ಮದುವೆ ಸಮಾರಂಭಕ್ಕೆ 40 ಜನರ ಮಿತಿ, ಅನುಮತಿ ಪಾಸ್ ಕಡ್ಡಾಯ: ಸರ್ಕಾರ ಆದೇಶ

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ತಗ್ಗಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ವ್ಯಾಪಾರ ವಹಿವಾಟು ನಡೆಸಲು ಸಡಿಲಿಕೆ ನೀಡಿರುವ ಸರ್ಕಾರ ಇದೀಗ 40 ಜನರಿಗೆ ಮಿತಿಗೊಳಿಸಿ ರಾಜ್ಯದಾದ್ಯಂತ ಕಲ್ಯಾಣ ಮಂಟಪ, ಹೋಟೆಲ್‌ ಸಭಾಂಗಣ ಮತ್ತು ರೆಸಾರ್ಟ್‌ಗಳಲ್ಲಿ ಮದುವೆ ಸಮಾರಂಭಗಳನ್ನು ನಡೆಸಲು ಸೋಮವಾರದಿಂದ ಅನುಮತಿ ನೀಡಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ರೂಪಾಂತರಿ ಡೆಲ್ಟಾ ಕೊರೊನಾ ವೈರಾಣು ನಿಯಂತ್ರಣ ಕುರಿತು ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕೈಗೊಂಡ … Read more

ದೇಶದಲ್ಲಿ ‘ಡೆಲ್ಟಾ ಪ್ಲಸ್’ ವೈರಸ್ ಹರಡದಂತೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು: ಸಿದ್ದರಾಮಯ್ಯ ಮನವಿ

ಬೆಂಗಳೂರು: ಕೊರೊನಾ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ಕೊರೋನಾದ ರೂಪಾಂತರಿ ವೈರಸ್ಸು ದೇಶದಲ್ಲಿ ವೇಗವಾಗಿ ಹರಡುವ ಭೀತಿ ಸೃಷ್ಟಿಯಾಗಿದ್ದು, ಇದನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ದೇಶದ ಶೇ.80 ರಷ್ಟು ಜನರಿಗೆ ಲಸಿಕೆ ನೀಡುವವರೆಗೆ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವುದು ಸೂಕ್ತ. ದೇಶದ ಯಾವ … Read more

ಕೋವಿಡ್ ಲಸಿಕೆ ಪಡೆಯುವವರಿಗೆ ಉಚಿತ ಗಾಂಜಾ ವಿತರಣೆ!! ಹೌದು ಈ ದೇಶದಲ್ಲಿ ಹೀಗೂ ಉಂಟು…

ವಾಷಿಂಗ್ಟನ್: ಗಾಂಜಾ ಸೇವನೆ, ಸಾಗಾಣಿಕೆ ತಡೆಯಲು ವಿಶ್ವಾದ್ಯಂತವಿರುವ ಸರಕಾರಗಳು ಪಾಡು ಪಡುತ್ತಿರುವಾಗ ಕೋವಿಡ್ ಲಸಿಕೆ ಪಡೆಯುವವರಿಗೆ ಉಚಿತ ಗಾಂಜಾ ವಿತರಿಸುವ ಆತಂಕಕಾರೀ ತೀರ್ಮಾನವೊಂದು ವರದಿಯಾಗಿದೆ! ಗಾಂಜಾ ಕೊಟ್ಟಾದರೂ ಲಸಿಕೆಯನ್ನು ಪ್ರೋತ್ಸಾಹಿಸುವ ತೀರ್ಮಾನನ್ನು ತೆಗೆದುಕೊಂಡಿರುವುದು ಅಮೇರಿಕಾದ ವಾಷಿಂಗ್ಟನ್ ಸ್ಟೇಟ್. ಹೀಗೆ ಮಾಡಿಯಾದರೂ ಲಸಿಕೆ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸಲು ಅದು ಪಣ ತೊಟ್ಟಿದೆ! 2012 ರಲ್ಲೇ ಅಮೇರಿಕಾದ ಈ ರಾಜ್ಯದಲ್ಲಿ ಗಾಂಜಾ ಮಾರಾಟವನ್ನು ಕಾನೂನು ಬದ್ಧಗೊಳಿಸಲಾಗಿದೆ. ಇದೀಗ ಇಪ್ಪತ್ತೊಂದು ವಯಸ್ಸಿಗಿಂತ ಮೇಲಿರುವ ಯಾರಾದರೂ ಲಸಿಕೆ ಹಾಕಿಸಿದರೆ, ಅಂಥವರಿಗೆ ಉಚಿತವಾಗಿ ಗಾಂಜಾವನ್ನೂ ಪಡೆಯಬಹುದಾಗಿದೆ. ಈ ಮೊದಲು ಲಸಿಕೆ ಪಡೆಯುವವರಿಗೆ ಉಚಿತವಾಗಿ ಮದ್ಯವನ್ನು … Read more

ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ’ : ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ನವದೆಹಲಿ: ದೇಶದ ಜಿಡಿಪಿ ಮತ್ತು ಗರಿಷ್ಠ ಪ್ರಮಾಣದ ನಿರುದ್ಯೋಗದ ವ್ಯತಿರಿಕ್ತ ಅಂಕಿ ಅಂಶಗಳು ಹಾಗೂ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿಗಳ ಕೊರತೆಯನ್ನು ಎತ್ತಿಹಿಡಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ” ಪ್ರಧಾನ ಮಂತ್ರಿಗಳ ಅವಮಾನಕರ ಅಂಶವಾಗಿದೆ ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ 2014 ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಒಂದನ್ನು ಟ್ವೀಟರ್ ನಲ್ಲಿ ಹಾಕಿದ್ದಾರೆ. PM’s hall of … Read more

ಕೋವಿದ್ ದಾಳಿಯ ನಡುವೆ  ಗ್ರಹಿಸಬೇಕಾದ ಕೆಲವು ನೀತಿಗಳು

ಅನುವಾದ : ನಾ ದಿವಾಕರ, ಹಿರಿಯ ಲೇಖಕರು ಮೂಲ : ಸೀಮಾ ಕ್ರಿಸ್ಟಿ (ದ ಹಿಂದೂ 15-5-2021) ಯಾವುದೇ ಒಂದು ಮಾರಣಾಂತಿಕ ಸಾಂಕ್ರಾಮಿಕ ಮನುಕುಲವನ್ನು ಅಪ್ಪಳಿಸಿದಾಗ ಅದು ಬದುಕುಳಿದವರ ನಡುವೆ ಬಿಟ್ಟುಹೋಗುವ ಹೆಜ್ಜೆ ಗುರುತುಗಳಿಗೆ ಇತಿಹಾಸವೇ ಸಾಕ್ಷಿಯಾಗಿ ನಿಲ್ಲುತ್ತದೆ. ಅಳಿದವರು ಗತಕಾಲದ ಭೀಕರತೆಯ ಕತೆ ಹೇಳುತ್ತಿರುವಂತೆ ನಮಗೆ ಭಾಸವಾಗುತ್ತದೆ. ಭಾರತದಲ್ಲಿ ಇಂದು ಕಾಡುತ್ತಿರುವ ಸಾಂಕ್ರಾಮಿಕವು ಮರೆಯಾದನಂತರದಲ್ಲಷ್ಟೇ ನಮಗೆ ಇಂದಿನ ವಾಸ್ತವತೆಗಳು ಎದುರಾಗುತ್ತವೆ. ಆದಾಗ್ಯೂ ಈ ಸುನಾಮಿಯಂತಹ ಪರಿಸ್ಥಿತಿಯನಡುವೆಯೂ ಪ್ರಸ್ತುತ ಸಂದರ್ಭದಲ್ಲಿ ಗಮನಿಸಬಹುದಾದ ಕೆಲವು ನೀತಿಗಳನ್ನು ಅನುಸರಿಸಿದ್ದಲ್ಲಿ ಬಹುಶಃ ಇಂದು ಕಾಣುತ್ತಿರುವ … Read more

ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೈದ್ಯಕೀಯ ವೆಚ್ಚ ಸರ್ಕಾರ ಮರು ಪಾವತಿಸಬೇಕು: ಪ್ರಿಯಾಂಕ್ ಖರ್ಗೆ ಒತ್ತಾಯ

ಕಲಬುರ್ಗಿ: ತಮ್ಮ ಕುಟುಂಬದ ಯೋಗಕ್ಷೇಮವನ್ನೂ ಲೆಕ್ಕಿಸದೇ, ದಿನವಿಡೀ ಸೋಂಕಿತರ ಆರೈಕೆ ಮಾಡುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೈದ್ಯಕೀಯ ವೆಚ್ಚವನ್ನು ಭರಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ಕೊರೋನಾ ಸಾಂಕ್ರಾಮಿಕವು ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದಿನಂಪ್ರತಿ ಸಾವಿರಾರು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಈ ಸಮಯದಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಡಿ ಗ್ರೂಪ್ ನೌಕರರು ತಮ್ಮ … Read more

