7000 ರೂಪಾಯಿ ಬೆಲೆಯಲ್ಲಿ ರೆಮ್ಡಿಸಿವಿರ್ ಲಸಿಕೆ ಎಂದು ಬರೀ ನೀರು ತುಂಬಿಸಿದ ಸೀಸೆಗಳ ಮಾರಾಟ! ಗುಜರಾತಿನಲ್ಲೊಂದು ಮೋಸದ ಜಾಲ..

ಸೂರತ್: ರೆಮ್ಡಿಸಿವಿರ್ ಔಷಧಿ ಸೀಸೆಯೊಳಗೆ ನೀರು ತುಂಬಿಸಿ ಅತ್ಯಧಿಕ ಬೆಲೆಗೆ ಮಾರುತ್ತಿರುವುದು ನರೇಂದ್ರ ಮೋದಿ ತವರು ರಾಜ್ಯದಲ್ಲಿ ಪತ್ತೆಯಾಗಿದೆ. ಈ ವಿಚಾರವಾಗಿ ಗುಜರಾತಿನ ಯೋಗಿ ಚೌಕ್ ಎಂಬಲ್ಲಿ ದಿವ್ಯೇಶ್ ಎಂಬಾತನನ್ನು ಬಂಧಿಸಲಾಗಿದೆ. ತನ್ನ ಕುಟುಂಬಿಕರಿಗಾಗಿ ಲಸಿಕೆ ಪಡೆದ ಜಗ್ನೇಶ್ ಮಲಾನಿ ಎಂಬವರಿಗೆ ಈ ನಕಲಿ ಲಸಿಕೆ ಜಾಲವು ಇರುವುದು ಪತ್ತೆಯಾಗಿದೆ. ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಜಿಗ್ನೇಶ್ ಮಲಾನಿಯ ಕುಟುಂಬಿಕರಿಗೆ ಕೋವಿಡ್ ತಗುಲಿತ್ತು. ಇದಕ್ಕಾಗಿ ಅವರು ಸರಕಾರೀ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಲಸಿಕೆಗಾಗಿ ಹುಡುಕಾಡಿದರು. ಆದರೆ ಅದು ಅವರಿಗೆ ಸಿಕ್ಕಿರಲಿಲ್ಲ. … Read more

ಯುಎಇಗೆ ಮರಳುವ ಸಿದ್ಧತೆಯಲ್ಲಿ ಉದ್ಯಮಿ ಬಿ.ಆರ್.ಶೆಟ್ಟಿ

  ದುಬೈ(14/11/2020): ಆರ್ಥಿಕ ಅವ್ಯವಹಾರ ಹಾಗೂ ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಯುಎಇ ಬಿಟ್ಟು ಭಾರತಕ್ಕೆ ಬಂದಿದ್ದ ಎನ್‌ಎಂಸಿ ಹೆಲ್ತ್‌ ಎನ್ನುವ ಬೃಹತ್‌ ಖಾಸಗಿ ಆರೋಗ್ಯ ಸಂಸ್ಥೆಯ ಸಂಸ್ಥಾಪಕ, ಉಡುಪಿ ಮೂಲದ ಉದ್ಯಮಿ ಬಿ ಆರ್‌ ಶೆಟ್ಟಿ ಅವರು ಮತ್ತೆ ಯುಎಇಗೆ ತೆರಳಲು ಸಿದ್ಧತೆ‌ ನಡೆಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಯುಎಇಯ ನ್ಯಾಯ ಪ್ರಕ್ರಿಯೆಯ ಮೇಲೆ ತನಗೆ ವಿಶ್ವಾಸವಿದ್ದು, ಕೂಡಲೇ ಅಲ್ಲಿಗೆ ಹೋಗುವ ಸನ್ನಾಹದಲ್ಲಿದ್ದೇನೆ ಎಂದು ಸದ್ಯ ಭಾರತದಲ್ಲಿರುವ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಯುಎಇ ಅಧಿಕಾರಿಗಳಿಗೆ … Read more

