ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ … Read more

ಕರ್ನಾಟಕ- ಕೇರಳ ಪ್ರಯಾಣ ನಿಷೇಧವಿಲ್ಲ, ಆದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

dr. sudhakar

ಬೆಂಗಳೂರು(24-02-2021): ಕರ್ನಾಟಕ ಮತ್ತು ಕೇರಳ ಅಂತರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ. ಆದರೆ ಪ್ರಯಾಣಕ್ಕೆ 72 ಗಂಟೆಗೆ ಹಳೆಯದಲ್ಲದ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ವಯನಾಡ್ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಗಡಿಯಲ್ಲಿ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದರು. ಸರಕಾರದ ಆದೇಶದಿಂದಾಗಿ ಸರಕು ಸಾಗಾಟ ಸೇರಿದಂತೆ ಅಗತ್ಯ ಸಂಚಾರಕ್ಕೆ ಕೂಡ ಅಡ್ಡಿಯಾಗಿದೆ. ದಕ್ಷಿಣ ಕನ್ನಡದ ತಲಪಾಡಿ ಮಾರ್ಗವಾಗಿ ಸಂಚಾರ ಬಂದ್ ಹಿನ್ನೆಲೆಯಲ್ಲಿ ಗಡಿನಾಡಿನಿಂದ … Read more

ಎರಡನೇ ಅಲೆಯ ಕೋವಿಡ್| ಅಮರಾವತಿಯಲ್ಲಿ ಮತ್ತೆ ಸಂಫೂರ್ಣ ಲಾಕ್ ಡೌನ್ ಘೋಷಣೆ

lockdown

ಮುಂಬೈ(22-02-2020): ಎರಡನೇ ಅಲೆಯ ಕೋವಿಡ್ ಹಿನ್ನೆಲೆಯಲ್ಲಿ ಭಾರತದ ಹೆಚ್ಚಿನ ನಗರಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಈ ಮಧ್ಯೆ ಅಮರಾವತಿಯಲ್ಲಿ ಒಂದು ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಅಮರಾವತಿಯಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಇಂದು ಸಂಜೆಯಿಂದಲೇ ಲಾಕ್​ಡೌನ್​ ನಿಯಮ ಜಾರಿಗೆ ಬರಲಿದೆ. ಸಚಿವೆ ಯಶೋಮತಿ ಠಾಕೂರ್ ಲಾಕ್ ಡೌನ್ ಕುರಿತು ಮಾಹಿತಿಯನ್ನು ನೀಡಿದ್ದು, ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ … Read more

ಕುವೈತ್ ನಲ್ಲಿ ಮತ್ತೆ ಲಾಕ್ ಡೌನ್: ವಿದೇಶಿಗರಿಗೆ 2 ವಾರಗಳ ನಿರ್ಬಂಧ: ಕುವೈತ್ ಸರಕಾರದ ನೂತನ ಪ್ರಕಟಣೆಯಲ್ಲಿ ಏನೇನಿದೆ ಓದಿ

kuwait

ಕುವೈತ್(04-02-2021): ಕೊರೊನಾ ಹಿನ್ನೆಲೆಯಲ್ಲಿ ಕುವೈತ್ ಸರಕಾರ ಮತ್ತೆ ಸಂಜೆ ಲಾಕ್ ಡೌನ್ ನ್ನು ಘೋಷಿಸಿದ್ದು, ವಿದೇಶಿ ನಾಗರಿಕರಿಗೆ ಎರಡು ವಾರಗಳ ಪ್ರವೇಶ ನಿರ್ಬಂಧವನ್ನು ಹೇರಿದೆ. ಫೆ. 7ರಿಂದ ಕುವೈತ್ ಸರಕಾರ 2 ವಾರಗಳವರೆಗೆ ವಿದೇಶಿ ಪ್ರಜೆಗಳಿಗೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ನೀಡಿದೆ. ಕುವೈತ್ ಕ್ಯಾಬಿನೆಟ್ ಹೊರಡಿಸಿರುವ ಪ್ರಕಟಣೆಯಲ್ಲಿ ಜಿಮ್ ಮತ್ತು ಸಲೋನ್ ಮುಚ್ಚಲು ಆದೇಶಿಸಿದೆ ಫೆಬ್ರವರಿ 7 ರಿಂದ ಒಂದು ತಿಂಗಳವರೆಗೆ ಪ್ರತಿದಿನ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಇತರ ವಾಣಿಜ್ಯ ವ್ಯವಹಾರಗಳನ್ನು ನಿಲ್ಲಿಸುವಂತೆ … Read more

