ವಿನೀತ ಭಾವದ “ಪುನೀತ”ನಿಗೆ ಅಕ್ಷರ ನಮನ

ಬಾಲಾಜಿ ಕುಂಬಾರ ಅವರ ಅಕ್ಷರ ನಮನ ‘ಪುನೀತ್’ ನಮನ ———————— ‘ದೊಡ್ಮನೆ ಹುಡ್ಗ’ ಥೇಟ್ ಅಪ್ಪನಂತೆ ‘ನಟಸಾರ್ವಭೌಮ’ ನಾಗಿ ನಟಿಸಿದ ‘ರಾಜಕುಮಾರ್’ ನಮ್ಮ ‘ಅಪ್ಪು’ ‘ಯಾರೇ ಕೂಗಾಡಲಿ’ ‘ವೀರ ಕನ್ನಡಿಗ’ ನಾಗಿ ‘ನಮ್ಮ ಬಸವ’ ನಂತೆ ಸದಾ ‘ಬಿಂದಾಸ್’ ದಿಂದ ‘ಅಭಿ’ನಯಿಸಿದ ನಮ್ಮ ‘ಯುವರತ್ನ’ ‘ಆಕಾಶ’ದ ‘ಚಲಿಸುವ ಮೋಡಗಳ’ಲ್ಲಿ ‘ಎರಡು ನಕ್ಷತ್ರಗಳ’ ಬೆಳಗಿನಲ್ಲಿ ‘ಬೆಟ್ಟದ ಹೂವಾಗಿ’ ‘ಮಿಲನ-ಮೈತ್ರಿ’ದೊಂದಿಗೆ ‘ಹೊಸ ಬೆಳಕು’ ಮೂಡಿಸಿದ ‘ಅಂಜನಿಪುತ್ರ’ ‘ಶಿವ ಮೆಚ್ಚಿದ ಕಣ್ಣಪ್ಪ’ನಿಗೆ ‘ಚಕ್ರವ್ಯೂಹ’ ದಿಂದ ‘ಪ್ರೇಮದ ಕಾಣಿಕೆ’ಯಾಗಿ ‘ಪೃಥ್ವಿ’ಯಿಂದ ‘ಭಾಗ್ಯವಂತ’ನಿಗೆ ಕರೆಸಿಕೊಂಡನು … Read more

ಕನ್ನಡದ ಹಿರಿಯ ರಂಗಕರ್ಮಿ ಚಿಂತಕ ಜಿ.ಕೆ.ಗೋವಿಂದ ರಾವ್ (86) ನಿಧನ

ಬೆಂಗಳೂರು: ಹಿರಿಯ ರಂಗಕರ್ಮಿ, ಸಾಹಿತಿ, ಚಿಂತಕ ಜಿ.ಕೆ.ಗೋವಿಂದ ರಾವ್ (86) ಇಂದು ವಿಧಿವಶರಾಗಿದ್ದಾರೆ. ಗೋವಿಂದ ರಾವ್ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದು ತಿಳಿದು ಬಂದಿದೆ.

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ, ಸಿನಿಮಾರಂಗದ ಒಡನಾಟ ಅವರಿಗಿತ್ತು.

ವಿಪಕ್ಷ ನಾಯಕ ಸಿದ್ದರಾಮಯ್ಯನವರು ಜಿ.ಕೆ. ಗೋವಿಂದರಾವ್ ನಿಧನದ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ”ಹಿರಿಯ ಲೇಖಕ, ಚಿಂತಕ,‌ ನಟ ಪ್ರೊ.ಜಿ.ಕೆ. ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿ.ಕೆ.ಜಿ ಅವರಿಗೆ ಗೌರವದ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ,” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

 

ಗೃಹ, ಮಿಥಿಲೆಯ ಸೀತೆಯರು, ಕರ್ಫ್ಯೂ, ಶಾಸ್ತ್ರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಗೋವಿಂದ ರಾವ್ ನಟಿಸಿದ್ದರು. ಗೋವಿಂದ ರಾವ್ ಅವರು ತಮ್ಮ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಇನ್ನಿಲ್ಲ

ಬೆಂಗಳೂರು : ಅಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಇಂದು ಆಸ್ಪತ್ರೆಯಲ್ಲಿ ನಿಧನರಾದರು. ಮೊನ್ನೆ ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಗೆ ಕರೆ ತಂದು ಸ್ಕ್ಯಾನ್ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ಹೆಚ್ಚು ಪೆಟ್ಟಾಗಿತ್ತು, ರಕ್ತಸ್ರಾವವಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿ ದ್ದಾರೆ. ಆಸ್ಪತ್ರೆ ಮುಂದೆ ಮಾತನಾಡಿದ ಸಂಚಾರಿ ವಿಜಯ್ ಅವರ ಸಹೋದರ ಸಿದ್ದೇಶ್, ಸಮಾಜದ ಒಳಿತಿಗಾಗಿ ಸಂಚಾರಿ ವಿಜಯ್ ದುಡಿಯುತ್ತಿದ್ದ ಹೀಗಾಗಿ ಅವನ ಅಂಗಾಂಗಗಳನ್ನ ದಾನ … Read more

