ಸುಡಾನ್ ಮಾಜಿ ಪ್ರಧಾನಿ ಸಾದಿಕ್ ಅಲ್-ಮಹ್ದಿ ನಿಧನ: ಯುಎಇಯಲ್ಲಿ ಕೊನೆಯುಸಿರೆಳೆದ ಸುಡಾನ್ ನ ಅತ್ಯಂತ ಪ್ರಭಾವಿ ನಾಯಕ

ಮಂಗಳೂರು(26-11-2020): ಸುಡಾನ್ ಮಾಜಿ ಪ್ರಧಾನಿ ಮತ್ತು ಪ್ರಮುಖ ರಾಜಕಾರಣಿ ಸಾದಿಕ್ ಅಲ್-ಮಹ್ದಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕರೋನವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಮೂರು ವಾರಗಳ ನಂತರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿದೆ. 84 ವರ್ಷದ ಸಾದಿಕ್ ಅಲ್-ಮಹ್ದಿ ಅವರು ಸುಡಾನ್‌ನ ಕೊನೆಯ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರಧಾನ ಮಂತ್ರಿಯಾಗಿದ್ದರು ಮತ್ತು 1989 ರಲ್ಲಿ ಮಾಜಿ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರು ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ಮಹ್ದಿ ಪ್ರಭಾವಶಾಲಿ ವ್ಯಕ್ತಿಯಾಗಿ ಉಳಿದಿದ್ದರು. ಕಳೆದ ತಿಂಗಳು, ಅಲ್-ಮಹ್ದಿ … Read more

ಹಡಗು ದುರಂತ-140ಕ್ಕೂ ಅಧಿಕ ಮಂದಿ ಜಲಸಮಾಧಿ

Senegal

ಸೆನೆಗಲ್ (31-10-2020): ಹಡಗು ದುರಂತ ಸಂಭವಿಸಿ 140 ಕ್ಕೂ ಅಧಿಕ ಮಂದಿ ಜಲಸಮಾಧಿಯಾದ ದುರಂತ ಘಟನೆ ಸೆನೆಗಲ್ ಕರಾವಳಿಯಲ್ಲಿ ನಡೆದಿದೆ. ಸೆನೆಗಲ್ ರಾಜಧಾನಿ ಡಾಕರ್ ನಿಂದ ದಕ್ಷಿಣಕ್ಕೆ 100 ಕಿಲೋಮೀಟರ್ ದೂರದ ಎಂಬೋರ್ ಎಂಬ ಮೀನುಗಾರಿಕೆ ಪಟ್ಟಣದಿಂದ ಹಡಗು ಹೊರಟ ಕೆಲವೇ ಗಂಟೆಗಳಲ್ಲಿ ಮುಳುಗಡೆಯಾಗಿದೆ ಹಡಗಿನಲ್ಲಿ 200 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಕನಿಷ್ಠ 140ಕ್ಕೂ ಅಧಿಕ ಮಂದಿ ಮುಳುಗಿದ್ದಾರೆ. ಸೆನೆಗಲ್ ಮತ್ತು ಸ್ಪ್ಯಾನಿಶ್ ನೌಕಾಪಡೆಗಳು, ಸ್ಥಳೀಯ ಮೀನುಗಾರರು ತಕ್ಷಣವೇ ದೋಣಿಗಳ ಮೂಲಕ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. … Read more

ಹತ್ರಾಸ್ ಘಟನೆ ಬೆನ್ನಲ್ಲೇ ಮತ್ತೋರ್ವ ದಲಿತ ಯುವತಿಯ ಅತ್ಯಾಚಾರ ನಡೆಸಿ ಅಂಗಾಗ ಮುರಿದು ಬರ್ಬರ ಕೊಲೆ!

ಲಕ್ನೋ(01-10-2020): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿಯೊಬ್ಬಳನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ನಾಲಗೆ ಕತ್ತರಿಸಿ, ಕೊಲೆ ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ  ಹತ್ರಾಸ್‌ನಿಂದ 500 ಕಿ.ಮೀ ದೂರದಲ್ಲಿ, 22 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆ ನಡೆದಿದೆ. ಬಲರಾಂಪುರದ ಯುವತಿ ಲಕ್ನೋದ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಳು. ಮರಣೋತ್ತರ ವರದಿಯು ಸಾಮೂಹಿಕ ಅತ್ಯಾಚಾರವನ್ನು ದೃಢಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರು ಎಂದು … Read more