ಗ್ರಾಮೀಣ ಪ್ರದೇಶಗಳಿಗೆ ಕೊರೊನಾ ಸೋಂಕು ಹರಡದಂತೆ ಸರ್ಕಾರ ಎಚ್ಚೆತ್ತುಕೊಳ್ಳಲಿ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕು ತ್ವರಿತ ಗತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈಗಿನ ಶೇಕಡಾ 55ರಷ್ಟು ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶದಿಂದ ವರದಿಯಾಗುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ತಿಂಗಳ ಹಿಂದೆ ಈ ಪ್ರಮಾಣ ಶೇಕಡಾ 30 ರಷ್ಟಿತ್ತು. ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆ, ತಾಲೂಕು, ಗ್ರಾಮಗಳ ಕಡೆ ಗಮನಹರಿಸಬೇಕಾಗಿದೆ. ಈಗಲೂ ಕಾಲ ಮಿಂಚಿಲ್ಲ, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, … Read more

ಕರ್ನಾಟಕಕ್ಕಂತೂ ಇದು ಕೆಟ್ಟಕಾಲ

ಕರ್ನಾಟಕಕ್ಕಂತೂ ಇದು ಕೆಟ್ಟಕಾಲ.‌‌‌‌..‌!? – ಬಾಲಾಜಿ ಕುಂಬಾರ, ಲೇಖಕರು ಸರ್, ನಾನು ಕಮಲಕ್ಕೆ ಓಟ್ ಹಾಕಿದ್ದೇನೆ, ದಯವಿಟ್ಟು ನನ್ನ ತಾಯಿಗೆ ಆಕ್ಸಿಜನ್ ಕೊಡ್ಸಿ‌‌‌‌.‌‌‌‌‌‌..‌! ಸರಿಯಾದ ಸಮಯಕ್ಕೆ ಬೆಡ್ ಸಿಗದೆ ಸೋಂಕಿತರ ಸಾವು, ಆಕ್ಸಿಜನ್ ಕೊರತೆಯಿಂದ ಹತ್ತಾರು ಜನರ ಸಾವು, ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ, ಬೆಡ್ ಸಿಗದೇ ಫುಟ್ ಪಾತ್ ಮೇಲೆ ನರಳಾಟ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸೋಂಕಿತರ ಸಾವು, ತಂದೆ – ತಾಯಿ ಕಳೆದುಕೊಂಡ ಮಕ್ಕಳು ಅನಾಥ, ಗಂಡ ಸತ್ತ ನಾಲ್ಕು ದಿನಕ್ಕೆ … Read more

ಈಶ್ವರಪ್ಪನವರೇ, ಶಾಸಕರನ್ನು ಖರೀದಿಸಲು ನಿಮ್ಮ ಬಳಿ ಪ್ರಿಂಟಿಂಗ್ ಮಷಿನ್ ಇತ್ತಾ? :ಎಸ್.ಆರ್.ಪಾಟೀಲ್ ತಿರುಗೇಟು

