ಸೆಂಟ್ರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‍ ಸೀಸ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿದ ನೀತಿ ಆಯೋಗ

ನವದೆಹಲಿ: ಸೆಂಟ್ರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗವು ಶಿಫಾರಸು ಮಾಡಿದೆ. ಒಕ್ಕೂಟ ಸರಕಾರದ ಬಜೆಟಿನಲ್ಲಿ ಖಾಸಗೀಕರಣ ಮಾಡುವ ಬಗ್ಗೆ ನಿರ್ದೇಶನ ನೀಡಲಾಗಿತ್ತು. ಅದೇ ರೀತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ 2020-21 ರ ಆರ್ಥಿಕ ವರ್ಷದಲ್ಲಿ ಎರಡು ಸರಕಾರೀ ಬ್ಯಾಂಕುಗಳನ್ನು ಮತ್ತು ಒಂದು ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನೂ ಖಾಸಗೀಕರಣ ಮಾಡುವ ಬಗ್ಗೆ ಹೇಳಿದ್ದರು. ಸರಕಾರದ ಹೊಸ ನೀತಿಯಾದ ‘ಆತ್ಮ ನಿರ್ಭರ್ ಭಾರತ‘ದ ಅನ್ವಯ ಖಾಸಗೀಕರಣದ ಬಗೆಗೆ ನಿರ್ದೇಶನಗಳನ್ನು ನೀಡುವ ಹೊಣೆ ‘ನೀತಿ ಆಯೋಗ‘ದ ಮೇಲಿದೆ.  … Read more

ಬಡವರ ವಸತಿಗೆ ಶೇ.6%ರ ಬಡ್ಡಿ ದರದಲ್ಲಿ ಹೋಮ್ ಲೋನ್: ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು : ಕೇಂದ್ರ ಸರ್ಕಾರ 1.80 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದು, ಫಲಾನುಭವಿಗಳಿಗೆ ಶೇ.6 ಬಡ್ಡಿ ದರದಲ್ಲಿ ಸಾಲ ನೀಡಲು ಬ್ಯಾಂಕ್ ಗಳು ಸಮ್ಮತಿ ಸೂಚಿಸಿವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಸುದೀರ್ಘ ಸಭೆ ನಡೆಸಿದ್ದೇನೆ, ಬ್ಯಾಂಕ್‌ಗಳು ಸಾಲ ನೀಡಲು ಸಮ್ಮತಿ ಸೂಚಿಸಿದ್ದರಿಂದ ವಸತಿ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದ್ದಾರೆ. ಕರ್ನಾಟಕ ಗ್ರಹ ನಿರ್ಮಾಣ ಮಂಡಳಿ ಹಾಗೂ ರಾಜೀವ್ ಗಾಂಧಿ ಗ್ರಹ ನಿರ್ಮಾಣ … Read more

ರೆಪೊ ದರದಲ್ಲಿ ಬದಲಾವಣೆಯಿಲ್ಲ| ಎಂಪಿಸಿ ಸಭೆಯಲ್ಲಿ ಮಹತ್ವದ ನಿರ್ಧಾರ

shakthikanth das

ನವದೆಹಲಿ(05-02-2021): ಎಂಪಿಸಿ ಸಭೆಯಲ್ಲಿ  ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ರೆಪೊ ದರದಲ್ಲಿ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ರೆಪೊ ದರ ಶೇಕಡ 4 ರಷ್ಟು ಮತ್ತು ರಿವರ್ಸ್ ರೆಪೊ ದರ ಶೇಕಡಾ 3.35 ರಷ್ಟೇ ಇದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಬಜೆಟ್ ಬಳಿಕ ಆರು ಸದಸ್ಯರ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಮೊದಲ ಸಭೆಯ ಕೊನೆಯಲ್ಲಿ ಈ ನೀತಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.