ಕವಿ ಸಿದ್ದಲಿಂಗಯ್ಯ ಅವರ ನಿಧನದಿಂದ ಭಾರತೀಯ ಸಾಹಿತ್ಯಕ್ಕೆ ಮತ್ತು ದಲಿತ ಸಮುದಾಯಕ್ಕೆ ನಷ್ಟ: ಮಮತಾ ಬ್ಯಾನರ್ಜಿ

ಬೆಂಗಳೂರು: ಕನ್ನಡದ ಕೋಗಿಲೆ ಖ್ಯಾತ ಕವಿ,ಸಾಹಿತಿ ಡಾ. ಸಿದ್ದಲಿಂಗಯ್ಯನವರ ನಿಧನಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

ಡಾ.ಸಿದ್ದಲಿಂಗಯ್ಯ ಅವರ ನಿಧನದಿಂದ ಭಾರತೀಯ ಸಾಹಿತ್ಯಕ್ಕೆ ಮತ್ತು ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಮತಾ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಮತಾ,
ದಲಿತ ಕವಿ ಮತ್ತು ಕಾರ್ಯಕರ್ತ ಸಿದ್ದಲಿಂಗಯ್ಯ ಅವರ ನಿಧನದ ಬಗ್ಗೆ ಕೇಳಿ ಬೇಸರವಾಯಿತು.
ಅವರ ಕ್ರಾಂತಿಕಾರಿ ಕಾವ್ಯ, ದಲಿತ ರಾಜಕೀಯದಲ್ಲಿ ಪಾತ್ರ ಮತ್ತು ದಲಿತರ ಹಕ್ಕುಗಳಿಗೆ ಧ್ವನಿ ನೀಡಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುವುದು. ಅವರ ನಿಧನವು ಭಾರತೀಯ ಸಾಹಿತ್ಯ ಮತ್ತು ದಲಿತ ಸಮುದಾಯಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಮೂಲಕ ನಮನಗಳು ತಿಳಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ನಿಧನ

ಕಲ್ಬುರ್ಗಿ : ನಾಡಿನ ಹಿರಿಯ ಸಾಹಿತಿ, ಚಿಂತಕ ಪ್ರೊ. ವಸಂತ ಕುಷ್ಟಗಿ (85) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ರಕ್ತದೊತ್ತಡ ಕಡಿಮೆಯಾಗಿದ್ದ ಕಾರಣದಿಂದ ವಾರದ ಹಿಂದಷ್ಟೆ ಗುಲಬರ್ಗಾದ ಹಾರ್ಟ್‌ ಫೌಂಡೇಷನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದರು. ಪ್ರೊ.ವಸಂತ ಕುಷ್ಟಗಿ ಅವರು 60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅವರು, ದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿ ಅನನ್ಯ . ಪ್ರಾಧ್ಯಾಪಕ, ಸಾಹಿತಿ, ಲೇಖಕ, ಪತ್ರಕರ್ತ, ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, … Read more

ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ಪರಿಹಾರ, ಮಾಸಿಕ 2 ಸಾವಿರ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ತಿರುವನಂಪುರ: ಕೊರೊನಾ ಎರಡನೇ ಅಲೆ ದೇಶದ ಜನತೆಗೆ ತುಂಬಾ ಸಂಕಷ್ಟಕ್ಕೆ ದೂಡಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ವ್ಯಾಪಕವಾಗಿ ಹರಡಿರುವ ಕೊರೊನಾ ವೈರಸ್ ಕೆಲವು ಕುಟುಂಬಗಳಿಗೆ ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ಕೇರಳ ರಾಜ್ಯವು ಹೊರತಾಗಿಲ್ಲ, ಕೇರಳದಲ್ಲಿಯೂ ಕೋವಿಡ್ ಆರ್ಭಟ ಜೋರಾಗಿದೆ. ಅನೇಕರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ನೋವಿನ ಮಡುವಿನಲ್ಲಿ ಮುಳುಗಿದರೆ, ಇನ್ನೂ ಕೆಲವೊಂದು ಕಡೆಯಲ್ಲಿ ಪೋಷಕರನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿರುವ ಧಾರುಣ ಘಟನೆಗಳು ನಡೆದಿವೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳು ನೊಂದವರ ಪರವಾಗಿ ದನಿಯಾಗಿ ಆತ್ಮಸ್ಥೈರ್ಯ … Read more

ಕೊರೊನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ವೇತನ : ಟಾಟಾ ಸ್ಟೀಲ್ ಕಂಪನಿ ಘೋಷಣೆ

ನವದೆಹಲಿ : ಕೊರೊನಾ ಎರಡನೇ ಅಲೆಯ ಭೀಕರತೆ ಜನತೆಗೆ ಭಾರೀ ಆತಂಕವನ್ನು ಸೃಷ್ಟಿಸಿದೆ. ದೇಶದಲ್ಲಿ ಪ್ರತಿದಿನ ನಾಲ್ಕು ಸಾವಿರ ಆಸುಪಾಸಿನಲ್ಲಿ ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಇಂಥ ದುರಿತ ಕಾಲದಲ್ಲಿ ಟಾಟಾ ಸ್ಟೀಲ್ ಕಂಪನಿ ತನ್ನ ನೌಕರರ ‌ಜೀವನ ಸುರಕ್ಷತೆಗಾಗಿ ಹೊಸ ಆದೇಶ ಒಂದನ್ನು ಘೋಷಣೆ ಮಾಡಿದೆ. ಟಾಟಾ ಸ್ಟೀಲ್ ಘೋಷಣೆ ಮಾಡಿದ ಆ ವಿಶೇಷ ಸ್ಕೀಮ್ ಏನೆಂದರೆ ಕರೋನಾ ಮಹಾಮಾರಿಯಿಂದಾಗಿ ಮೃತಪಟ್ಟ ಕಂಪನಿಯ ನೌಕರನ ಪರಿವಾರ ಅಥವಾ ನಾಮಿನಿಗೆ ಮುಂದಿನ 60 ವರ್ಷದ ತನಕ ಕಂಪನಿ … Read more

ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರಿಗೆ ಕನಿಷ್ಠ 50 ಲಕ್ಷ ರೂ ಪರಿಹಾರ ನೀಡಬೇಕು: ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ

ಬೆಂಗಳೂರು: ಚುನಾವಣೆ ಕರ್ತವ್ಯದಲ್ಲಿ ದುಡಿದ ಮತ್ತು ವಿದ್ಯಾಗಮ ಯೋಜನೆ ಮೂಲಕ ಪಾಠ ಮಾಡಿದ ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ ಕಡೆ ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಮೃತಪಟ್ಟ ಎಲ್ಲ ಶಿಕ್ಷಕರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಕನಿಷ್ಠ 50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಕೊರೊನಾ ತಗುಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ 145ಕ್ಕೂ ಹೆಚ್ಚು ಶಿಕ್ಷಕರು … Read more

ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಅವರು ಇಂದು ವಿಧಿವಶರಾಗಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೃಷ್ಣ ಅವರು ಮೈಸೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಅವರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕೊತ್ತಮಾರನಹಳ್ಳಿ ಗ್ರಾಮದವರು, ಕೃಷ್ಣ ಅವರು ಮೂರು ಬಾರಿ ಕೆಆರ್ ಪೇಟೆ ಕ್ಷೇತ್ರದಿಂದ ಶಾಸಕರಾಗಿದ್ದು 1996ರಲ್ಲಿ ಮಂಡ್ಯದ ಸಂಸದರಾಗಿ ಆಯ್ಕೆಯಾಗಿದ್ದರು. ಮೇಷ್ಟ್ರು ಎಂದು ಖ್ಯಾತಿ ಹೊಂದಿರುವ ಕೃಷ್ಣ ಅವರು 1988ರಲ್ಲಿ ಎಸ್ ಆರ್ ಬೊಮ್ಮಾಯಿ ಸಂಪುಟದಲ್ಲಿ ಪಶುಸಂಗೋಪನೆ ಮತ್ತೆ ರೇಷ್ಮೆ … Read more

ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ನೆರವು : ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಣೆ

ಹಾವೇರಿ : ಕೊವೀಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 50 ಸಾವಿರ ರೂ. ವೈಯಕ್ತಿಕ ಪರಿಹಾರ ಧನ ನೀಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಿಸಿದ್ದಾರೆ. ಹಿರೇಕೆರೂರು ಮತಕ್ಷೇತ್ರದ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹಿರೇಕೆರೂರು ಮತ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸುಮಾರು 18 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಭೇಟಿಯಾಗಿ ಇಂದಿನಿಂದ ಪರಿಹಾರ … Read more