ಬೆಂಗಳೂರು: ಈಶ್ವರಪ್ಪನವರೇ ಲಾಕ್ ಡೌನ್ ನಿಂದ ದುಡಿಯವ ಕೈಗಳಿಗೆ ಕೆಲಸವಿಲ್ಲ. ಬಡವರು, ಕೂಲಿ ಕಾರ್ಮಿಕರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಹತ್ತು ಸಾವಿರ ಪರಿಹಾರ ನೀಡಬೇಕು ಎಂದು ಕೇಳಿದರೆ ಪ್ರಿಂಟಿಂಗ್ ಮಷಿನ್ ಇಲ್ಲಾಂತ ಹೇಳ್ತೀರಲ್ಲ, ಶಾಸಕರನ್ನು ಖರೀದಿಸಲು ನಿಮ್ಮ ಬಳಿ ಪ್ರಿಂಟಿಂಗ್ ಮಷಿನ್ ಇತ್ತಾ..?
ನಾಚಿಕೆಯಾಗಬೇಕು ನಿಮಗೆ ಮತ್ತು ನಿಮ್ಮ ಸರಕಾರಕ್ಕೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತಿರುಗೇಟು ನೀಡಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ಸಿನ ನಾಯಕರೆಲ್ಲರೂ ಒತ್ತಾಯಿಸದ್ದೆವು. ಅದಕ್ಕೆ ಉತ್ತರವಾಗಿ ಸಚಿವ ಕೆ.ಎಸ್.ಈಶ್ವರಪ್ಪನವರು ನಾವೇನು ನೋಟ್ ಪ್ರಿಂಟ್ ಮಾಡ್ತಿದ್ದೀವಾ ಎಂದು ಪ್ರಶ್ನಿಸಿದ್ದಾರೆ. ಸಂವೇದನೆಯೇ ಇಲ್ಲದ ಇಂಥಾ ಸಚಿವರು ಈ ರಾಜ್ಯಕ್ಕೆ ಬೇಕಾ? ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಎಸ್.ಆರ್.ಪಾಟೀಲ್ ಅವರು, ಅಕ್ರಮವಾಗಿ ಶಾಸಕರಿಗೆ ಕೋಟಿ ಕೋಟಿ ದುಡ್ಡು ಕೊಟ್ಟು ಪಕ್ಷಕ್ಕೆ ಕರೆತಂದು ಸರಕಾರ ರಚಿಸುವಾಗ ಈ ಮಾತು ನೆನಪು ಆಗಲಿಲ್ಲವೇ ಈಶ್ವರಪ್ಪನವರೇ..? ಜನರಿಗೆ ಸಹಾಯ ಮಾಡ್ರಿ ಅಂದ್ರೆ ಇಂತಹ ಅಸಡ್ಡೆಯ ಮಾತುಗಳನ್ನು ಹೇಳ್ತಾ ಬರೀ ಕಾಲಹರಣ ಮಾಡ್ತಿದ್ದೀರಾ ಈಶ್ವರಪ್ಪನವರೇ..? ಹಾಗಾದರೆ ಕೇರಳ, ತಮಿಳು ನಾಡು, ಆಂಧ್ರ, ದೆಹಲಿ ಸರ್ಕಾರಗಳು ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿವೆಯೇ..? ಆ ರಾಜ್ಯಗಳು ಆರ್ಥಿಕ ಸಹಾಯ, ಉಚಿತ ಪಡಿತರ, ಉಚಿತ ಕೋವಿಡ್ ವಿಮೆ ಜಾರಿ ಮಾಡಿವೆಯಲ್ಲ. ಆ ರಾಜ್ಯಗಳಲ್ಲಿ ಇದು ಸಾಧ್ಯವಗುವುದಾದರೆ ನಿಮ್ಮ ಡಬಲ್ ಇಂಜಿನ್ ಸರಕಾರಕ್ಕೆ ಸಾಧ್ಯವಿಲ್ಲವಾ..? ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ರಾಮೀಣ ಜನರ ಕಷ್ಟವೇ ಗೊತ್ತಿಲ್ಲದ ನಿಮಗೆ ಗ್ರಾಮೀಣಾಭಿವೃದ್ಧಿ ಖಾತೆ ಸಿಕ್ಕಿದೆ. ನಿಮ್ಮ ಮನೆಯ ಹಣ ತಂದು ಜನರಿಗೆ ಸಹಾಯ ಮಾಡಿ ಎಂದು ಯಾರೂ ಕೇಳಿಲ್ಲ. ಜನ ತೆರಿಗೆ ಕಟ್ಟಿರುವ ದುಡ್ಡಿನಿಂದ ಪರಿಹಾರ ಕೊಡಿ. ದುಡಿಯುವ ವರ್ಗದವರ ಮತ ಬೇಕು, ಅವರ ತೆರಿಗೆ ಬೇಕು. ಆದ್ರೆ ಅವರ ಕಷ್ಟ ಮಾತ್ರ ಬೇಡ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಬಿಪಿಎಲ್ ಕುಟುಂಬದವರಿಗೆ ತಲಾ 5 ಸಾವಿರ ಪರಿಹಾರ ಘೋಷಿಸಿದ ಹರಿಯಾಣ ಸರ್ಕಾರ

ಹರಿಯಾಣ: ಹರಿಯಾಣದಲ್ಲಿ ಕೊರೊನಾ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್​​ ಜಾರಿ ಮಾಡಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಜೀವನ ನಿರ್ವಹಣೆಗೆ ತೊಂದರೆ ಆಗಬಾರದೆಂಬ ಹಿನ್ನೆಲೆ ಸಿಎಂ ಮನೋಹರ್ ಲಾಲ್ ಕಟ್ಟರ್​ ಸರ್ಕಾರ ಕೊರೊನಾ ಪರಿಹಾರ ಹಣ ನೀಡಲು ಮುಂದಾಗಿದೆ. ಹರಿಯಾಣ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್​​​ಹೊಂದಿರುವ ಕುಟುಂಬಗಳಿಗೆ(ಬಡತನ ರೇಖೆಗಿಂತ ಕೆಳಗಿರುವವರಿಗೆ) ಕೊರೊನಾ ಪರಿಹಾರವಾಗಿ ತಲಾ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಗೃಹ ಸಚಿವ … Read more