ರೈತರು ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದರೆ, ಕೃಷಿ ಸಚಿವರು ಚಾದರ ಹೊದ್ದು ಮಲಗಿದ್ದಾರೆ: ರಾಜ್ಯ ಕಾಂಗ್ರೆಸ್

ಬೆಂಗಳೂರು: ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ “ಇಲ್ಲ”ಗಳ ಪಟ್ಟಿಗೆ ಹೊಸ ಸೇರ್ಪಡೆ ಗೊಬ್ಬರ, ಬಿತ್ತನೆ ಬೀಜ. ಈ ಹದವಾದ ಮುಂಗಾರಿನ ವಾತಾವರಣದಲ್ಲಿ ರೈತರುಬೆಳೆ ಹಾಕಲು ತುರಾತುರಿಯಲ್ಲಿದ್ದರೂ ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾದರ ಹೊದ್ದು ಮಲಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ, ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ? ರೈತರಿಗೆ ಬೆಳೆ ವಿಮೆಯಲ್ಲಿ ಮೋಸ, ಹಿಂದಿನ … Read more

ರೈತರಿಗೆ ಬೀಜ, ಗೊಬ್ಬರವನ್ನು ಉಚಿತವಾಗಿ ನೀಡಲು ಕ್ರಮವಹಿಸಬೇಕು: ಸಿದ್ಧರಾಮಯ್ಯ

ಬೆಂಗಳೂರು : ಸರ್ಕಾರದ ನೀತಿಗಳು ಮತ್ತು ಕೋವಿಡ್ ಮುಂತಾದ ಕಾರಣಗಳಿಂದಾಗಿ ಇಂದು ರೈತರ ಬಳಿ ಬಿತ್ತನೆ ಚಟುವಟಿಕೆಗಳಿಗೆ ಕೈಯಲ್ಲಿ ಹಣವಿಲ್ಲದಂತಾಗಿದೆ. ಹಾಗಾಗಿ ರೈತರಿಗೆ ಬೀಜ, ಗೊಬ್ಬರವನ್ನು ಉಚಿತವಾಗಿ ನೀಡಲು ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು ರೈತರಿಗೆ ಸಾಕಾಗುವಷ್ಟು ಬೀಜ ವಿತರಿಸುವ ಬಗ್ಗೆ ಆಗ್ರಹ ಮಾಡಿದ್ದಾರೆ, ಕೂಡಲೇ ಸಾಲ ವಿತರಣೆ ಚಟುವಟಿಕೆಗಳನ್ನು ಆರಂಭಿಸಬೇಕು. ಹೆಸರು, ಉದ್ದು, ಅಲಸಂಡೆ, … Read more

ರಾಜ್ಯ ಸರ್ಕಾರ ರಸಗೊಬ್ಬರ ಬೆಲೆ ಇಳಿಕೆ ಮಾಡಬೇಕು: ಪ್ರಿಯಾಂಕ್ ಖರ್ಗೆ ಒತ್ತಾಯ

ಕಲಬುರ್ಗಿ: ಕೊರೋನಾ ಲಾಕ್‌ಡೌನ್ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿದು, ಹಣ್ಣು ತರಕಾರಿಗಳನ್ನು ಬೀದಿ ಬೀದಿಗಳಲ್ಲಿ ಸುರಿಯತ್ತಿದ್ದಾರೆ. ಖರೀದಿದಾದರು, ಮಾರುಕಟ್ಟೆ ಸೌಲಭ್ಯ ದೊರಕದ ಕಾರಣ ಕೆಲವು ರೈತರು ತಮ್ಮ ಬೆಳೆಗಳ ಕಟಾವು ಮಾಡದೇ, ಹೊಲದಲ್ಲಿಯೇ ಬಿಟ್ಟಿದ್ದಾರೆ‌. ಇಂತಹ ಸಂದರ್ಭದಲ್ಲಿ ರಸಗೊಬ್ಬರ ಬೆಲೆಯನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ … Read more

ಕೋವಿಡ್ ಸಂದಿಗ್ಧತೆಯ ನಡುವೆಯೂ ಮುಂದುವರಿಯುತ್ತಿರುವ ರೈತ ಚಳವಳಿ | ಸಾವಿರಾರು ರೈತರು ಮತ್ತೆ ದಿಲ್ಲಿಗೆ ದೌಡು

ನವದೆಹಲಿ: ದೇಶಾದ್ಯಂತ ಕೋವಿಡ್ ಸಂದಿಗ್ಧತೆಯು ತಲೆದೂರಿದ್ದರೂ ರೈತ ಚಳವಳಿಯು ಮುಂದುವರಿಯುತ್ತಿದೆ. ಸಾವಿರಾರು ಮಂದಿ ರೈತರು ಮತ್ತೆ ದೆಹಲಿಗೆ ದೌಡಾಯಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಸಂಘವು ಫಿರ್ ದಿಲ್ಲಿ ಚಲೋ (ಮತ್ತೆ ದೆಹಲಿಯತ್ತ ಸಾಗಿ) ಎಂಬ ಅಭಿಯಾನದ ಮುಂದಾಳತ್ವ ವಹಿಸಿದೆ. ಅಭಿಯಾನದ ಭಾಗವಾಗಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ರೈತರು ದೆಹಲಿಯತ್ತ ಸಾಗಿದ್ದಾರೆ. ಸುಧೀರ್ಘ ರೈತ ಹೋರಾಟವು ಮುಂದುವರಿಯುತ್ತಿರುವ ನಡುವೆ ಸುಗ್ಗಿಯ ಸಮಯ ಬಂದಾಗ, ರೈತರು ಗಣನೀಯ ಸಂಖ್ಯೆಯಲ್ಲಿ ತಮ್ಮ ಊರಿಗೆ ಮರಳಿದ್ದರು. ಇದೀಗ ಸುಗ್ಗಿಯ ಸಮಯ … Read more