ಹೊಸ ಸ್ವರೂಪದ ವೈರಸ್: ಕೇಂದ್ರಗಳಿಂದ ರಾಜ್ಯಗಳಿಗೆ ಮಹತ್ವದ ಸೂಚನೆ ರವಾನೆ

covid vachin

ಬೆಂಗಳೂರು(26-12-2020): ಹೊಸ ಸ್ವರೂಪದ ಕೊರೊನಾ ವೈರಸ್ ಬಗ್ಗೆ ರಾಜ್ಯ ಸರಕಾರಗಳು ಯಾವುದೇ ಹೇಳಿಕೆಯನ್ನು ನೀಡಬಾರದೆಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹೊಸ ಮಾದರಿಯ ಸೋಂಕು ಪತ್ತೆಯಾದಲ್ಲಿ ತಕ್ಷಣವೇ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಗೆ ರಕ್ತದ ಮಾದರಿಯನ್ನು ಕಳುಹಿಸಿಕೊಡಬೇಕೆಂದು ಸೂಚನೆ ನೀಡಲಾಗಿದೆ. ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಈ ಸೂಚನೆಯನ್ನು ನೀಡಿದ್ದಾರೆ. ಕೇಂದ್ರದಿಂದ ಸೂಚನೆ ಬಂದಿರುವ ಬಗ್ಗೆ … Read more

ನೈಟ್ ಕರ್ಪ್ಯೂ ಮಾರ್ಗಸೂಚಿ ಪ್ರಕಟ

curfew

ಬೆಂಗಳೂರು(23-12-2020): ನಾಳೆಯಿಂದ(ಡಿ.24)ರ ರಾತ್ರಿಯಿಂದ ಜ.2ರವರೆಗೆ,  ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶವನ್ನು ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ. ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆ ವ್ಯಕ್ತಿಗಳ ಚಲನವಲನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಟ್ರಕ್ ಗಳು, ಸರಕು ವಾಹನ ಅಥವಾ ಯಾವುದೇ ಸರಕು ಸಾಗಣೆಗೆ ನಿರ್ಬಂಧವಿಲ್ಲ. ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಶೇ.50ರಷ್ಟು ನೌಕರರೊಂದಿಗೆ ಕೆಲಸ … Read more

ಬ್ರಿಟನ್ನಿನಲ್ಲಿ ಪತ್ತೆಯಾಗಿ, ಹಲವು ದೇಶಗಳಿಗೆ ಹರಡಿದ ನವೀನ ಪ್ರಭೇದದ ಕೊರೋನಾ ವೈರಸ್ ಕುರಿತು ಭಾರತೀಯ ಆರೋಗ್ಯ ಸಚಿವಾಲಯವು ಹೇಳಿರುವುದು ಹೀಗೆ…

ನವದೆಹಲಿ(22-12-2020): ಬ್ರಿಟನ್ನಿನಲ್ಲಿ ಪತ್ತೆಯಾಗಿ, ಹಲವು ದೇಶಗಳಿಗೆ ಹರಡಿದ ನವೀನ ಪ್ರಭೇದದ ಕೊರೋನಾ ವೈರಸ್ ಕುರಿತು ಭಾರತೀಯ ಆರೋಗ್ಯ ಸಚಿವಾಲಯವು ಹೇಳಿರುವುದು ಹೀಗೆ… ರೂಪಾಂತರಗೊಂಡ ಕೊರೋನಾ ವೈರಸ್ ದೇಶದಲ್ಲಿರುವುದು ಈ ವರೆಗೂ ದೃಢಪಟ್ಟಿಲ್ಲ. ಜನರು ಆತಂಕ ಪಡಬೇಕಾದ ಅಗತ್ಯವೇ ಇಲ್ಲ. ಆದರೆ ಗರಿಷ್ಠ ಮಟ್ಟದಲ್ಲಿ ಜಾಗೃತಿ ಬೇಕಿದೆ. ಹೊಸ ವೈರಸ್ ಕೊರೋನಾ ರೋಗದ ತೀವ್ರತೆಯನ್ನು ಹೆಚ್ಚಿಸುವುದಿಲ್ಲ. ಬದಲು ಇದು ಹರಡುವ ವೇಗ ಹೆಚ್ಚಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಕಳೆದ ಐದು ತಿಂಗಳಿನಿಂದ ರೋಗಿಗಳಾಗಿರುವವರ … Read more

