ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ಪರಿಹಾರ ಹಣ ವರ್ಗಾವಣೆ ಮಾಡಿದ್ದೇನೆ : ಬಿ. ಎಸ್. ಯಡಿಯೂರಪ್ಪ

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಘೋಷಣೆ ಮಾಡಿರುವ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. (ನೇರ ನಗದು ವರ್ಗಾವಣೆ) ಮೂಲಕ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿ ಬಿ. ಎಸ್. ವೈ. ಅವರು ಕಟ್ಟಡ … Read more

ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ : 500 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

  ಬೆಂಗಳೂರು : ಜೂನ್ 7ರಂದು ಅಂತ್ಯವಾಗುವ ಲಾಕ್ ಡೌನ್ ಇನ್ನೂ ಒಂದು ವಾರ ಅಂದ್ರೆ ಜೂನ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಕೇಸ್ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಇಳಿಮುಖ ಆಗಿದೆ. ಆದ್ರೆ ಸಾವಿನ ಪ್ರಮಾಣ ಇನ್ನು ಹಾಗೆ ಇದೆ. ಜೂನ್ 7 ರಿಂದ ಅನ್ ಲಾಕ್ ಮಾಡಿದರೆ ಮತ್ತೆ ಸೋಂಕು ಹೆಚ್ಚಾಗಬಹುದು ಎಂದು ತಜ್ಞರ ಸಮಿತಿ ವರದಿ ನೀಡಿತ್ತು. ಒಂದು ವಾರ ಲಾಕ್ … Read more

12ನೇ ತರಗತಿ ಪರೀಕ್ಷೆ ರದ್ದುಗೊಳಿಸಿ ಮಕ್ಕಳಿಗೆ ಪಾಸ್ ಮಾಡಬೇಕು : ಸಿಎಂ ಕೇಜ್ರಿವಾಲ್

ನವದೆಹಲಿ: ಕೋವಿಡ್‌ ಪಿಡುಗಿನ ಮಧ್ಯೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ಕುರಿತಾಗಿ ಜೂನ್ 3ರಂದು ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಕೇಜ್ರಿವಾಲ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 12ನೇ ಪರೀಕ್ಷೆಯ ಬಗ್ಗೆ ಮಕ್ಕಳಿಗೆ ಹಾಗೂ ಪೋಷಕರಿಗೆ ತುಂಬಾ ಚಿಂತೆಯಾಗಿದೆ. ಕೋವಿಡ್ ದಿಂದ ಜನತೆ ಆತಂಕದಲ್ಲಿದ್ದಾರೆ. ಹೀಗಾಗಿ ವ್ಯಾಕ್ಸಿನ್ ಇಲ್ಲದೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪರೀಕ್ಷೆ ನಡೆಸಬಾರದು ಎನ್ನುವ ಇಂಗಿತ ವ್ಯಕ್ತವಾಗುತ್ತಿದೆ. ಸಿಬಿಎಸ್‌ಇ … Read more

ಸಚಿವರ ಒಂದು ವರ್ಷದ ವೇತನ ‘ಕೋವಿಡ್ ಪರಿಹಾರ ನಿಧಿಗೆ’ ನೀಡುವಂತೆ ಸಿಎಂ ಆದೇಶ

ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆ ಮಿತಿ ಮೀರುತ್ತಿದೆ. ಅನೇಕ ಕಡೆಗಳಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ, ಕೋವಿಡ್ ನಿರ್ವಹಣೆಗಾಗಿ ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ಅನುಕೂಲವಾಗುವಂತೆ ರಾಜ್ಯದ ಸಚಿವ ಸಂಪುಟದ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಕೊವಿಡ್ -19 ಪರಿಹಾರ ನಿಧಿಗೆ ದೇಣಿಗೆಗಾಗಿ ಪಾವತಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ರಾಜ್ಯದ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಮೇ … Read more

ಕೋವಿಡಿನಿಂದಾಗಿ ಉಸಿರುಗಟ್ಟುತ್ತಿರುವ ಭಾರತವನ್ನು ಅಪ್ಪಿ ಹಿಡಿಯುತ್ತಿರುವ ಅರಬ್ ದೇಶಗಳು | ಇದೀಗ ಕುವೈತಿನಿಂದಲೂ ಪ್ರಾಣವಾಯುವಿನೊಂದಿಗೆ ಧಾವಿಸಿ ಬರುತ್ತಿದೆ ಭಾರತೀಯ ಯುದ್ಧ ನೌಕೆಗಳು

ಕುವೈತ್ ಸಿಟಿ: ಉಳಿದೆಲ್ಲಾ ಅರಬ್ ದೇಶಗಳಂತೆ ಕುವೈತ್ ಕೂಡಾ ಭಾರತಕ್ಕೆ ಪ್ರಾಣವಾಯುವನ್ನು ಕಳುಹಿಸುತ್ತಿದೆ. ಭಾರತೀಯ ಯುದ್ಧ ನೌಕೆಗಳಾದ ಐಎನ್ಎಸ್ ತಾಬರ್ ಮತ್ತು ಐಎನ್ಎಸ್ ಕೊಚ್ಚಿ ಮೊದಲಾದವುಗಳಲ್ಲಿ ಆಕ್ಸಿಜನನ್ನು ಕಳುಹಿಸಿಕೊಟ್ಟಿದೆ. Day 2 of Sea-bridge ops: Medical Consignment from Kuwait to India.#INSTABAR carrying 40 MT Liquid Medical Oxygen, and 600 Oxygen Cylinders departs from Kuwait & is now homebound. Gratitude to all concerned authorities for the … Read more

ನಾವು ಕರ್ನಾಟಕದ ಜನರನ್ನು ಸಂಕಟಕ್ಕೆ ದೂಡಲು ಬಯಸುವುದಿಲ್ಲ! ಕೇಂದ್ರ ಸರಕಾರದ ಮೇಲ್ಮನವಿಯನ್ನು ವಜಾಗೊಳಿಸಿ, ಸುಪ್ರೀಮ್ ಕೋರ್ಟ್ ಹೇಳಿಕೆ

ನವದೆಹಲಿ: ಕರ್ನಾಟಕಕ್ಕೆ ಆಕ್ಸಿಜನ್ ಪೂರೈಸಬೇಕೆಂದು ಕರ್ನಾಟಕ ಹೈಕೋರ್ಟ್, ಕೇಂದ್ರಕ್ಕೆ ನೀಡಿದ್ದ ಆದೇಶವನ್ನು ಸುಪ್ರೀಮ್ ಕೋರ್ಟ್ ಎತ್ತಿ ಹಿಡಿದಿದ್ದು, ಕೇಂದ್ರ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಪೂರೈಸಲಾಗುತ್ತಿರುವ ಆಮ್ಲಜನಕವನ್ನು 965 ಮೆಟ್ರಿಕ್ ಟನ್ನುಗಳಿಂದ 1200 ಮೆಟ್ರಿಕ್ ಟನ್ನುಗಳಿಗೆ ಹೆಚ್ಚಿಸಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಆದರೆ ಹೈಕೋರ್ಟಿನ ಈ ಆದೇಶದ ವಿರುದ್ಧ ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿತ್ತು. ಇದೀಗ ಅಲ್ಲೂ ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ನಾವು ಕರ್ನಾಟಕದ ಜನರನ್ನು ಸಂಕಟಕ್ಕೆ ದೂಡಲು ಬಯಸುವುದಿಲ್ಲ ಎಂದು ಹೇಳಿದ ಸುಪ್ರೀಮ್ ಕೋರ್ಟ್, ಕೇಂದ್ರದ ಮನವಿಯನ್ನು … Read more