ್ | ಬೃಹತ್ ಯೋಜನೆಗೆ ಸಿದ್ಧತೆ

ಅಬುದಾಬಿ: ಕೊಲ್ಲಿ ದೇಶಗಳಲ್ಲಿ ವ್ಯಾಪಕವಾಗಿ ಬೆಳೆದು ನಿಂತಿರುವ ಲುಲು ಗ್ರೂಪ್ ಮಲೇಶ್ಯಾದಲ್ಲೂ ತನ್ನ ಬಾಹುಗಳನ್ನು ವಿಸ್ತರಿಸುವತ್ತ ಹಜ್ಜೆಯಿಟ್ಟಿದೆ. ಲುಲು ಗ್ರೂಪ್ ಮುಂದಿನ ಮೂರೇ ವರ್ಷಗಳಲ್ಲಿ ಹೊಸದಾಗಿ ಹದಿನೈದು ಹೈಪರ್ ಮಾರ್ಕೆಟುಗಳನ್ನು ಆರಂಭಿಸಲಿದೆಯೆಂದು ಚೆಯರ್ ಮ್ಯಾನ್ ಎಂ ಎ ಯೂಸುಫ್ ಅಲಿ ಘೋಷಿಸಿದ್ದಾರೆ. ಅಬುದಾಬಿಯಲ್ಲಿ ಔಪಚಾರಿಕ ಸಂದರ್ಶನದಲ್ಲಿದ್ದ ಮಲೇಶ್ಯಾ ಪ್ರಧಾನಿ ಮುಹ್ಯುದ್ದೀನ್ ಯಾಸೀನ್ ಜೊತೆಗಿನ ಮಾತುಕತೆಯ ನಡುವೆ ಈ ವಿಚಾರವನ್ನುತಿಳಿಸಿದ್ದಾರೆ. ಸದ್ಯ ಮಲೇಶ್ಯಾದಲ್ಲಿ ಎರಡು ಲುಲು ಹೈಪರ್ ಮಾರ್ಕೆಟೆಗಳಿದ್ದು, ಈ ವರ್ಷದ ಕೊನೆಗೆ ಅದರ ಸಂಖ್ಯೆ ಆರಕ್ಕೇರಲಿದೆಯೆಂದು ನಿರೀಕ್ಷಿಸಲಾಗಿದೆ.

ಇಂದಿನಿಂದ ಸೌದಿ ಅರೇಬಿಯಾವು ತನ್ನೆಲ್ಲಾ ಗಡಿಗಳನ್ನು ತೆರೆಯಲಿದೆ

ಜಿದ್ದಾ(3-1-2021): ಪಾಶ್ಚಾತ್ಯ ದೇಶಗಳಲ್ಲಿ ಹೊಸ ಪ್ರಬೇಧದ ಕೊರೋನಾ ವೈರಸ್ ಹರಡಿದ ಕಾರಣದಿಂದ ಬಂದ್ ಮಾಡಲಾಗಿದ್ದ ತನ್ನೆಲ್ಲಾ ಗಡಿಗಳನ್ನು ಸೌದಿ ಅರೇಬಿಯಾವು ಇಂದು ತೆರೆಯಲಿದೆ. ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಹೊರ ದೇಶಗಳಿಂದ ವಿಮಾನಗಳು ಆಗಮಿಸಬಹುದಾಗಿದೆ. ಅದೇ ವೇಳೆ ಹೊಸ ರೂಪಾಂತರಿತ ವೈರಸ್ ಹರಡಿದ ದೇಶಗಳಿಂದ ಬರುವ ಜನರು ಸೌದಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಬೇಕಾಗುತ್ತದೆ. ಎರಡು ವಾರಗಳ ಮೊದಲು ಸೌದಿಯು ತನ್ನೆಲ್ಲಾ ಭೂ, ವಾಯು, ಸಾಗರ ಗಡಿಗಳನ್ನು ಮುಚ್ಚಿತ್ತು. ಇನ್ನು ಮುಂದೆ ಕೊರೋನಾ ನಿಯಮಾವಳಿಗಳನ್ನು ಪಾಲಿಸಿ … Read more

ರೂಪಾಂತರಗೊಂಡ ಕೊರೋನಾ ವೈರಸ್ | ತನ್ನೆಲ್ಲಾ ಭೂ, ಜಲ, ವ್ಯೋಮ ಗಡಿಗಳನ್ನು ಮುಚ್ಚಲಿರುವ ಒಮನ್

ಮಸ್ಕತ್(21-12-2020): ರೂಪಾಂತರಗೊಂಡ ಕೊರೋನಾ ವೈರಸ್ ಯುರೋಪಿಯನ್ ದೇಶಗಳಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಒಮನ್ ದೇಶವು ತನ್ನೆಲ್ಲಾ ಭೂ, ಜಲ, ವ್ಯೋಮ ಗಡಿಗಳನ್ನು ಮುಚ್ಚಲಿದೆ. ಸೌದಿ ಅರೇಬಿಯಾ ಬಳಿಕ ರೂಪಾಂತರಗೊಂಡ ಕೊರೋನಾ ಕಾರಣದಿಂದ ತನ್ನ ಗಡಿಗಳನ್ನು ಮುಚ್ಚಲಿರುವ ಎರಡನೇ ಗಲ್ಫ್ ದೇಶವಾಗಿ ಒಮನ್ ಗುರುತಿಸಿಕೊಳ್ಳಲಿದೆ. ಜನರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಮಧ್ಯರಾತ್ರಿ ಒಂದು ಗಂಟೆಯ ಬಳಿಕ ಈ ನಿಯಮಾವಳಿ ಜಾರಿಗೆ ಬರಲಿದೆ ಎಂದು ಸ್ಟೇಟ್ ಟೆಲಿವಿಷನ್ ವರದಿ ಮಾಡಿದೆ. ದೇಶದ ಎಲ್ಲಾ ಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಿರುವುದಾಗಿ … Read more

ಯುಎಇ: ಸರಕಾರೀ ಮತ್ತು ಖಾಸಗೀ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಮುಂದಿನ ಎರಡು ವರ್ಷಗಳಲ್ಲಿ ಬರುವ ರಜಾದಿನಗಳ ಘೋಷಣೆ

ಅಬುಧಾಬಿ(19-12-2020): ಸರಕಾರೀ ಮತ್ತು ಖಾಸಗೀ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಮುಂದಿನ ಎರಡು ವರ್ಷಗಳಲ್ಲಿ ಬರುವ ರಜಾದಿನಗಳನ್ನು ಘೋಷಿಸಲಾಯಿತು. ಸಚಿವ ಸಂಪುಟವು ಅಂಗೀಕಾರ ನೀಡಿದ 2021-22 ರ ಸಾಲಿನ ರಜಾದಿನಗಳು ಇಂತಿವೆ: 2021 ರ ರಜಾದಿನಗಳು: ಜನವರಿ 1 – ಹೊಸ ವರ್ಷಾರಂಭ ರಮಳಾನ್ 29 ರಿಂದ ಶವ್ವಾಲ್ 3 ರ ವರೆಗೆ – ಈದುಲ್ ಫಿತ್ರ್ ದ್ಸುಲ್ ಹಜ್ 9 – ಅರಫಾ ದಿನ ದ್ಸುಲ್ ಹಜ್ 10 ರಿಂದ 12 ರ ವರೆಗೆ – ಬಕ್ರೀದ್ ಅಗಸ್ಟ್ … Read more

2030 ರ ಏಷ್ಯನ್ ಗೇಮ್ಸ್ ಕತರಿನಲ್ಲಿ: 2034 ರದ್ದು ಸೌದಿಯಲ್ಲಿ

ಮಸ್ಕತ್(16-12-2020): 2030 ರಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಅತಿಥೇಯತ್ವವನ್ನು ಕತರ್ ವಹಿಸಿಕೊಳ್ಳಲಿದೆ. ಮಸ್ಕತಿನಲ್ಲಿ ನಡೆದ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ನಡೆದ ಮತದಾನದಲ್ಲಿ 2030ರ ಅತಿಥೇಯತ್ವಕ್ಕೆ ಕತರ್ ಆಯ್ಕೆಯಾಗಿದೆ. 2034 ರ ಅತಿಥೇಯತ್ವವು ಸೌದಿ ಮಡಿಲಿಗೆ ಬಿದ್ದಿದ್ದು, ಸೌದಿ ರಾಜಧಾನಿ ರಿಯಾದಿನಲ್ಲಿ 2034ರ ಏಷ್ಯನ್ ಗೇಮ್ಸ್ ನಡೆಯಲಿದೆ. ಒಲಿಂಪಿಕ್ ಸಮಿತಿಯ ಅಂತಿಮ ಸುತ್ತಿನ ಮತದಾನದಲ್ಲಿ ಕತರ್ ಮತ್ತು ಸೌದಿ ಮಾತ್ರವೇ ಬಾಕಿಯುಳಿದಿದ್ದವು. ಬ್ಯಾಲೆಟ್ ಪೇಪರ್ ಮೂಲಕ ನಡೆದ ಮತದಾನದಲ್ಲಿ 26 ದೇಶಗಳಿಂದ ಬಂದ ಪ್ರತಿನಿಧಿಗಳು ಭಾಗವಹಿಸಿದ್ದರೆ, ಇತರ 19 … Read more

ರಕ್ತದಾನ ಶಿಬಿರದ ಮೂಲಕ ಯುಎಇ ರಾಷ್ಟ್ರೀಯ ದಿನಾಚರಣೆ ಆಚರಿಸಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡ

ಅಬುಧಾಬಿ(06-02-2020): 65ನೇ ಕನ್ನಡ ರಾಜ್ಯೋತ್ಸವ ಮತ್ತು 49ನೇ ಯುಎಇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ವತಿಯಿಂದ ದಿನಾಂಕ 03.12.2020ರಂದು ದುಬೈಯ ಶೇಕಾ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಮದ್ಯಾಹ್ನ 2ರಿಂದ ಸಂಜೆ 8ರವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಹಲವು ರಕ್ತದಾನಿಗಳು ಪಾಲ್ಗೊಂಡರು. ರಕ್ತದಾನ ಮಾಡಿದವರಿಗೆ ಸರ್ಟಿಫಿಕೇಟ್ ನೀಡಲಾಯಿತು. ಸುಮಾರು 200ದೇಶಗಳಿಂದ ಜೀವನ ಕಟ್ಟಿಕೊಳ್ಳಲು ಸಂಯುಕ್ತ ಅರಬ್ ಸಂಸ್ಥಾನಕ್ಕೆ ಬಂದ ಅನಿವಾಸಿಗಳು ಈ ದೇಶದ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಕ್ತದಾನ ನೀಡಿದ್ದು ಈ … Read more