ಬಿಜೆಪಿ ಸರ್ಕಾರಕ್ಕೆ ಹೆಡ್‌ಲೈನ್‌ ಮೇಲೆಯೇ ಆಸಕ್ತಿ, ಡೆಡ್‌ಲೈನ್‌ ಮೇಲೆ ಅಲ್ಲ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಕೋವಿಡ್‌ ಲಸಿಕೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಡ್‌ಲೈನ್‌ಗಳ ಬಗ್ಗೆ ಆಸಕ್ತಿಯೇ ಹೊರತು, ಡೆಡ್‌ಲೈನ್‌ ಬಗ್ಗೆ ಅಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಅವರು, ಎಲ್ಲ ಭಾರತೀಯರಿಗೂ ಉಚಿತವಾಗಿ ಲಸಿಕೆ ಸಿಗಬೇಕು. ಇದಕ್ಕಾಗಿ ಕೋವಿನ್‌ನಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಬಾರದು. ಏಕೆಂದರೆ, ಡಿಜಿಟಲ್‌ ಸೌಲಭ್ಯವಿಲ್ಲದವರೂ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದು ಪ್ರತಿಪಾದಿಸಿದರು. ರಾಜ್ಯಗಳಿಗೆ ಲಸಿಕೆ ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಪಾಡಬೇಕು, ಈ ವರ್ಷಾಂತ್ಯದ ವೇಳೆಗೆ ಸರ್ವರಿಗೂ … Read more

ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ, 80 ಕೋಟಿ ಜನರಿಗೆ ನವೆಂಬರ್ ತನಕ ಫ್ರೀ ರೇಷನ್ : ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕಳೆದ ಬಾರಿ ಕೋವಿಡ್ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ 8 ತಿಂಗಳ ಕಾಲ ದೇಶದ ಜನರಿಗೆ ಉಚಿತವಾಗಿ ಆಹಾರಧಾನ್ಯ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿಯಲ್ಲಿ ಈ ವರ್ಷವೂ ಕೂಡ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ದೇಶದ 80 ಕೋಟಿ ಜನರಿಗೆ ನವಂಬರ್ (ದೀಪಾವಳಿ) ವರೆಗೂ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗುವುದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇಂದು ಸಂಜೆ 5ಗಂಟೆಗೆ ದೇಶದ ಜನರನ್ನುದ್ದೇಶಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ ಅವರು ಈ ವಿಷಯನ್ನು ತಿಳಿಸಿದ್ದಾರೆ. … Read more

ದೇಶವನ್ನುದ್ದೇಶಿಸಿ ಇಂದು ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಅಧಿಕೃತವಾಗಿ ಟ್ವೀಟ್ ಮಾಡಿದೆ. ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಕೋವಿಡ್ 2ನೇ ಅಲೆಯ ಭೀಕರತೆ ಕುರಿತು ಪ್ರಸ್ತಾಪ ಮಾಡುವ ಅವರು ಕೋವಿಡ್ ಹೊಸ ಪ್ರಕರಣಗಳು ಈಗ ಇಳಿಮುಖ ಆಗಿರುವ ಸಮಯದಲ್ಲಿ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ ಎರಡನೇ ಅಲೆಯಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಕಟ್ಟುನಿಟ್ಟಾದ … Read more

ಜನರ‌ ತೆರಿಗೆ ಹಣ ದುರ್ಬಳಕೆ‌ ಮಾಡಿ ಪತ್ರಿಕೆಗಳಲ್ಲಿ‌ ಸುಳ್ಳಿನ‌ ಕಂತೆಗಳ ಜಾಹೀರಾತು ನೀಡಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾದರೂ ಪಕ್ಷದ ಶಾಸಕರು, ಸಂಸದರು, ಸಚಿವರು ಖಾಲಿ ಡಬ್ಬಿಯನ್ನೇ ತಲೆಮೇಲಿಟ್ಟುಕೊಂಡು ತಿರುಗುತ್ತಾ ತಾವೇನೋ ಸಾಧಿಸಿದ್ದೇವೆ ಎಂದು ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ವಿರೋಧಿ ಆರ್ಥಿಕ ನೀತಿಗಳು, ದುರುದ್ದೇಶಿತ ಕಾನೂನುಗಳು ಹಾಗೂ ದುರಾಡಳಿತದಿಂದಾಗಿ ದೇಶದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹತಾಶ ಪ್ರಧಾನಿಗಳು ಜನರ‌ ತೆರಿಗೆ ಹಣ … Read more