ಜನವರಿ ಒಂದರಿಂದ ವಾಹನ ಚಾಲಕರಿಗೆ ಈ ರಿಯಾಯಿತಿ ಇರುವುದಿಲ್ಲ…

ನವದೆಹಲಿ(22-12-2020): ಕೊರೋನಾ ಸಾಂಕ್ರಾಮಿಕ ರೋಗ, ಇತ್ಯಾದಿ ಕಾರಣಗಳಿಂದಾಗಿ ದೇಶಾದ್ಯಂತ ಎಲ್ಲಾ ಸಂಸ್ಥೆಗಳ ಕಛೇರಿ ಕೆಲಸಗಳಿಗೆ ತೊಡಕುಂಟಾಗಿತ್ತು. ಇದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಅದರ ಅಧೀನದಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುವ ಕಛೇರಿಗಳಿಗೂ ತಟ್ಟಿತ್ತು. ಹೀಗಾಗಿ ವಾಹನದ ದಾಖಲೆ, ಡ್ರೈವಿಂಗ್ ಲೈಸನ್ಸ್, ರಿಜಿಸ್ಟ್ರೇಷನ್, ಫಿಟ್ನೆಸ್ ಸರ್ಟಿಫಿಕೇಟ್ ಮುಂತಾದವುಗಳು ನವೀಕರಣ ಮಾಡದಿದ್ದರೂ ವಾಹನಗಳನ್ನು ರಸ್ತೆಗಿಳಿಸಲು ಅನುಮತಿಯಿತ್ತು. ಈ ಅನುಮತಿಯು ಕಳೆದ ಒಂಭತ್ತು ತಿಂಗಳಿನಿಂದಲೂ ಚಾಲ್ತಿಯಲ್ಲಿತ್ತು. ಆದರೆ ಇದೀಗ ಲಾಕ್ಡೌನ್ ಸಡಿಲವಾಗಿ ಕಛೇರಿಗಳು ಕೆಲಸ ನಿರ್ವಹಿಸಲು ತೊಡಗಿದೆ. ಇನ್ನು ಮುಂದೆ … Read more

ಇಂದು ರಾತ್ರಿಯಿಂದ ಕುವೈತಿನಿಂದ ಮತ್ತು ಕುವೈತಿಗೆ ವೈಮಾನಿಕ ಸೇವೆಗಳು ಇರುವುದಿಲ್ಲ

ಕುವೈತ್ ಸಿಟಿ(21-12-2020): ಸೌದಿ, ಒಮನ್ ಬಳಿಕ ಕುವೈತ್ ಕೂಡಾ ಅಂತರಾಷ್ಟ್ರೀಯ ವೈಮಾನಿಕ ಸೇವೆಗಳನ್ನು ನಿಲ್ಲಿಸಲಿದೆ. ಇಂದು ರಾತ್ರಿ ಹನ್ನೊಂದು ಗಂಟೆಯಿಂದ ಕುವೈತಿಗೆ ಬರುವ ಮತ್ತು ಕುವೈತಿನಿಂದ ಹೊರಹೋಗುವ ವಿಮಾನ ಪ್ರಯಾಣಗಳನ್ನು ರದ್ದು ಪಡಿಸಲಾಗಿದೆ. ಈ ನಿಷೇಧವು ಜನವರಿ ಒಂದರ ವರೆಗೆ ಮುಂದುವರಿಯಲಿದ್ದು, ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನದಲ್ಲಿ ಮಾರ್ಪಾಡು ಮಾಡುವ ಸಾಧ್ಯತೆಯಿದೆ. ನಿವಾಸಿಗಳ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಈ ನಿಯಮಾವಳಿಯನ್ನು ಘೋಷಿಸಲಾಗಿದ್ದು, ವ್ಯೋಮ ಗಡಿಗಳ ಜೊತೆಗೆ ಭೂ ಮಾರ್ಗವನ್ನೂ ಬಂದ್ ಮಾಡಲಾಗಿದೆ. ಬ್ರಿಟನಿನಲ್ಲಿ … Read more

ಕೋರೋನಾ ವ್ಯಾಕ್ಸಿನ್ ಬಂದ ಬಳಿಕ ಎನ್ ಆರ್ ಸಿ ಜಾರಿ: ಅಮಿತ್ ಶಾ

ಕೊಲ್ಕತ್ತಾ(20-12-2020): ಕೊರೋನಾ ವ್ಯಾಕ್ಸಿನ್ ಬಂದ ಬಳಿಕ ಎನ್ ಆರ್ ಸಿ ಜಾರಿಗೊಳಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಎರಡು ದಿನಗಳಿಗಾಗಿ ಪಶ್ಚಿಮ ಬಂಗಾಳ ಭೇಟಿಯಲ್ಲಿರುವ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ಕೊರೋನಾ ಕಾರಣದಿಂದಾಗಿ ಎನ್ ಆರ್ ಸಿ ಸಂಬಂಧಿತ ವಿಚಾರಗಳಲ್ಲಿ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಕೊರೋನಾಕ್ಕಿರುವ ವ್ಯಾಕ್ಸಿನ್ ಬಂದ ಬಳಿಕ ಎನ್ ಆರ್ ಸಿ ಯನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ. ಬಾಂಗ್ಲಾದೇಶದಿಂದ ಬಂದ ನುಸುಳುಕೋರರನ್ನು ಸಂಪೂರ್ಣವಾಗಿ ಹೊರದಬ್ಬಲು ಪಶ್ಚಿಮ ಬಂಗಾಳದ ಜನರು ಇಚ್ಛಿಸುತ್ತಿದ್ದಾರೆ. ಅವಕಾಶ ಸಿಕ್ಕರೆ ಐದೇ ವರ್ಷಗಳಲ್ಲಿ ಸುವರ್ಣ … Read more