ಕೊನೆಗೂ ವಾಸ್ತವ ಲೋಕಕ್ಕೆ ಮರಳಿದ ಟ್ರಂಪ್

ವಾಷಿಂಗ್ಟನ್ ಡಿಸಿ(14-11-2020): ಚುನಾವಣೆಯಲ್ಲಿ ಸೋತರೂ, ನಿಜಕ್ಕೂ ತಾನೇ ಗೆದ್ದಿರುವೆನೆಂದು ಹೇಳುತ್ತಾ ಬರುತ್ತಿದ್ದ ಟ್ರಂಪಿಗೆ ಈಗ ವಾಸ್ತವ ಪ್ರಜ್ಞೆಯ ಅರಿವಾಗತೊಡಗಿದೆ. ಪತ್ರಕರ್ತರ ಜೊತೆಗೆ ನಡೆದ ಮಾತುಕತೆಯ ವೇಳೆ, ಪರೋಕ್ಷವಾಗಿ ಸೋಲೊಪ್ಪಿಕೊಂಡಿರುವ ಮಾತುಗಳು ಟ್ರಂಪ್ ಬಾಯಿಯಿಂದ ಬಂದಿದೆ. “ದೇಶದಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿರಲಿಲ್ಲ. ಮುಂದೆ ಬರಲಿರುವ ಸರಕಾರ ಲಾಕ್‌ಡೌನನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆಯೇ ಎಂದು ಕಾಲವೇ ನಿರ್ಧರಿಸಬೇಕು” ಎಂದು ಪತ್ರಕರ್ತರ ಮುಂದೆ ಹೇಳಿದ್ದಾರೆ. ಅದರೆ, ಚುನಾವಣೆಯಲ್ಲಿ ಸೋತಿರುವುದನ್ನು ನೀವು ಯಾವಾಗ ಸಮ್ಮತಿಸುತ್ತೀರಿ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ಚುನಾವಣೆಯಲ್ಲಿ ಅಕ್ರಮಗಳು … Read more

“ನಾವು ಗೆಲ್ಲಲಿದ್ದೇವೆ!” ಚುನಾವಣೆಯ ಗುಂಗಿನಿಂದ ಇನ್ನೂ ಹೊರ ಬರದ ಟ್ರಂಪ್

ವಾಷಿಂಗ್ಟನ್ ಡಿಸಿ(10-11-2020): ಅಮೇರಿಕಾ ಚುನಾವಣೆಯಲ್ಲಿ ನಿಜಕ್ಕೂ ನಾವೇ ವಿಜಯಗೊಂಡಿದ್ದೇವೆ ಎಂಬ ರೀತಿಯಲ್ಲಿ ಮತ್ತೊಮ್ಮೆ ಟ್ರಂಪ್ ವಾದಿಸಿದ್ದಾನೆ. ನಿನ್ನೆ ರಾತ್ರಿ ತನ್ನ ಟ್ವಿಟರ್ ಖಾತೆಯಲ್ಲಿ “ನಾವು ಜಯಿಸಲಿದ್ದೇವೆ!” ಎಂದು ಬರೆದುಕೊಂಡಿದ್ದಾನೆ. ಧೀರ್ಘಕಾಲದ ಅಮೇರಿಕಾ ಚುನಾವಣಾ ಕೊನೆಗೊಂಡು, ಫಲಿತಾಂಶ ಪ್ರಕಟವಾಗಿ, ಜೋ ಬೈಡನ್ ಅಮೇರಿಕಾದ ಅಧ್ಯಕ್ಷ ನಲವತ್ತಾರನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆ ಬಳಿಕವೂ ಯಾವುದೇ ಸಾಕ್ಷ್ಯಗಳಿಲ್ಲದೇ ನಾವೇ ವಿಜಯ ಸಾಧಿಸಲಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. WE WILL WIN! — Donald J. Trump … Read more

ಸಿಂಟೆಕ್ಸ್ ಇಂಡಸ್ಟ್ರೀಸ್ ನಿಂದ ಪಿಎನ್‌ಬಿ ಬ್ಯಾಂಕ್ ಗೆ 1,203 ಕೋಟಿ ರೂ ವಂಚನೆ!

pnb

ನವದೆಹಲಿ(01-10-2020): ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬುಧವಾರ ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ನೀಡಿದ್ದ 1,203.26 ಕೋಟಿ ರೂ.ವನ್ನು ವಂಚಿಸಿದ ಹಣ ಎಂದು ಘೋಷಿಸಿದೆ. ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಎಸ್‌ಐಎಲ್) ನ ಖಾತೆ ಎನ್‌ಪಿಎ ಆಗಿದ್ದು, 1,203.26 ಕೋಟಿ ರೂ.ಗಳ ಸಾಲ ವಂಚನೆ ವರದಿಯನ್ನು ನಾವು ತಿಳಿಸುತ್ತೇವೆ ಎಂದು ಪಿಎನ್‌ಬಿ ನಿಯಂತ್ರಕರು ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ. ವಂಚನೆಯು ಅಹಮದಾಬಾದ್ ವಲಯ ಕಚೇರಿಯಲ್ಲಿ ನಡೆದಿದೆ. ಈ ಬಗ್ಗೆ ಆರ್ ಬಿಐಗೆ ಪಿಎನ್ ಬಿ ವರದಿಯನ್ನು ಸಲ್ಲಿಕೆ ಮಾಡಿದೆ.