ಕೋವಿಡ್ 2ನೇ ಅಲೆಗೆ ಪ್ರಧಾನ ಮಂತ್ರಿಯ ನಾಟಕಗಳೇ ಕಾರಣ: ರಾಹುಲ್ ಗಾಂಧಿ ಟೀಕೆ

ನವದೆಹಲಿ: ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ ಎರಡನೇ ಅಲೆಗೆ ಪ್ರಧಾನಮಂತ್ರಿಯ ಗಿಮಿಕ್‌ಗಳೇ ಕಾರಣ. ಅವರಿಗೆ ಕೋವಿಡ್‌ ಸೋಂಕು ಅರ್ಥವಾಗಲೇ ಇಲ್ಲ. ಭಾರತದಲ್ಲಿನ ಸಾವಿನ ಪ್ರಮಾಣ ಸುಳ್ಳು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಇಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾಧ್ಯಮಗಳನ್ನು ಉದ್ದೇಶಿ ಶಮಾತನಾಡುತ್ತಿದ್ದ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ತಳಿ ಮತ್ತು ಅದರ ವಿರುದ್ಧದ ಹೋರಾಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತೇ ಇಲ್ಲ. ಲಸಿಕೆ ಹಂಚುವ … Read more

ಸಂಕಷ್ಟದಲ್ಲಿರುವ ಉದ್ಯೋಗಸ್ಥರು ಹಾಗೂ ಉದ್ಯೋಗದಾತರ ನೆರವಿಗೆ ಸರ್ಕಾರ ಬರಬೇಕು: ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲೇ ಬೇಕು. ಸಂಗ್ರಹಿಸಿಡಲು ಸಾಧ್ಯವಿಲ್ಲದ ಹೂವು, ಹಣ್ಣು, ತರಕಾರಿ ಬೆಳೆದ ರೈತರು, ವೃತ್ತಿ ಆಧಾರಿತ ಕಾರ್ಮಿಕರು, ವರ್ತಕರಿಗೆ ಯಾವ ರೀತಿ ಪರಿಹಾರ ನೀಡಬೇಕು ಎನ್ನುವುದನ್ನು ಸರ್ಕಾರ ಇನ್ನೂ ಯೋಚಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಂಕಷ್ಟದಲ್ಲಿರುವ ಉದ್ಯೋಗಸ್ಥರು ಹಾಗೂ ಉದ್ಯೋಗದಾತರ ನೆರವಿಗೆ ಸರ್ಕಾರ ಬರಬೇಕು. ಗ್ಲೋಬಲ್ ಟೆಂಡರ್ ಮಾಡಿ ಏಜೆಂಟರ ಮೂಲಕ ಕಮೀಷನ್ ಹೊಡೆಯುವ ಬಿಜೆಪಿ … Read more

ಡಬಲ್ ಮಾಸ್ಕ್ ಹಾಕುವಂತೆ ಪ್ರೇರೇಪಿಸಲು ‘ಶೋಲೆ’ ಚಿತ್ರದ ದೃಶ್ಯವನ್ನು ಹಂಚಿದ ಮುಂಬೈ ಪೋಲೀಸ್

ಮುಂಬಯಿ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ರಾಜ್ಯ ಸರಕಾರಗಳು ಮತ್ತು ಪೋಲೀಸ್ ಇಲಾಖೆಗಳು ಜನರನ್ನು ಜಾಗೃತಿ ಮೂಡಿಸಲು ಪಾಡು ಪಡುತ್ತಿದೆ. ಇತ್ತೀಚೆಗೆಷ್ಟೇ ಕೇರಳ ಪೋಲೀಸರು ಜನರನ್ನು ಎಚ್ಚರಿಸಲು ಹಿಟ್ ಹಾಡೊಂದರ ಧಾಟಿಯಲ್ಲಿರುವ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಮುಂಬೈ ಪೋಲೀಸರು ಕೂಡಾ ತಮ್ಮ ಟ್ವಿಟರ್ ಅಕೌಂಟಿನಲ್ಲಿ ಹಳೆಯ ಸಿನಿಮಾವೊಂದರ ದೃಶ್ಯವಿರುವ ಮೀಮ್‍ನ್ನು ಬಳಸಿಕೊಂಡಿದ್ದಾರೆ. ಜನರು ಕೋವಿಡಿನಿಂದ ರಕ್ಷಣೆ ಪಡೆಯಲು ಎರಡೆರಡು ಮಾಸ್ಕುಗಳನ್ನು ಬಳಸಬೇಕೆಂದು ಹಲವು ತಜ್ಞರು ಸಲಹೆ ನೀಡಿದ್ದರು. ಅದರಲ್ಲೂ ಜನ ಜಂಗುಳಿಯಿರುವ ಕಡೆಗಳಲ್ಲಿ ಡಬಲ್ ಮಾಸ್ಕ್ … Read more